ಅಕ್ಷಯ್ ಕುಮಾರ್ ಜೊತೆ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್, ಕಾಲೆಳೆದ ಅಖಿಲೇಶ್!

By Santosh Naik  |  First Published Jun 2, 2022, 8:26 PM IST

ರಾಜ ಪೃಥ್ವಿರಾಜ್ ಚೌಹಾಣ್ ಜೀವನವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನದಲ್ಲಿ ಅಕ್ಷಯ್ ಕುಮಾರ್ ನಟಿಸಿರುವ "ಸಾಮ್ರಾಟ್ ಪೃಥ್ವಿರಾಜ್' ಚಿತ್ರವು ಜೂನ್ 3 ರಂದು ದೇಶಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.


ನವದೆಹಲಿ (ಜೂನ್ 2): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ಅವರು ಗುರುವಾರ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ "ಸಾಮ್ರಾಟ್ ಪೃಥ್ವಿರಾಜ್"  (Samrat Prithviraj)ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸಾಮ್ರಾಟ್ ಪೃಥ್ವಿರಾಜ್ ಚಿತ್ರಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ(Uttar Pradesh) ತೆರಿಗೆ ಮುಕ್ತ ಮಾಡಿ ಘೋಷಣೆ ಮಾಡಿದ್ದರು.

ಆದರೆ, ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav), ಟಿಕೆಟ್‌ನೊಂದಿಗೆ ಚಿತ್ರ ನೋಡಿದರೆ ಇನ್ನೂ ಉತ್ತಮವಾಗಿರುತ್ತದೆ ಎಂದು ಎಂದು ಹೇಳಿದ್ದಾರೆ.

"ಚಿತ್ರವನ್ನು ಹಿಂಬದಿಯ ಸೀಟ್ ನಿಂದ ಕುಳಿತು ವೀಕ್ಷಿಸಿದರೆ ಮತ್ತು ಉಚಿತ ಬದಲಿಗೆ ದುಡ್ಡು ಕೊಟ್ಟು ಟಿಕೆಟ್‌ನೊಂದಿಗೆ ನೋಡಿದ್ದರೆ ಉತ್ತಮವಾಗಿ ಕಾಣುತ್ತದೆ ಏಕೆಂದರೆ ಇದು ರಾಜ್ಯದ ಆದಾಯಕ್ಕೆ ಹಾನಿಯಾಗುವುದಿಲ್ಲ" ಎಂದು ಅಖಿಲೇಶ್ ಯಾದವ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

लोकभवन में सपा सरकार के बनाए ‘आधुनिक’ ऑडिटोरियम में भाजपा सरकार की कैबिनेट ‘ऐतिहासिक’ फ़िल्म देख रही है।

वैसे फ़िल्म पीछे बैठकर देखी जाए तो और भी अच्छी दिखती है और मुफ़्त के बजाय टिकट लेकर भी क्योंकि इससे राज्य के राजस्व का नुक़सान नहीं होता। pic.twitter.com/X91Ltscf2g

— Akhilesh Yadav (@yadavakhilesh)


ಐತಿಹಾಸಿಕ ಚಿತ್ರವನ್ನು ವೀಕ್ಷಣೆ ಮಾಡಿದ ಬಳಿಕ, ಸಂಪುಟ ಸಹೋದ್ಯೋಗಿಗಳಿಗೆ ಉತ್ತರ ಪ್ರದೇಶದ ಸದ್ಯದ ಪರಿಸ್ಥಿತಿಯತ್ತಲೂ ಗಮನ ನೀಡುವಂತೆ ಮನವಿ ಮಾಡಲಾಗಿದೆ' ಎಂದು ಅಖಿಲೇಶ್ ಯಾದವ್ ಇನ್ನೊಂದು ಟ್ವೀಟ್ ನಲ್ಲಿ ಕುಹಕವಾಡಿದ್ದಾರೆ. ಸಮಾಜವಾದಿ ನಾಯಕ "ಹಿಂದಿನ ದಿನದ ಹಿಟ್ಟನ್ನು" ಈಗ ರೊಟ್ಟಿ ಮಾಡಲು ಬಳಸೋದಿಲ್ಲ ಎಂದು ಹೇಳಿದರು.

ಚಿತ್ರದ ಪ್ರದರ್ಶನವು ಲಕ್ನೋದ ( Lucknow ) ಲೋಕಭವನದಲ್ಲಿ (Lokhbhavan) ನಡೆದಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಾಯಕಿ ಮಾನುಷಿ ಚಿಲ್ಲರ್ ಮತ್ತು ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಉಪಸ್ಥಿತರಿದ್ದರು. ಅಲ್ಲದೆ, ತಮ್ಮ ಟ್ವೀಟ್ ನಲ್ಲಿ, ಸಮಾಜವಾದಿ ಪಕ್ಷದ (Samajawadi Party ) ಸರ್ಕಾರವು ನಿರ್ಮಾಣ ಮಾಡಿದ್ದ ಅಡಿಟೋರಿಯಂನಲ್ಲಿ ಬಿಜೆಪಿಯ ಕ್ಯಾಬಿನೆಟ್ ಐತಿಹಾಸಿಕ ಚಿತ್ರವನ್ನು ವೀಕ್ಷಣೆ ಮಾಡುತ್ತಿದೆ ಎಂದು ವಂಗ್ಯ ಮಾಡಿದ್ದಾರೆ.

ದೇಶ ಕಂಡ ಶ್ರೇಷ್ಠ ರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನ, ಸಾಧನೆಯನ್ನು ಬಿಂಬಿಸುವ ಚಿತ್ರ ಸಾಮ್ರಾಟ್ ಪೃಥ್ವಿರಾಜ್ ಜೂನ್ 3 ರಂದು ದೇಶಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಅಕ್ಷಯ್ ಕುಮಾರ್, ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸಿದ್ದರೆ, ನಟಿ ಮಾನುಷಿ ಚಿಲ್ಲರ್ ರಾಣ ಸನ್ಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಹಾಗೂ ಸೋನು ಸೂದ್ ಕೂಡ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

Ayodhya: ಕೋಟ್ಯಂತರ ರಾಮಭಕ್ತರ ಶತಮಾನಗಳ ಕನಸು ನನಸು, ಯೋಗಿಯಿಂದ ಗರ್ಭಗುಡಿಯ ಶಿಲಾನ್ಯಾಸ!

ಭಾರತಮಾತೆಯನ್ನು ರಕ್ಷಿಸಲು ತನ್ನ ದೇಹದಲ್ಲಿನ ಪ್ರತಿ ಹನಿ ರಕ್ತವನ್ನು ಸುರಿಸಿದ ಕೊನೆಯ ಹಿಂದೂ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಜೀವನ ಮತ್ತು ಧೈರ್ಯವನ್ನು ಆಧರಿಸಿದ ಚಿತ್ರ ಎಂದು ಅಕ್ಷಯ್ ಕುಮಾರ್ ( Akshay Kumar ) ಹೇಳಿದ್ದಾರೆ.

ರಾಮಮಂದಿರ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ ಯೋಗಿ ಆದಿತ್ಯನಾಥ್!

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಅಕ್ಷಯ್ ಅವರ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಶ್ರೀಮಂತ ಸಂಸ್ಕೃತಿಯನ್ನು ತೋರಿಸಿದ್ದಕ್ಕಾಗಿ ನಿರ್ದೇಶಕರು ಮತ್ತು ಚಿತ್ರತಂಡವನ್ನು ಅಭಿನಂದಿಸಿದರು. "ಅಕ್ಷಯ್ ಕುಮಾರ್ ಅವರು ತಮ್ಮ ಚಿತ್ರದಲ್ಲಿ ಭಾರತದ ಇತಿಹಾಸವನ್ನು ಸುಂದರವಾಗಿ ತೋರಿಸಿದ್ದಾರೆ. ಅದಕ್ಕಾಗಿಯೇ ನಾನು ತಂಡವನ್ನು ಅಭಿನಂದಿಸುತ್ತೇನೆ" ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅದರ ಬೆನ್ನಲ್ಲಿಯೇ ರಾಜ್ಯದಲ್ಲಿ ಚಿತ್ರವನ್ನು ತೆರಿಗೆ ಮುಕ್ತ ಮಾಡಿರುವುದಾಗಿ ಹೇಳಿದರು.
ಉತ್ತರ ಪ್ರದೇಶ ತೆರಿಗೆ ಮುಕ್ತ ಮಾಡಿದ ಬೆನ್ನಲ್ಲಿಯೇ ಮಧ್ಯಪ್ರದೇಶ ( Madhyapradesh ) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಉತ್ತರಾಖಂಡ (Uttarakhand ) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ರಾಜ್ಯಗಳಲ್ಲಿ ಚಿತ್ರವನ್ನು ತೆರಿಗೆ ಮುಕ್ತ ಮಾಡಿದ್ದಾರೆ.

Tap to resize

Latest Videos

 

click me!