Sidhu Moose Wala Death ಎರಡು ದಿನದಲ್ಲೇ ರಿಸಲ್ಟ್, ಸಿಧು ಹತ್ಯೆಗೆ ಮೊಳಗಿತು ಪ್ರತೀಕಾರ ಎಚ್ಚರಿಕೆ!

By Suvarna News  |  First Published Jun 1, 2022, 9:15 PM IST
  • ಸಿಧು ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಎಚ್ಚರಿಕೆ
  • ಗ್ಯಾಂಗ್‌ಸ್ಟರ್ ನೀರಜ್ ಬಾವನಾ ಸಾಮಾಜಿಕ ಜಾಲತಾಣದಲ್ಲಿ ವಾರ್ನಿಂಗ್
  • ಎರಡೇ ದಿನದಲ್ಲಿ ಫಲಿತಾಂಶ ನೀಡುವುದಾಗಿ ಎಚ್ಚರಿಕೆ

ಪಂಜಾಬ್(ಜೂ.01): ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್ ವಾರ್ ಹೆಚ್ಚಾಗಿದೆ ಅನ್ನೋದು ಸಿಧು ಮೂಸೆ ವಾಲಾ ಹತ್ಯೆಯಿಂದ ಬಯಲಾಗಿದೆ. ಹಾಡಹಗಲೇ ಗುಂಡಿನ ದಾಳಿ, ದರೋಡೆ ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ಸಿಧು ಮೂಸೆ ವಾಲಾ ಹತ್ಯೆ ಬಳಿಕವೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಸಿಧು ಹತ್ಯೆಗೆ ಎರಡನೇ ದಿನದಲ್ಲಿ ಪ್ರತಿಕಾರ ತೀರಿಸುವುದಾಗಿ ಗ್ಯಾಂಗ್‌ಸ್ಟರ್ ಎಚ್ಚರಿಕೆ ನೀಡಿದ್ದಾನೆ.

ಗ್ಯಾಂಗ್‌ಸ್ಟರ್ ನೀರಜ್ ಬಾವನಾ ಸೇರಿದ ಸಾಮಾಜಿಕ ಜಾಲತಾಣ ಖಾತೆಯಿಂದ ಈ ಪೋಸ್ಟ್ ಮಾಡಲಾಗಿದೆ. ಸಿಧು ಮೂಸೆವಾಲಾ ನನ್ನ ಹೃದಯ, ಸಹೋದರ, ಈ ಸಾವಿಗೆ ಎರಡೇ ದಿನದಲ್ಲಿ ಪ್ರತಿಕಾರ ತೀರಿಸುವುದಾಗಿ ಪೋಸ್ಟ್‌ನಲ್ಲಿ ಹೇಳಲಾಗಿದೆ.

Tap to resize

Latest Videos

ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರಿನ ನಂಬರ್ ಬಳಸಿ ಸಿಧು ಮೇಲೆ ದಾಳಿ!

ಗ್ಯಾಂಗ್‌ಸ್ಟರ್ ನೀರಜ ಬಾವನ ತಂಡದ ಮತ್ತೊಬ್ಬ ಸದಸ್ಯ ಬುಪ್ಪಿ ರಾನಾ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದಾನೆ. ಇದರ ಹಿಂದಿರುವ ಎಲ್ಲರನ್ನು ಮುಗಿಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಬಹಿರಂಗವಾಗಿ ಗ್ಯಾಂಗ್‌ಸ್ಟರ್‌ಗಳ ವಾರ್ನಿಂಗ್ ಇದೀಗ ಸರ್ಕಾರದ ತಲೆನೋವಾಗಿದೆ. ಸಿಧು ಹತ್ಯೆಗೆ ಪಂಜಾಬ್ ಆಪ್ ಸರ್ಕಾರವೂ ಹೊಣೆಯಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸ್ಕೆಚ್ ರೆಡಿಯಾಗಿದೆ ಅನ್ನೋ ಮಾಹಿತಿಯೂ ಪೊಲೀಸರ ಕೈಸೇರಿದೆ.

ಸಿಧು ಇಲ್ಲದೆ ಆಹಾರ ಸೇವಿಸಲು ನಿರಾಕರಿಸಿದ ಸಾಕು ನಾಯಿ
ಪಂಜಾಬಿ ಗಾಯಕ್, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಬಳಿಕ ಸಿಧು ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೇ.29 ರಂದು ನಡೆದ ದುಷ್ಕರ್ಮಿಗಳ ದಾಳಿಯಲ್ಲಿ ಸಿಧು ಮೂಸೆ ವಾಲಾ ಹತ್ಯೆಯಾಗಿದ್ದರು. ಸಿಧು ಇಲ್ಲದೆ ಇದೀಗ ಸಿಧು ಸಾಕು ನಾಯಿಗಳು ಆಹಾರ ಸೇವಿಸುತ್ತಿಲ್ಲ. ಕಳೆದೆರಡು ದಿನದಿಂದ ಸಿಧು ಸಾಕು ನಾಯಿಗಳು ಆಹಾರವಿಲ್ಲದೇ, ಇತ್ತ ಮಾಲೀಕನೂ ಇಲ್ಲದೆ ಮೂಕರೋಧನೆ ಅನುಭವಿಸುತ್ತಿದೆ.

ಸಿಧು ಮೂಸೆ ವಾಲ ಮನೆಯಲ್ಲಿ ಎರಡು ಸಾಕ ನಾಯಿಗಳಿವೆ. ಇದಕ್ಕೆ ಶೇರಾ ಹಾಗೂ ಬಗೇರಾ ಎಂದು ಹೆಸರಿಡಲಾಗಿದೆ. ಸಿಧು ಪ್ರೀತಿಯಿಂದ ಎರಡು ನಾಯಿ ಮರಿಗಳನ್ನು ತಂದು ಸಾಕಿದ್ದಾರೆ. ಸಿಧು ಮೂಸೆ ವಾಲಾ ಶೂಟಿಂಗ್, ರಾಜಕೀಯ ಎಂದು ಮನೆಯಿಂದ ಹೊರಗಡೆ ಹೊರಟರೆ, ಮರಳಿ ಬರುವ ವರೆಗೂ ಈ ಸಾಕು ನಾಯಿಗಳು ಕಾಯುತ್ತಾ ಆಹಾರ ಸೇವಿಸದೆ ಇರುತ್ತಿತ್ತು. ಇದೀಗ ಸಿಧು ಮೂಸೆ ವಾಲ ಆಗಮಿಸುತ್ತಾನೆ ಅನ್ನೋ ಕಾಯುವಿಕೆಯೊಂದಿಗೆ ಮೂಕ ಪ್ರಾಣಿಗಳು ಆಹಾರ ಸೇವಿಸದೆ ರೋಧಿಸುತ್ತಿದೆ.

ಗಾಯಕ ಸಿದು ಹತ್ಯೆ ಮತ್ತು ಮುನ್ನಲೆಗೆ ಬಂದ ಪಂಜಾಬ್‌ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ

ಭಾನುವಾರದಿಂದ ಎರಡು ನಾಯಿಗಳು ಒಂದು ತುತ್ತು ಆಹಾರ ಸೇವಿಸಿಲ್ಲ. ಮಾಲೀಕನಿಲ್ಲದೆ ರೋಧಿಸುತ್ತಾ ನೆಲದಲ್ಲೇ ಮಲಗಿದೆ. ಈ ವಿಡಿಯೋ ವೈರಲ್ ಆಗಿದೆ. ಹೃದಯವಿದ್ರಾವಕ ವಿಡಿಯೋ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಅಭಿಮಾನಿಗಳು ಮನೆಯತ್ತ ಜಮಾಯಿಸುತ್ತಿದ್ದಾರೆ. 

 ಶೋಕಸಾಗರ ನಡುವೆ ಸಿಧು ಮೂಸೆವಾಲಾ ಅಂತ್ಯಕ್ರಿಯೆ
ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಅವರ ಸ್ವಗ್ರಾಮ ಪಂಜಾಬ್‌ನ ಮಾನ್ಸಾದಲ್ಲಿ ನಡೆದಿದೆ.28 ವರ್ಷದ ಗಾಯಕ, ಕಾಂಗ್ರೆಸ್‌ ನಾಯಕರಾದ ಮೂಸೆವಾಲಾ ಅವರು ಭಾನುವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಮಾನ್ಸಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಿಧು ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮೂಸಾ ಗ್ರಾಮದಲ್ಲಿ ಬಿಗಿ ಭದ್ರತೆ ನಡುವೆ ಅಂತ್ಯಕ್ರಿಯೆ ನಡೆಸಲಾಗಿದೆ.

click me!