ಹುಟ್ಟುಹಬ್ಬದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ನಟಿ ಊರ್ವಶಿ ರೌಟೇಲಾ: ವಿಷ್ಯ ಕೇಳಿದ್ರೆ ಬೇಸ್ತು ಬೀಳ್ತಿರಾ!

By Suvarna News  |  First Published Feb 25, 2024, 1:46 PM IST

ಹುಟ್ಟುಹಬ್ಬ ಮಾಡುವ ಮೂಲಕ  ವಿಶ್ವ ದಾಖಲೆ ಸೃಷ್ಟಿಸಿದ್ದಾರೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ: ಅಂಥದ್ದೇನು ಮಾಡಿದ್ರು ನೋಡಿ! 
 


ಬಾಲಿವುಡ್ ನಟಿ ಮತ್ತು ರೂಪದರ್ಶಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಸುಂದರವಾದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಊರ್ವಶಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ ತಡರಾತ್ರಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅವರು 24 ಕ್ಯಾರಟ್​ ಚಿನ್ನದಿಂದ ಅಲಂಕರಿಸಿದ ಗೋಲ್ಡನ್ ಕೇಕ್ ಅನ್ನು ಕಟ್ ಮಾಡಿದ್ದಾರೆ. ಇದರ ಹಲವಾರು ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ.  ಈ ಸಂದರ್ಭದಲ್ಲಿ  ಗಾಯಕ-ರ್ಯಾಪರ್ ಯೋ ಯೋ ಹನಿ ಸಿಂಗ್ ಕೂಡ ಇದ್ದರು. 

ಇವರ ಫೋಟೋ ನೋಡಿ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಇದಕ್ಕೆ ಕಾರಣ,  24 ಕ್ಯಾರಟ್​ ಚಿನ್ನದ ಕೇಕ್​. ಅಷ್ಟಕ್ಕೂ ನಟಿ ತಮ್ಮ ಹುಟ್ಟುಹಬ್ಬದ ದಿನ  ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಪ್ರತಿವರ್ಷವೂ ಒಂದಲ್ಲಾ ಒಂದು ರೀತಿಯಲ್ಲಿ ವಿಪರೀತ ಹಣ ಖರ್ಚು ಮಾಡಿ  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಫೋಟೋಗಳು ಹಾಗೂ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇದರಲ್ಲಿ ಹನಿ ಸಿಂಗ್ ಊರ್ವಶಿ ಅವರ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿ, ಅವರನ್ನು  ತಬ್ಬಿಕೊಂಡು ಸಂಭ್ರಮಿಸುವುದನ್ನು ನೋಡಬಹುದು.  ಈ 24 ಕ್ಯಾರಟ್​ ಚಿನ್ನದ ಲೇಪಿತ ಕೇಕ್ ಅನ್ನು 'ಲವ್ ಡೋಸ್ 2' ಸೆಟ್‌ನಲ್ಲಿ ಕತ್ತರಿಸಿದ್ದೇನೆ ಎಂದು ನಟಿ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ವಾಸ್ತವವಾಗಿ, ಹನಿ ಸಿಂಗ್ ಅವರು ನಟಿ ಊರ್ವಶಿ ಅವರ ಮುಂದಿನ ಸಂಗೀತ ವಿಡಿಯೋ 'ಲವ್ ಡೋಸ್ 2' ನೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿಯೇ ಊರ್ವಶಿ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಅಂದಹಾಗೆ ಈ ಕೇಕ್​ ಕೂಡ ಹನಿ ಸಿಂಗ್​ ಅವರೇ ತರಿಸಿದ್ದು ಎನ್ನಲಾಗಿದೆ. ಅಷ್ಟಕ್ಕೂ ಈ ಕೇಕ್​ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ ಮೂರು ಕೋಟಿ ರೂಪಾಯಿಯಂತೆ!

Tap to resize

Latest Videos

ಶಾರುಖ್​ ಬಳಿ ಇರೋ ಮೊಬೈಲ್​ ಫೋನ್​ ಎಷ್ಟು ಗೊತ್ತಾ? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಿರ್ಮಾಪಕ

ಹುಟ್ಟುಹಬ್ಬದ ಕೇಕ್​ ಕಟ್​ ಮಾಡುವ ಸಂದರ್ಭದಲ್ಲಿ ನಟಿ,  ಕೆಂಪು ಬಣ್ಣದ ಥಾಯ್ ಸ್ಲಿಟ್ ಡ್ರೆಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಊರ್ವಶಿ ಕೈಯಲ್ಲಿ ಬಳೆ, ಕುತ್ತಿಗೆಗೆ ಹಾರ ಮತ್ತು ತೆರೆದ ಕೂದಲಿನೊಂದಿಗೆ ತುಂಬಾ ಸುಂದರವಾಗಿ ಪೋಸ್​ ಕೊಟ್ಟಿದ್ದು, ಅಭಿಮಾನಿಗಳು ಸೂಪರ್​ ಎಂದು ಕಮೆಂಟ್​ ಹಾಕುತ್ತಿದ್ದಾರೆ. ಕುತೂಹಲದ ವಿಷಯ ಎಂದರೆ ಕಳೆದ ವರ್ಷ ನಟಿ ಹುಟ್ಟುಹಬ್ಬದಂದು ಡೈಮಂಡ್ ಕೇಕ್ ಅನ್ನು ಕಟ್ ಮಾಡಿದ್ದರು. ಅದನ್ನು 24-ಕ್ಯಾರಟ್​ ಚಿನ್ನದ ಕಪ್‌ಕೇಕ್‌ಗಳಿಂದ ಅಲಂಕರಿಸಲಾಗಿತ್ತು.

ಅಷ್ಟಕ್ಕೂ ನಟಿ ಈಚೆಗೆ ಭಾರಿ ಸದ್ದು ಮಾಡಿದ್ದು, ಚಿನ್ನದ ಮೊಬೈಲ್​ ಫೋನ್​ ಕಳೆದುಕೊಂಡದ್ದರಿಂದ. ಕಳೆದ ಅಕ್ಟೋಬರ್​ 14ರಂದು ಗುಜರಾತ್​ನ ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯಾವಳಿ ವೇಳೆ, ಕ್ರೀಡೆ ನೋಡಲು ತೆರಳಿದ್ದ ಬಾಲಿವುಡ್​ ಖ್ಯಾತ ನಟಿ ಊರ್ವಶಿ ರೌಟೇಲಾ (Uravashi Rautela)  ಅವರು ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದರು.  ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದ ಊರ್ವಶಿಯವರು ಭಾರತ ಗೆದ್ದ ಖುಷಿಯಲ್ಲಿ ಇರುವಾಗಲೇ ಫೋನ್​ ಕಳೆದುಕೊಂಡಿದ್ದರು,  ಈ ಕುರಿತು ಅಂದೇ ಅವರು ತಮ್ಮ  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನ್ನ 24 ಕ್ಯಾರಟ್​ ಚಿನ್ನದ ಐಫೋನ್ ಅನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ  ಬರೆದುಕೊಂಡಿದ್ದರು. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು. ಆದರೆ ಕೊನೆಗೂ ಫೋನ್​ ಸಿಗಲಿಲ್ಲ ಎಂದು ಮತ್ತೆ ಬರೆದುಕೊಂಡಿದ್ದರು. 

ಗುರುಗಳ ಮಾತನ್ನು ತಪ್ಪಾಗಿ ಅರ್ಥೈಸಿ ಮಗನಿಗೆ 'ಅಕಾಯ್' ಹೆಸರಿಟ್ರಾ ವಿರುಷ್ಕಾ? ಇವ್ರು ಏನಂತಾರೆ ನೋಡಿ!

 

click me!