ಸುಶಾಂತ್ ಸಿಂಗ್ ರಜಪೂತ್ ಟಿವಿ ಆ್ಯಕ್ಟರ್, ಅವ್ರ ಜತೆ ನಟಿಸಲ್ಲ ಎಂದಿದ್ರಂತೆ ನಟಿ ಪರಣೀತಿ ಚೋಪ್ರಾ

Published : Feb 04, 2024, 04:47 PM ISTUpdated : Feb 04, 2024, 04:50 PM IST
ಸುಶಾಂತ್ ಸಿಂಗ್ ರಜಪೂತ್ ಟಿವಿ ಆ್ಯಕ್ಟರ್, ಅವ್ರ ಜತೆ ನಟಿಸಲ್ಲ ಎಂದಿದ್ರಂತೆ  ನಟಿ ಪರಣೀತಿ ಚೋಪ್ರಾ

ಸಾರಾಂಶ

ಶುದ್ಧ್ ದೇಸಿ ರೊಮಾನ್ಸ್‌ನಲ್ಲಿ ಸುಶಾಂತ್-ಪರಣೀತಿ ನಟಿಸಿದ್ದರು. ಈ ಸಿನಿಮಾ ಭಾರೀ ಸಕ್ಸಸ್ ಪಡೆಯಿತು. ಅದರಂತೆ ಹಸಿ ತೋ ಪಸಿ ಚಿತ್ರ ಕೂಡ ಬಿಗ್ ಹಿಟ್ ಆಯ್ತು. ಇವೆರಡೂ ಸಿನಿಮಾಗಳಲ್ಲಿ ನಟಿ ವಾಣಿ ಕಪೂರ್ ಕೂಡ ನಟಿಸಿದ್ದರೆಂಬುದು ವಿಶೇಷ. 

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮೊದಲ ಬಾರಿಗೆ (ದಿವಂಗತ) ನಟ ಸುಶಾಂತ್‌ ಸಿಂಗ್ ರಜಪೂತ್ ಅವರೊಂದಿಗೆ ನಟಿಸಲು ಆಫರ್ ಬಂದಾಗ ಒಪ್ಪಲಿಲ್ಲವಂತೆ. ಕರಣ್ ಜೋಹರ್ ಹಾಗೂ ಅನುರಾಗ್ ಕಶ್ಯಪ್ ಪ್ರೊಡಕ್ಷನ್‌ ನಿರ್ಮಾಣದ 'ಹಸೀ ತೋ ಪಸೀ' ಸಿನಿಮಾ (Hasee Toh Phasee)ಗೆ ನಟ ಸುಶಾಂತ್ ಸಿಂಗ್ ರಜಪೂತ್ ಜತೆ ನಟಿಸಲು ಒಪ್ಪದ ನಟಿ ಪರಿಣೀತಿ ಚೋಪ್ರಾ ಆಫರ್ ನಿರಾಕಸರಿಸಿದ್ದರಂತೆ. 

ಆದರೆ, ಬಳಿಕ ಅದೇ ನಟಿ ಸುಶಾಂತ್ ಸಿಂಗ್ ಅವರನ್ನು ಯಶ್ ರಾಜ್ ಚೋಪ್ರಾ ಬ್ಯಾನರ್‌ ಅಡಿ ಆದಿತ್ಯ ಚೋಪ್ರಾ ಅವರ ಶುದ್ಧ ದೇಸಿ ರೊಮಾನ್ಸ್ (Shuddh Desi Romance)ಗೆ ರೆಫರ್ ಮಾಡಿದ್ದರಂತೆ. ಹಾಗೆ ಮಾಡಲು ಕಾರಣವೇನಿತ್ತು ಎಂಬುದನ್ನು ನಟಿ ಪರಿಣೀತಿ ಚೋಪ್ರಾ ಇದೀಗ ಬಹಿರಂಗ ಗೊಳಿಸಿದ್ದಾರೆ. 
2013ರಲ್ಲಿ ನಟ ಸುಶಾಂತ್ ಸಿಂಗ್ ಹಿಂದಿಯ ಕೈ ಪೋ ಚೆ (Kai Po Che)ಸಿನಿಮಾ ಮೂಲಕ ಬಾಲಿವುಡ್ ಸಿನಿಮಾರಂಗಕ್ಕೆ ಪ್ರವೇಶ ಪಡೆದರು. 

ಆದರೆ ಅದಕ್ಕೂ ಮೊದಲು ಅವರು ಬ್ಯಾಕ್ ಗ್ರೌಂಡ್ ಡಾನ್ಸರ್ ಆಗಿದ್ದರು ಮತ್ತು ಎರಡು ಸೀರಿಯಲ್‌ನಲ್ಲಿ ನಟಿಸಿದ್ದರು. ಟಿವಿ ಸೀರಿಯಲ್‌ ನಟನೆಯೇ ಸುಶಾಂತ್ ಸಿಂಗ್ ಅವರಿಗೆ ಸಿನಿಮಾ ಉದ್ಯಮಕ್ಕೆ ಬರಲು ದಾರಿ ಮಾಡಿಕೊಟ್ಟಿತ್ತು. 2014ರಲ್ಲಿ 'ರಾಮ್‌ಕಾಮ್ ಹಸಿ ತೋ ಪಸಿ' ಸಿನಿಮಾ ಆಫರ್ ಬಂದಾಗ ನಟ ಅದಾಗಲೇ ಒಂದು ಸಿನಿಮಾ ಮಾಡಿದ್ದರು, ಆದರೆ ಅದು ಬಿಡುಗಡೆ ಕಂಡಿರಲಿಲ್ಲ. 

ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ, ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ; 'ಡೆವಿಲ್' ಪ್ರಕಾಶ್ ವೀರ್ ಮನವಿ

'ಹಸಿ ತೋ ಪಸಿ' ಸಿನಿಮಾದಲ್ಲಿ ಲೀಡ್ ರೋಲ್ ಮಾಡಬೇಕಾಗಿತ್ತು ನಟ ಸುಶಾಂತ್ ಸಿಂಗ್ ರಜಪೂತ್. ಆದರೆ ಅಷ್ಟರಲ್ಲಾಗಲೇ ಆ ಚಿತ್ರಕ್ಕೆ ಹಿರೋಯಿನ್‌ ಅಗಿ ಸೆಲೆಕ್ಟ್ ಆಗಿದ್ದ ನಟಿ ಪರಿಣೀತಿ ಚೋಪ್ರಾ 'ನಾನು ಆ ಟಿವಿ ನಟನೊಂದಿಗೆ ಸ್ಕ್ರೀನ್ ಶೇರ್ ಮಾಡುವುದಿಲ್ಲ' ಎಂದುಬಿಟ್ಟರಂತೆ. ಈ ವಿಷಯವನ್ನು ಸ್ವತಃ ಅನುರಾಗ್ ಕಶ್ಯಪ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. 

ಜಿಯೋ ಸಿನಿಮಾದಲ್ಲಿ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' & ಸಲ್ಮಾನ್ ಖಾನ್ 'ಮುಂಬೈ ಹೀರೋಸ್' ಸಿಸಿಎಲ್‌ 10 ಲೈವ್!

ಬಳಿಕ, ಪರಿಣೀತಿ ಚೋಪ್ರಾಗೆ ನಾಯಕರಾಗಿ ಸಿದ್ಧಾರ್ಥ್ ಮಲ್ಹೋತ್ರಾ  ಬಂದಿದ್ದಂತೆ. ಆದರೆ, ನಟಿ ಪರಿಣೀತಿ ಚೋಪ್ರಾಗೆ 'ಸುಶಾಂತ್ ಈಗ ಟಿವಿ ನಟರಾಗಿ ಉಳಿದಿಲ್ಲ, ಈಗಾಗಲೇ ಅವರು ಸಿನಿಮಾ ನಟರಾಗಿದ್ದಾರೆ. ಅವರ ಸಿನಿಮಾ ಬಿಡುಗಡೆ ಆಗಬೇಕಷ್ಟೇ' ಎಂದು ಅನುರಾಗ್ ಕಶ್ಯಪ್ ತಿಳಿಸಿದ್ದರಂತೆ. ಇದೇ ಸಮಯದಲ್ಲಿ ನಟಿ ಪರಿಣೀತಿ ಚೋಪ್ರಾ ಅವರು ಆದಿತ್ಯಾ ಚೋಪ್ರಾ ಅವರ ಜತೆ ಮೂರು ಸಿನಿಮಾಗಳಿಗೆ ಆಯ್ಕೆಯಾಗಿದ್ದು, ಅದಕ್ಕೆ ನಟ ಸುಶಾಂತ್ ಸಿಂಗ್ ಅವರನ್ನು ರೆಫರ್ ಮಾಡಿದರಂತೆ. 

ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್

ಈ ಕಾರಣದಿಂದ ಬಳಿಕ ಶುದ್ಧ್ ದೇಸಿ ರೊಮಾನ್ಸ್‌ನಲ್ಲಿ ಸುಶಾಂತ್-ಪರಣೀತಿ ನಟಿಸಿದ್ದರು. ಈ ಸಿನಿಮಾ ಭಾರೀ ಸಕ್ಸಸ್ ಪಡೆಯಿತು. ಅದರಂತೆ ಹಸಿ ತೋ ಪಸಿ ಚಿತ್ರ ಕೂಡ ಬಿಗ್ ಹಿಟ್ ಆಯ್ತು. ಇವೆರಡೂ ಸಿನಿಮಾಗಳಲ್ಲಿ ನಟಿ ವಾಣಿ ಕಪೂರ್ ಕೂಡ ನಟಿಸಿದ್ದರೆಂಬುದು ವಿಶೇಷ. 2015ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಯಶ್ ರಾಜ್ ಬ್ಯಾನರ್‌ನಲ್ಲಿ ಮತ್ತೊಂದು ಚಿತ್ರಕ್ಕೆ ಆಫರ್ ಪಡೆದರು. ಇನ್ನೂ ಒಂದು ಚಿತ್ರದ ಆಫರ್ ಕೂಡ ಪಡೆದಿದ್ದರಾದರೂ ಅದು ಕೆಲವು ಕಾರಣಗಳಿಂದ ಬಿಡುಗಡೆ ಕಾಣಲಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!