ಪತ್ನಿ ವಿರುದ್ಧ ಮಾನನಷ್ಟ ಕೇಸ್ ಗೆದ್ದ Hollywood ನಟ ಜಾನಿ ಡಿಪ್, ನೊಂದ ಪತ್ನಿ

Published : Jun 02, 2022, 10:27 AM ISTUpdated : Jun 02, 2022, 10:43 AM IST
ಪತ್ನಿ ವಿರುದ್ಧ ಮಾನನಷ್ಟ ಕೇಸ್ ಗೆದ್ದ Hollywood ನಟ ಜಾನಿ ಡಿಪ್, ನೊಂದ ಪತ್ನಿ

ಸಾರಾಂಶ

ಜಾನಿ ಡಿಪ್ ಮತ್ತು ಪತ್ನಿ ಆಂಬರ್ ಹರ್ಡ್‌ ಪರಸ್ಪರ ಮಾನನಷ್ಟ ಮೊಕದ್ದಮೆ ಹೊಡಿದ್ದು ಇಬ್ಬರಿಗೂ ಗೆಲುವು ಸಿಕ್ಕಿದೆ. 

ಹಾಲಿವುಡ್ (Hollywood) ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಜಾನಿ ಡಿಪ್‌ (Johnny Deep) ಮತ್ತು ಮಾಜಿ ಪತ್ನಿ ಆಂಬರ್‌ ಹರ್ಡ್‌ ವಿರುದ್ಧ ಸಲ್ಲಿಸಿದ್ದ ಕೌಟುಂಬಿಕ ಹಿಂಸೆ (Domestic Violence) ಆರೋಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಚ್ಚರಿ ಏನೆಂದರೆ, ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ ಜಾನಿ ಡಿಪ್‌ ಕೇಸ್‌ ಕೇಸ್ ಗೆದ್ದರೆ, ಅವರ ಮಾಜಿ ಪತ್ನಿ ಆಂಬರ್ ಹರ್ಡ್‌ ತಮ್ಮ ಪತಿ ವಿರುದ್ಧ ಸಲ್ಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನೂ ಗೆದ್ದಿದ್ದಾರೆ.  ಕೇಸ್‌ ಗೆದ್ದು ಜಾನಿ 116 ಕೋಟಿ ರೂ. ಪರಿಹಾರ ಗಿಟ್ಟಿಸಿಕೊಂಡರೆ, ಆಂಬರ್‌ಗೆ ಕೇವಲ 15 ಕೋಟಿ ಪರಿಹಾರ ಸಿಕ್ಕಿದೆ. 

2011ರಲ್ಲಿ ದಿ ರಮ್ ಡೈರಿ (The Rum Dairy) ಸಿನಿಮಾದಲ್ಲಿ ಆಂಬರ್ ಹರ್ಡ್‌ ಮತ್ತು ಜಾನಿ ಜೊತೆಯಾಗಿಯೇ ನಟಿಸಿದ್ದರು. 2015 ಫೆಬ್ರವರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟರು.  2016ರಲ್ಲಿ ಆಂಬರ್ ವಿಚ್ಛೇದನ ಪಡೆಯಲು ಮುಂದಾದರು, ವರ್ಬಲಿ ಮತ್ತು ಫಿಸಿಕಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರಿನಲ್ಲಿ ಸಲ್ಲಿಸಿದ್ದಾರೆ.  2016ರಲ್ಲಿ ಡಿವೋರ್ಸ್‌ ಸ್ಟೇಟ್‌ಮೆಂಟ್ ಪ್ರಕಾರ 7 ಮಿಲಿಯನ್ ಡಾಲರ್‌ ಕೊಡಲಾಗಿತ್ತು. 2017 ಜನವರಿಯಲ್ಲಿ ಸಂಪೂರ್ಣವಾಗಿ ಸಂಬಂಧ ಕಳೆದುಕೊಂಡರು. ಈ ಹಣವನ್ನು ಮಕ್ಕಳ ಆಸ್ಪತ್ರೆಗೆ ಆಂಬರ್‌ ದಾನ ಮಾಡಿದ್ದರು. 

ಮಾನನಷ್ಟ ಕೇಸ್‌ ಯಾಕೆ?
2018ರಲ್ಲಿ ಆಂಬರ್‌ ಪತ್ರಿಕೆಯೊಂದರಲ್ಲಿ ಕೌಟುಂಬಿಕ ಹಿಂಸೆ ಬಗ್ಗೆ ಲೇಖನ ಬರೆದಿದ್ದರು. ಅದರಲ್ಲಿ ನಾನು ಕೌಟುಂಬಿಕ ದೌರ್ಜನಕ್ಕೆ ಒಳಗಾದವರನ್ನು ಪ್ರತಿನಿಧಿಸುತ್ತೀನಿ ಎಂದಿದ್ದರು. ಪುಸ್ತಕದಲ್ಲಿ ಎಲ್ಲಿಯೂ ಜಾನಿ ಹೆಸರನ್ನೇನೂ ಮೆನ್ಷನ್ ಮಾಡಿರಲಿಲ್ಲ. ಆದರೆ ಆ ವ್ಯಕ್ತಿ ಜಾನಿ ಎಂದು ಜಗತ್ತಿಗೇ ಗೊತ್ತಿತ್ತು. ಈ ಲೇಖನ ಹಿಡಿದುಕೊಂಡು, ಜಾನಿ ಪತ್ನಿ ವಿರುದ್ಧ 50 ಮಿಲಿಯನ್ ಡಾಲರ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಕ್ಕೆ ವಿರುದ್ಧವಾಗಿ ಆಂಬರ್‌ ಕೂಡ, ತಮ್ಮ ಮಾಜಿ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯವೆಸಗಿದ ಆರೋಪದೊಂದಿಗೆ 100 ಮಿಲಿಯನ್ ಡಾಲರ್ ಮಾನನಷ್ಟ ಕೇಸ್ ಹಾಕಿದರು. ಇದಲ್ಲದೆ ಜಾನಿ ಅವರ ವಕೀಲರು ನನ್ನ ಪರ್ಸನಲ್‌ ಲೈಫ್‌ಗೆ ಧಕ್ಕೆ ಆಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪರಿಹಾರ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. 

ನೈಟ್ ಗೌನ್ ಹರಿದು, ಗುಪ್ತಾಂಗಕ್ಕೆ ಬಾಟಲಿ ತುರುಕಿದ್ದ; ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಗಂಭೀರ ಆರೋಪ

ಫೇರ್‌ಫ್ಯಾಕ್ಸ್‌ ಕೋರ್ಟ್‌ನಲ್ಲಿ ಆರು ವಾರಗಳ ಕಾಲ ಇವರಿಬ್ಬರ ದೂರಿನ ವಿಚಾರಣೆ ನಡೆದಿತ್ತು. ಈ ಕೋರ್ಟ್‌ ಚರ್ಚೆಯನ್ನು ರೆಕಾರ್ಡಿಂಗ್ ಕೂಡ ಮಾಡಲಾಗಿದ್ದು, ಕೆಲವೊಂದು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಆಂಬರ್ ಬೇಸರ:
'ಇವತ್ತು ನನಗಾಗುತ್ತಿರುವ ಬೇಸರವನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ಬೆಟ್ಡದಷ್ಟು ಸಾಕ್ಷಿಗಳು ಇದ್ದರೂ ಜೂರಿಗೆ ಸರಿಯಾದ ನಿಲುವು ತೆಗೆದುಕೊಳ್ಳಲು ಆಗಲಿಲ್ಲ, ಇದಕ್ಕೆ ಕಾರಣವೇ ನನ್ನ ಎಕ್ಸ್‌ ಪತಿಗೆ ಇರುವ ಪ್ರಭಾವ (Influence) ಮತ್ತು ಪವರ್ (Power). ಈ ತೀರ್ಪಿನಿಂದ ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂದು ನೆನಪಿಸಿಕೊಂಡರೆ, ನಿರಾಶೆಯಾಗಿದೆ. ಮಹಿಳೆ ವಿರುದ್ಧ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಗಟ್ಟಿಯಾಗಿಸಿದೆ.

ಹಾಲಿವುಡ್‌ ಖ್ಯಾತನಟನ ಹೆಂಡತಿ ಜೊತೆ ಎಲಾನ್ ಮಸ್ಕ್ ಥ್ರೀಸಮ್‌ ಮಾಡಿದ ಆರೋಪ

'ಜಾನಿಗಿರುವ ಪ್ರಭಾವದಿಂದ ಸಾಕ್ಷಿಗಳನ್ನು ಪರಿಗಣಿಸದೇ, ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ. ಈ ಕೇಸ್‌ ಸೋತೆ ಎನ್ನುವ ಬೇಸರವಿದೆ. ಈ ಮೂಲಕ ಹೆಣ್ಣಾಗಿ ನನಗಿರುವ ಹಕ್ಕು ಕಳೆದುಕೊಂಡಿರುವೆ,' ಎಂದು ಆಂಬರ್‌ ಬರೆದುಕೊಂಡಿದ್ದಾರೆ.

'ನ್ಯಾಯಾಧೀಶರ ತಂಡ ನನಗೆ ಮರುಹುಟ್ಟು ಕೊಟ್ಟಿದೆ,' ಎಂದು ಜಾನಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?