ಸ್ನಾನದ ವಿಡಿಯೋ ಲೀಕ್​ ಆಗಿದ್ದು ಹೇಗೆ? ಕೊನೆಗೂ ಮೌನ ಮುರಿದ ನಟಿ ಊರ್ವಶಿ ರೌಟೇಲಾ

By Suchethana D  |  First Published Jul 28, 2024, 11:40 AM IST

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಅವರು ಸ್ನಾನ ಮಾಡುತ್ತಿರುವ ವಿಡಿಯೋ ಲೀಕ್​ ಆಗಿದ್ದು ಹೇಗೆ? ಈ ಕುರಿತು ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು? 
 


ಬಾಲಿವುಡ್‌ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್‌ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್‌ ಚಿನ್ನದ ಕೇಕ್‌ ಮಾಡಿಸಿಕೊಂಡು ಬಂದು ಸುದ್ದಿಯಾಗಿದ್ದರು. ಆದರೆ ಇದೀಗ ನಟಿ,   ಬೇರೆಯದ್ದೇ ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ. ಅದೇನೆಂದರೆ, ಇವರು ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ವೈರಲ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಲ್‌ಚಲ್‌ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್‌ರೂಮ್‌ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯುವಂತೆ ಕೈಹಾಕಿದ್ದಾರೆ. ಅಷ್ಟರಲ್ಲಿ ವಿಡಿಯೋ ಕಟ್‌ ಆಗಿದೆ.  

ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆದ ಬೆನ್ನಲ್ಲೇ,  ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ನಡುವಿನ ಮಾತುಕತೆ ಎನ್ನಲಾದ ಆಡಿಯೋ ಲೀಕ್​ ಆಗಿತ್ತು. ಈ ಆಡಿಯೋದಲ್ಲಿ  ಘಟನೆಯನ್ನು ಊರ್ವಶಿ ಖಂಡಿಸಿದ್ದಾರೆ.  ಈ ಫೋನ್‌ ಕಾಲಿನಲ್ಲಿ ಊರ್ವಶಿ ಮ್ಯಾನೇಜರ್‌ಗೆ ಈ ವಿಡಿಯೋ ಅನ್ನು ನೀವು ನೋಡಿರುವಿರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಹೌದು ಎಂದಿದ್ದಾರೆ. ಆಗ ನಟಿ, ಇಂಥ ಗೌಪ್ಯ ವಿಡಿಯೋಗಳು ಹೇಗೆ ಹೊರಬರುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ನಿಮ್ಮ ಜೊತೆ ಮಾತನಾಡಬೇಕು ಈ ವಿಷಯದ ಕುರಿತು ಎಂದಿದ್ದಾರೆ. ಆ ಬಳಿಕ ಮ್ಯಾನೇಜರ್‌,  ಸಾಮಾಜಿಕ ಮಾಧ್ಯಮದಿಂದ ವೀಡಿಯೊವನ್ನು ಡಿಲೀಟ್‌ ಮಾಡಲು ತಂಡವು ಕೆಲಸ ಮಾಡುತ್ತಿದೆ ಎಂದು  ಪ್ರತಿಕ್ರಿಯಿಸಿದ್ದಾರೆ. ಇದು ವಿಷಾದನೀಯ ಘಟನೆ ಎಂದಿರುವ ನಟಿ,  ದೂರವಾಣಿ ಮೂಲಕ ಚರ್ಚಿಸುವ ಬದಲು ವೈಯಕ್ತಿಕವಾಗಿ ಚರ್ಚಿಸಲು ಹೇಳಿದ್ದಾರೆ.  ಇದಾದ ಬಳಿಕ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್​ ಸೆಕ್ಷನ್​ ಸ್ಟಾಪ್​ ಮಾಡಿದ್ದರು. 

Tap to resize

Latest Videos

ಮೈಮರೆತು ಸೆಕ್ಸ್​​ ಮಾಡಿ ಗರ್ಭಿಣಿಯಾದೆ ಎನ್ನುತ್ತಲೇ ಶೂಟಿಂಗ್​ನ ಕರಾಳ ಕಥೆ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್​


ಇದೀಗ ಈ ವಿಷಯದ ಕುರಿತು ನಟಿ  ಊರ್ವಶಿ ರೌಟೇಲಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈವೆಂಟ್​ ಒಂದರಲ್ಲಿ ಭಾಗವಹಿಸಿದ್ದ ನಟಿಗೆ ಪತ್ರಕರ್ತರೊಬ್ಬರು ವಿಡಿಯೋ ವೈರಲ್​ ಕುರಿತು ಪ್ರಶ್ನಿಸಿದರು. ಅದಕ್ಕೆ ನಟಿ,  ಆ ವಿಡಿಯೋ ನೋಡಿ ನನಗೂ ಆ ಕ್ಷಣದಲ್ಲಿ ಶಾಕ್​ ಆಯಿತು. ಇದು ಹೇಗೆ ಲೀಕ್​ ಆಯಿತು ಎನ್ನುವುದು ಗೊತ್ತಿಲ್ಲ. ಆದರೆ ಅದು ನನ್ನ ಸಿನಿಮಾದ ಶೂಟಿಂಗ್​ ಕ್ಲಿಪ್ಪಿಂಗೇ ವಿನಾ ಅಸಲಿಯದ್ದು ಅಲ್ಲ ಎಂದಿದ್ದಾರೆ. ಇದೇ ವೇಳೆ ಅದನ್ನು ಇಟ್ಟುಕೊಂಡು ನನಗೆ   ಬ್ಲ್ಯಾಕ್​  ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿಲ್ಲ. ಹಾಗೇನೂ ಇಲ್ಲ. ಅಂಥ ಒಂದು ಘಟನೆ ಯಾವ ಹೆಣ್ಣಿಗೂ ಬರುವುದು ಬೇಡ ಎಂದಿದ್ದಾರೆ. ಅಲ್ಲಿಗೆ ಇದಾಗಲೇ ಮೊದಲು ಹಲವರು ಅಂದುಕೊಂಡಂತೆ ಇದು ಸಿನಿಮಾದ ಕ್ಲಿಪ್ಪಿಂಗ್​ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಸಿನಿಮಾದ ಪ್ರಮೋಷನ್​ಗಾಗಿ ಇನ್ನಿಲ್ಲದ ಗಿಮಿಕ್​ ಬಳಸಲಾಗುತ್ತದೆ. ಸಿನಿಮಾ ಹಿಟ್​ ಆಗದಿದ್ದರೂ ಈ ರೀತಿಯ ಗಿಮಿಕ್​ಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಎಂದು ಅವರಿಗೂ ಗೊತ್ತಿದೆ. ಅದೇ ರೀತಿ ಊರ್ವಶಿ ಅವರಿಗೂ ಆಗಿದೆ ಎಂದೇ ಹೇಳಲಾಗುತ್ತಿದೆ.

 

ಹಿಂದೆ ಕೂಡ ಈ ರೀತಿಯ ಗಿಮಿಕ್​ಗಳು ನಡೆದಿವೆ. ಶೂಟಿಂಗ್​ ಸ್ಪಾಟ್​ನ ಕೆಲವು ದೃಶ್ಯಗಳನ್ನುಉದ್ದೇಶಪೂರ್ವಕವಾಗಿ ಲೀಕ್​  ಮಾಡುವುದು, ಈ ರೀತಿ ಸೆಕ್ಸ್​ ಸೀನ್​ಗಳು, ಸ್ನಾನ ಮಾಡುವ ಸೀನ್​ಗಳನ್ನು ಲೀಕ್​ ಮಾಡುವುದು... ಕೊನೆಗೆ ಅದು ಹೇಗೋ ಲೀಕ್​ ಆಯಿತು ಎನ್ನುವುದು... ಇಂಥ ಗಿಮಿಕ್​ಗಳೆಲ್ಲಾ ಸರ್ವೇ ಸಾಮಾನ್ಯವಾಗಿದ್ದು, ಒಂದು ಚಿತ್ರ ಹಿಟ್​ ಆಗಲು ಇದೆಲ್ಲಾ ಅನಿವಾರ್ಯ ಎನ್ನುವುದು ಸಿನಿಮಾ ಮಂದಿಯ ವಾದವೂ ಇದೆ. ಅದೇನೇ ಇದ್ದರೂ ಊರ್ವಶಿ ರೌಟೇಲಾ ಅವರ ಸ್ನಾನದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಆದರೆ ನಟಿಯ ರಿಯಾಕ್ಷನ್​ ವೈರಲ್​ ಆಗುತ್ತಿದ್ದಂತೆಯೇ ನಟಿಯ ಸೌಂದರ್ಯದ ಗುಣಗಾನ ಕಮೆಂಟ್​ಗಳಲ್ಲಿ ತುಂಬಿ ಹೋಗಿದೆ. ಈಕೆಯ ಸ್ನಾನದ ವಿಡಿಯೋ ಏನೇ ಇರಬಹುದು. ಆದರೆ ನಟಿ ಸೌಂದರ್ಯದ ಘನಿ ಎಂದು ಹಲವರು ಹೇಳುತ್ತಿದ್ದಾರೆ. 

ಪ್ರೀತಿಯಲ್ಲಿ ಮೈಮರೆತ ಆರ್ಯವರ್ಧನ್​ ಗುರೂಜಿ! ವೇದಿಕೆ ಮೇಲೆ ಡಿಸ್ಕೊ ಡಾನ್ಸ್​ ಹೀಗಿತ್ತು ನೋಡಿ...

click me!