ಪದೇ ಪದೇ ಸಾಯುತ್ತಲೇ ಸುದ್ದಿಯಾಗುವ ಮಿಸ್ಟರ್​ ಬೀನ್​ ಕಥೆಯೇ ರೋಚಕ! ಮತ್ತೆ ವೈರಲ್​ ಆಗ್ತಿದೆ ಶಾಕಿಂಗ್​ ಸುದ್ದಿ

By Suchethana DFirst Published Jul 27, 2024, 4:51 PM IST
Highlights

ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ನಕ್ಕು ನಗಿಸುವ ಮಿಸ್ಟರ್​ ಬೀನ್​ ಅವರ ಶೋಚನೀಯ ಸ್ಥಿತಿಯ ಫೋಟೋ ವೈರಲ್​ ಆಗುತ್ತಿದ್ದು, ಸಾವಿನ ಸುದ್ದಿಯೂ ಹರಿದಾಡುತ್ತಿದೆ. ಇದರ ಹಿಂದಿನ ರಹಸ್ಯವೇನು? 
 

ರೋವನ್ ಅಟ್ಕಿನ್ಸನ್ ಎಂಬ ಹೆಸರು ಹೇಳಿದ್ರೆ ಅಯ್ಯೋ ಇದ್ಯಾರಪ್ಪಾ ವಿದೇಶಿಗ... ಇವನ ಸುದ್ದಿ ನಮಗ್ಯಾಕೆ ಎಂದು ಕೇಳಬಹುದು. ಆದರೆ ರೋವನ್ ಅಟ್ಕಿನ್ಸನ್ ಮತ್ತ್ಯಾರೂ ಅಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರನ್ನೂ ನಕ್ಕು ನಗಿಸುವ ಮಿಸ್ಟರ್​ ಬೀನ್​! ಹೌದು. 80-90ರ ದಶಕದಿಂದಲೂ ತೀರಾ ಇತ್ತೀಚಿನವರೆಗೂ ಮಿಸ್ಟರ್​ ಬೀನ್​ ಎಂದರೆ, ಈತನ ಮುಖ ನೋಡಿದರೆ ನಕ್ಕೂ ನಕ್ಕೂ ಸುಸ್ತಾಗುವವರು ಅದೆಷ್ಟೋ ಮಂದಿ. ಮನಸ್ಸಿನಲ್ಲಿ ಯಾವುದಾದರೂ ದುಗುಡ ಇದ್ದರೆ, ಯಾಕೋ ಬೇಜಾರು ಎನ್ನಿಸುತ್ತಿದ್ದರೆ, ಒತ್ತಡ ಹೆಚ್ಚಾಗಿ ಸುಸ್ತು ಎನಿಸಿದರೆ ಸಾಕು... ಗೂಗಲ್​ನಲ್ಲಿ ಹೋಗಿ ಮಿಸ್ಟರ್... ಎಂದು ಸರ್ಚ್​ ಮಾಡುವಷ್ಟರಲ್ಲಿಯೇ ಮಿಸ್ಟರ್​​ ಬೀನ್ ಹೆಸರು ಕಾಣಿಸಿಕೊಳ್ಳುತ್ತದೆ. ಇವರ ಯಾವುದೇ ವಿಡಿಯೋ ನೋಡಿದರೂ ಎಲ್ಲಾ ಒತ್ತಡಗಳೂ ಹೊರಟು ಹೋಗುವಷ್ಟರ ಮಟ್ಟಿಗೆ ಫೇಮಸ್​ ಇವರು. 

ಆದರೆ ಯಾಕೋ ಮಿಸ್ಟರ್​ ಬೀನ್​ ಅವರ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ. ಕಳೆದ ಕೆಲವಾರು ವರ್ಷಗಳಿಂದ ಇವರು ಸತ್ತೇ ಹೋದರು ಎನ್ನುವ ಸುದ್ದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಆಗುತ್ತಲೇ ಇರುತ್ತವೆ. ಆದರೆ ಮರುದಿನ ಮಿಸ್ಟರ್​ ಬೀನ್​ ಸತ್ತಿರುವ ಸುದ್ದಿ ಫೇಕ್​ ಸುದ್ದಿ. ಅವರು ಆರೋಗ್ಯದಿಂದ ಇದ್ದಾರೆ ಎಂದು ಹೇಳಲಾಗುತ್ತದೆ. 1953ರಲ್ಲಿ ಹುಟ್ಟಿರುವ ಮಿಸ್ಟರ್​ ಬೀನ್​ ಅರ್ಥಾತ್​ ರೋವನ್ ಅಟ್ಕಿನ್ಸನ್ ಅವರಿಗೆ ಈಗ 69 ವರ್ಷ ವಯಸ್ಸು. ಇದೀಗ ಅವರ ಫೋಟೋ ಒಂದು ಎಲ್ಲಾ ಭಾಷೆಗಳಲ್ಲಿಯೂ ವೈರಲ್​ ಆಗುತ್ತಿದೆ. 90ರ ದಶಕದಲ್ಲಿ ನಮ್ಮನ್ನು ನಗಿಸುತ್ತಿದ್ದ ಮಿಸ್ಟರ್​ ಬೀನ್​ ಈಗ ಹಾಸಿಗೆ ಹಿಡಿದಿದ್ದಾರೆ, ಹೀಗೆ ವೃದ್ಧರಾಗಿದ್ದಾರೆ ಎಂದೆಲ್ಲಾ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಲೇ ಇದೆ. ಕೆಲವರು ಮಿಸ್ಟರ್​ ಬೀನ್​ ನಿಧನ ಹೊಂದಿದ್ದಾರೆ ಎಂದೂ ಸುದ್ದಿಯಾಗುತ್ತಿದೆ. ಆದರೆ ನಿಜಕ್ಕೂ ಹಾಗೇನೂ ಇಲ್ಲ. ಪ್ರತಿ ಸಲದಂತೆಯೇ ಇದು ಫೇಕ್​  ನ್ಯೂಸ್​.

Latest Videos

ಮೈಮರೆತು ಸೆಕ್ಸ್​​ ಮಾಡಿ ಗರ್ಭಿಣಿಯಾದೆ ಎನ್ನುತ್ತಲೇ ಶೂಟಿಂಗ್​ನ ಕರಾಳ ಕಥೆ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್​

ಮಿಸ್ಟರ್​ ಬೀನ್​ ಆರೋಗ್ಯವಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದು, 69ನೇ ವಯಸ್ಸಿನಲ್ಲಿಯೂ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಇನ್ನು ಮಿಸ್ಟರ್​ ಬೀನ್​ ಕುರಿತು ಹೇಳುವುದಾದರೆ, ಇವರು ಬ್ರಿಟೀಷ್ ಕಾಮಿಡಿ ನಟ. ವಿಶ್ವವನ್ನೇ ನಗಿಸಿದ, ನಗಿಸುತ್ತಿರುವ ಅದ್ಭುತ ಕಲಾವಿದ.  ಕೆಲ ವರ್ಷಗಳ ಹಿಂದೆ,  ರೋವನ್ ಅಟ್ಕಿನ್ಸನ್ ಸಾವಿನ ಸುದ್ದಿ ಟ್ವಿಟರ್ ಮೂಲಕ ಮಿಂಚಿನಂತೆ ಹರಿದಾಡಿತು. ಶೋಕ ಸಂತಾಪಗಳು ಆರಂಭಗೊಂಡವು. ಆದರೆ ಕೆಲ ಹೊತ್ತಲ್ಲೇ ಈ ಸುದ್ದಿ  ಅನ್ನೋದು ಬಹಿರಂಗವಾಗಿಯಿತು.  ಹಲವು ಸ್ಪಷ್ಟನೆಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.  ಸೆಲೆಬ್ರೆಟಿಗಳ ಹೆಸರಿನಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿ ವಂಚನೆ ಮಾಡವು ಜಾಲಗಳು ಹಲವಾರಿದೆ. ಆಂಟಿ-ವೈರಸ್ ಸಂಸ್ಥೆ(McFee) ಪ್ರಕಾರ ಆನ್‌ಲೈನ್ ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಇಂಟರ್ನೆಟ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಫಿಶಿಂಗ್ ಲಿಂಕ್‌ಗಳಿಗಾಗಿ ಪ್ರಸಿದ್ಧ ಹೆಸರುಗಳನ್ನು ಬಳಸುತ್ತಾರೆ.  ರೋವನ್ ಅಟ್ಕಿನ್ಸನ್ ಹಲವು ಬಾರಿ ಈ ರೀತಿಯ ಸುಳ್ಳು ಸುದ್ದಿಗೆ ಗುರಿಯಾಗಿದ್ದಾರೆ. 


 2017ರಲ್ಲಿ ಮೊದಲ ಬಾರಿಗೆ  ರೋವನ್ ಅಟ್ಕಿನ್ಸನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ಅತೀ ದೊಡ್ಡ ಆಘಾತ ತಂದಿತ್ತು. ಅಭಿಮಾನಿಗಳು ತೀವ್ರ ನೊಂದಿದ್ದರು. ಆದರೆ ಈ ಸುದ್ಧಿ ಸುಳ್ಳು ಎಂದಾಗ ನಿಟ್ಟುಸಿರು ಬಿಟ್ಟಿದ್ದರು. ಆದರೆ ಪೊಲೀಸರು ಈ ಸುಳ್ಳು ಸುದ್ದಿಯನ್ನು ಸುಮ್ಮನೆ ಬಿಟ್ಟಿರಲಿಲ್ಲ. ಇದರ ಜಾಡು ಹಿಡಿದು ಸಾಗಿದಾಗ,  ವ್ಯವಸ್ಥಿತಿ ಜಾಲವೊಂದು ಕೆಲಸ ಮಾಡುತ್ತಿದೆ ಅನ್ನೋದು ಬೆಳಕಿಗೆ ಬಂದಿತ್ತು. 2017ರಲ್ಲಿ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ಕಾರು ಅಪಘಾದಲ್ಲಿ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಪೋಸ್ಟ್ ಮಾಡಲಾಗಿತ್ತು. 58ರ ಹರೆಯದ ರೋವನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.  ಮಾರ್ಚ್ 18, 2017ರಲ್ಲಿ ಮತ್ತೊಂದು ಟ್ವೀಟ್ ಮೂಲಕ ರೋವನ್ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಈ ಟ್ವೀಟ್ ಕ್ಲಿಕ್ ಮಾಡಿದಾಗ ಇತರ ವೆಬ್‌ಪೇಜ್‌ ತೆರೆದಿತ್ತು. ಇಲ್ಲಿ ಫೋನ್ ನಂಬರ್ ಡಯಲ್ ಮಾಡಲು ನಮೂದಿಸಲಾಗಿತ್ತು. ಈ ಫೋನ್ ನೇರವಾಗಿ ನಿಮ್ಮಕ್ರೆಡಿಟ್ ಕಾರ್ಡ್ ಸಂಖ್ಯೆ ನಮೂದಿಸಿ ಸಾಫ್ಟ್‌ವೇರ್ ಖರೀದಿಗೆ ಸೂಚಿಸಲಾಗಿತ್ತು. ಹೀಗೆ ಮಾಡಿದರೆ ಕ್ರೆಡಿಟ್‌ ಕಾರ್ಡ್, ಡೆಬಿಟ್ ಕಾರ್ಡ್‌ನಲ್ಲಿರುವ ಎಲ್ಲಾ ಹಣ ದೋಚುವ ವಂಚಕ ಜಾಲ ಇದಾಗಿತ್ತು. 

ಡ್ರೋನ್​ ಪ್ರತಾಪ್​ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್​
 

ಜನವರಿ 6, 1955ರಲ್ಲಿ ಇಂಗ್ಲೆಂಡ್‌ನ ಕಾನ್ಸೆಟ್ ಕೌಂಟಿ ದರ್ಹ್ಯಾಮ್‌ನಲ್ಲಿ ಹುಟ್ಟಿದ ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್, ಶಾಲಾದಿನದಲ್ಲಿ ಸಂಕೋಚದ ವಿದ್ಯಾರ್ಥಿಯಾಗಿದ್ದ. ಆದರೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದ ರೋವನ್, ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು.  ಶಾಲಾ ದಿನದಲ್ಲಿ ಜೇಮ್ಸ್ ಬಾಂಡ್ ಚಿತ್ರದ ನಾಯಕನಾಗಬೇಕು ಅನ್ನೋ ಕನಸು ಕಂಡಿದ್ದರು. ತನ್ನ ನಟನೆಯಲ್ಲಿನ ಹಾಸ್ಯಕ್ಕೆ ಎಲ್ಲರು ಮರುಳಾಗುತ್ತಿದ್ದರು. ಹೀಗಾಗಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿದ್ದರೂ, ರೋವನ್ ನೇರವಾಗಿ ನಟನೆಯತ್ತ ಗಮನ ಕೇಂದ್ರೀಕರಿಸಿದ್ದರು. 1979ರಲ್ಲಿ ರೇಡಿಯಾ ಮೂಲಕ ರೋವನ್ ಪಯಣ ಆರಂಭಗೊಂಡಿತು. ಅದೇ ವರ್ಷ ಟಿವಿ ಶೋನಲ್ಲಿ ಕಾಣಿಸಿಕೊಂಡು ಎಲ್ಲರ ಮನೆಮಾತಾದರು. ರೋವನ್ ತಾನೇ ಸೃಷ್ಟಿಸಿದ ಪಾತ್ರ ಮಿಸ್ಟರ್ ಬೀನ್. 1990ರಲ್ಲಿ ಮಿಸ್ಟರ್ ಬೀನ್ ಕಾಮಿಡಿ ಸೀರಿಯಲ್ ಪ್ರಸಾರವಾಯಿತು. ಅಷ್ಟೇ ವೇಗದಲ್ಲಿ ಜನಪ್ರಿಯತೆಗಳಿಸಿತು. ಅಂದಿನಿಂದ ರೋವನ್ ಅಟ್ಕಿನ್ಸನ್ ಹೆಸರಿಗಿಂತ ಹೆಚ್ಚಾಗಿ ಎಲ್ಲರೂ ಮಿಸ್ಟರ್ ಬೀನ್ ಎಂದೇ ಕರೆಯುತ್ತಾರೆ.  ಮಿಸ್ಟರ್ ಬೀನ್ ಕಾಮಿಡಿ ಸೀರಿಯಲ್ 5 ವರ್ಷ ಟಿವಿಯಲ್ಲಿ ಪ್ರಸಾರವಾಗಿತ್ತು. ಬರೋಬ್ಬರಿ 245 ದೇಶಗಳಿಗೆ ಕಾಮಿಡಿ ಸೀರಿಯಲ್ ಪ್ರಸಾರ ಮಾಡಲು ಹಕ್ಕು ಮಾರಾಟ ಮಾಡಲಾಗಿತ್ತು. 

click me!