ನಟ ಶಾರುಖ್ ಖಾನ್ ಅವರು ಜೀರೋದಿಂದ ಹೀರೋ ಆಗಿ ಬೆಳೆದವರು. ಬಾಲಿವುಡ್ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಗಿಟ್ಟಿಸಲೂ ಕೂಡ ಒಂದು ಕಾಲದಲ್ಲಿ ಬಹಳಷ್ಟು ಕಷ್ಟಪಟ್ಟಿರುವ ನಟ. ಅವರಿಗೆ ಹೀರೋ ಚಾನ್ಸ್ ಸಿಗಲು ಬಹಳಷ್ಟು ಸೈಕಲ್ ಹೊಡೆಯಬೇಕಾಯಿತು.
ಬಾಲಿವುಡ್ ನಟ ಶಾರುಖ್ ಖಾನ್ ಅವರು ತುಂಬಾ ಒಳ್ಳೆಯ ಮಾತೊಂದನ್ನು ಹೇಳಿದ್ದಾರೆ. ವೇದಿಕೆಯೊಂದರಲ್ಲಿ ಮಾತನಾಡುತ್ತಿದ್ದ ನಟ ಶಾರುಖ್, 'ಜೀವನದಲ್ಲಿ ಸಕ್ಸಸ್‌ಗಿಂತಲೂ ಫೇಲ್ಯೂರ್ ಒಳ್ಳೆಯದು, ಅದೇ ಗುಡ್ ಟೀಚರ್' ಎಂದಿದ್ದಾರೆ. ಶಾರುಖ್ ಖಾನ್ ಯಾಕೆ ಹಾಗೆ ಹೇಳಿದ್ದು, ಹಾಗಿದ್ರೆ ಎಲ್ಲರೂ ಯಾಕೆ ಸಕ್ಸಸ್ ಆಗಲು ಬಯಸುತ್ತಾರೆ? ಅವರಿಗೆಲ್ಲರಿಗೂ ಬುದ್ದಿಯಿಲ್ಲವೇ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಬಹುದು. ಆದರೆ ಅದಕ್ಕೆ ಸ್ವತಃ ಶಾರುಖ್ ಅವರೇ ಉತ್ತರವನ್ನೂ ನೀಡಿದ್ದಾರೆ.
ವೇದಿಕೆಯಲ್ಲಿ ಮಾತನಾಡುತ್ತ ನಟ ಶಾರುಖ್ 'ಫೇಲ್ಯೂರ್ ಒಳ್ಳೆಯ ಟೀಚರ್. ಸಕ್ಸಸ್ ಯಾವತ್ತೂ ನಿಮ್ಮಲ್ಲಿ ಹೆಮ್ಮೆ, ಅಹಂಕಾರ ಮೂಡಿಸಬಹುದು. ಆದರೆ ಫೇಲ್ಯೂರ್ ನಿಮ್ಮಲ್ಲಿ ವಿವೇಕ, ಪ್ರಜ್ಞೆ ಮೂಡಿಸುತ್ತದೆ. ಸಕ್ಸಸ್ ನಿಮ್ಮನ್ನು ಮುಂದಕ್ಕೆ ಎಲ್ಲಿಯೂ ಕರೆದುಕೊಂಡು ಹೋಗುವುದಿಲ್ಲ. ಆದರೆ ಅಪಜಯ ನಿಮ್ಮಲ್ಲಿ ಯಾವುದರ ಕೊರತೆಯಿದೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ನೀವು ಆ ದಿಸೆಯಲ್ಲಿ ಪ್ರಯತ್ನಪಟ್ಟರೆ ನಿಮಗೆ ಮುಂದೊಂದು ದಿನ ಜಯ ಸನಿಹದಲ್ಲೇ ಸಿಗಲಿದೆ.
ಅಪ್ಪು-ಉಪ್ಪಿ ಓಲ್ಡ್ ವೀಡೀಯೋ ಮತ್ತೆಮತ್ತೆ ವೈರಲ್; ಪುನೀತ್ ಪ್ರಶ್ನೆ, ಉಪೇಂದ್ರ ಉತ್ತರಕ್ಕೆ ಶಾಕ್ ಆಗ್ತೀರಾ!
ಶಾರುಖ್ ಖಾನ್ 'ಸಕ್ಸಸ್ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಶಿಕ್ಷಕ. ಆದರೆ ಫೆಲ್ಯೂರ್ ಅತ್ಯಂತ ಒಳ್ಳೆಯ ಶಿಕ್ಷಕ. ಅದು ನಿಮಗೆ ಯಾವ ಏರಿಯಾದಲ್ಲಿ ಇನ್ನೂ ಎಷ್ಟು ಹೆಚ್ಚಿನ ಪ್ಯತ್ನ ಬೇಕು ಎಂಬುದನ್ನು ತಿಳಿಸುತ್ತದೆ. ನೀವು ಲೈಫ್‌ನಲ್ಲಿ ಫೇಲ್ ಆದಾಗ ಅತ್ಯಂತ ಜಾಗರೂಕರಾಗಿ ಇರುತ್ತೀರಿ. ನೀವು ಜೀವನದಲ್ಲಿ ಎಷ್ಟು ಜಾಗರೂಕರಾಗಿ ಇರುತ್ತೀರೋ ಅಷ್ಟು ಹೆಚ್ಚು ಎಚ್ಚರದಿಂದ ಇರುತ್ತೀರಿ. ಎಚ್ಚರಿಕೆಯಿಂದ ಇರುವುದು ಯಾವತ್ತಿಗೂ ಒಳ್ಳೆಯದು' ಎಂದಿದ್ದಾರೆ ನಟ ಶಾರುಖ್ ಖಾನ್.
ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!
ಅಂದಹಾಗೆ, ನಟ ಶಾರುಖ್ ಖಾನ್ ಅವರು ಜೀರೋದಿಂದ ಹೀರೋ ಆಗಿ ಬೆಳೆದವರು. ಬಾಲಿವುಡ್ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಗಿಟ್ಟಿಸಲೂ ಕೂಡ ಒಂದು ಕಾಲದಲ್ಲಿ ಬಹಳಷ್ಟು ಕಷ್ಟಪಟ್ಟಿರುವ ನಟ. ಅವರಿಗೆ ಹೀರೋ ಚಾನ್ಸ್ ಸಿಗಲು ಬಹಳಷ್ಟು ಸೈಕಲ್ ಹೊಡೆಯಬೇಕಾಯಿತು. ಒಮ್ಮೆ ಹಿರೋ ಆಗಿ ಸಕ್ಸಸ್‌ಫುಲ್ ನಟರಾಗಿ ಬೆಳೆದ ಮೇಲೆ ಕೂಡ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಅವರು ಕಂಡಿದ್ದಾರೆ. ಸೋಲಿನ ಬಳಿಕ ಮತ್ತೆ ಗೆಲುವನ್ನು ಕಂಡಿದ್ದಾರೆ. ಇತ್ತೀಚೆಗಂತೂ ಬರೋಬ್ಬರಿ ನಾಲ್ಕು ವರ್ಷಗಳಷ್ಟು ಬರೀ ಸೋಲನ್ನೇ ಉಂಡು ಮತ್ತೆ ಫಿನಿಕ್ಸ್‌ನಂತೆ ಗೆಲುವು ದಾಖಲಿಸಿದ್ದಾರೆ. ಮತ್ತೆ ಸೋಲಿನ ರುಚಿ ಕೂಡ ನೋಡಿದ್ದಾರೆ.
ಸ್ಟಾರ್ ಕಿಡ್ ಆಗಿದ್ದರೂ ಸಕ್ಸಸ್‌ಗೆ ಅದಕ್ಕಿಂತ ಹೆಚ್ಚಿನದೇನೋ ಬೇಕು; ನಟ ಜೂನಿಯರ್ ಎನ್‌ಟಿಆರ್