ನಟಿ ಊರ್ವಶಿ ರೌಟೇಲಾ ಅವರ ಸ್ನಾನದ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಇದೇ ವಿಷಯವಾಗಿ ಮ್ಯಾನೇಜರ್ ಜೊತೆ ಚರ್ಚಿಸುತ್ತಿರುವ ಆಡಿಯೋ ಲೀಕ್ ಆಗಿದೆ. ಏನಿದೆ ಇದರಲ್ಲಿ?
ಬಾಲಿವುಡ್ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿಕೊಂಡು ಬಂದು ಸುದ್ದಿಯಾಗಿದ್ದರು. ಆದರೆ ಇದೀಗ ನಟಿ, ಈಗ ಬೇರೆಯದ್ದೇ ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ. ಅದೇನೆಂದರೆ, ಇವರು ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲ್‌ಚಲ್ ಸೃಷ್ಟಿಸುತ್ತಿದೆ.
ಇದು ಪಬ್ಲಿಸಿಟಿ ಸ್ಟಂಟ್ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಇದು ಸಿನಿಮಾದ ಪ್ರಮೋಷನ್‌ಗೆ ಮಾಡುತ್ತಿರುವುದು, ಈ ದೃಶ್ಯ ಸಿನಿಮಾದ್ದು ಇರಬೇಕು ಎನ್ನುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್‌ರೂಮ್‌ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯುವಂತೆ ಕೈಹಾಕಿದ್ದಾರೆ. ಅಷ್ಟರಲ್ಲಿ ವಿಡಿಯೋ ಕಟ್ ಆಗಿದೆ. ಆದ್ದರಿಂದ ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ, ಇದೇನೂ ವಿಡಿಯೋ ಲೀಕ್ ಅಲ್ಲ ಎನ್ನುತ್ತಿದ್ದಾರೆ ಹಲವರು.
ಕತ್ರಿನಾ ಕೈಫ್ ಹುಟ್ಟುಹಬ್ಬದಂದೇ ಮಂಚದ ವಿಷಯ ರಿವೀಲ್ ಮಾಡಿದ ಪತಿ ವಿಕ್ಕಿ ಕೌಶಲ್!
ಅದೇನೇ ಇದ್ದರು. ಇದೀಗ ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಲೀಕ್ ಮಾಡಲಾಗಿದೆ. ಇದರಲ್ಲಿ ಅವರು, ತಮ್ಮ ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ಚರ್ಚೆ ನಡೆಸಿರುವುದನ್ನು ನೋಡಬಹುದು. ಸ್ನಾನದ ಮನೆಯ ವಿಡಿಯೋ ಲೀಕ್ ಆಗಿರುವುದಕ್ಕೆ ಸಂಬಂಧಿಸಿದಂತೆ ನಟಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಈ ವಿಷಯವನ್ನು ತಮ್ಮ ಮ್ಯಾನೇಜರ್ ಜೊತೆ ಮಾತನಾಡಿದ್ದು, ಅದರಲ್ಲಿ ಈ ವಿಷಯವನ್ನು ಅವರಲ್ಲಿ ಕೇಳಿದ್ದು, ಇದು ಹೇಗೆ ಲೀಕ್ ಆಯಿತು ಎಂದು ಪ್ರಶ್ನಿಸಿರುವುದನ್ನು ಕೇಳಬಹುದು.
ಈಗ ಲೀಕ್ ಆಗಿರುವ ವಿಡಿಯೋದಲ್ಲಿ ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ನಡುವಿನ ಮಾತುಕತೆ ಇದೆ. ಇದರಲ್ಲಿ ಘಟನೆಯನ್ನು ಊರ್ವಶಿ ಖಂಡಿಸಿದ್ದಾರೆ. ಈ ಫೋನ್ ಕಾಲಿನಲ್ಲಿ ಊರ್ವಶಿ ಮ್ಯಾನೇಜರ್‌ಗೆ ಈ ವಿಡಿಯೋ ಅನ್ನು ನೀವು ನೋಡಿರುವಿರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಹೌದು ಎಂದಿದ್ದಾರೆ. ಆಗ ನಟಿ, ಇಂಥ ಗೌಪ್ಯ ವಿಡಿಯೋಗಳು ಹೇಗೆ ಹೊರಬರುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ನಿಮ್ಮ ಜೊತೆ ಮಾತನಾಡಬೇಕು ಈ ವಿಷಯದ ಕುರಿತು ಎಂದಿದ್ದಾರೆ. ಆ ಬಳಿಕ ಮ್ಯಾನೇಜರ್, ಸಾಮಾಜಿಕ ಮಾಧ್ಯಮದಿಂದ ವೀಡಿಯೊವನ್ನು ಡಿಲೀಟ್ ಮಾಡಲು ತಂಡವು ಕೆಲಸ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ವಿಷಾದನೀಯ ಘಟನೆ ಎಂದಿರುವ ನಟಿ, ದೂರವಾಣಿ ಮೂಲಕ ಚರ್ಚಿಸುವ ಬದಲು ವೈಯಕ್ತಿಕವಾಗಿ ಚರ್ಚಿಸಲು ಹೇಳಿದ್ದಾರೆ. ಏತನ್ಮಧ್ಯೆ, ಊರ್ವಶಿ ಕಳೆದ ವಾರ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ನಂದಮೂರಿ ಬಾಲಕೃಷ್ಣ ಅವರ ಮುಂಬರುವ ತೆಲುಗು ಚಿತ್ರ NBK 109 ಗಾಗಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ನಟಿ ಗಾಯಗೊಂಡಿದ್ದಾರೆ. ಇದಾದ ಬಳಿಕ ಈ ವಿಡಿಯೋ, ಆಡಿಯೋ ಲೀಕ್ ಆಗಿರುವ ಹಿನ್ನೆಲೆಯಲ್ಲಿ, ಇವೆಲ್ಲಾ ಪಬ್ಲಿಸಿಟಿ ಸ್ಟಂಟ್ ಎಂದೇ ದೊಡ್ಡ ವರ್ಗ ಹೇಳುತ್ತಿದೆ.
ಎಲ್ಲಾ ಕಾಣುವ ಬಟ್ಟೆ ತೊಟ್ಟು ಅನನ್ಯಾ ಪೇಚಾಟ: ಮಾನ ಮುಚ್ಚಲು ವಿಜಯ್ ದೇವರಕೊಂಡ ಮಾಡಿದ್ದೇನು? ವಿಡಿಯೋ ವೈರಲ್