ಆಜ್ ಕಿ ರಾತ್ ಅನ್ನೋ ಹಾಡಿನಲ್ಲಿ ತಮನ್ನಾ ಭಾಟಿಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಟ್ ಸೀನ್‌ಗಳ ಚಿತ್ರೀಕರಣದ ವೇಳೆ ತಮನ್ನಾಗೆ ಸರ್ಪ್ರೈಸ್ ಕಾದಿತ್ತು. ಈ ಕುರಿತು ವಿಡಿಯೋವನ್ನು ಸತಃ ತಮನ್ನಾ ಭಾಟಿಯಾ ಹಂಚಿಕೊಂಡಿದ್ದಾರೆ.
ಮುಂಬೈ(ಜು.27) ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಗೊಂಡಿರುವ ತಮನ್ನಾ ಭಾಟಿಯಾ ಇದೀಗ ಸ್ತ್ರೀ 2 ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಆಜ್ ಕಿ ರಾತ್ ಹಾಟ್ ಸಾಂಗ್ ಈಗಾಗಲೇ ಬಿಡುಗಡೆಯಾಗಿದೆ. ಇವತ್ತಿನ ರಾತ್ರಿ ಹಾಟ್ ಸಾಂಗ್‌ನಲ್ಲಿ ತಮನ್ನಾ ಭಾಟಿಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ನು ಕಾವಲಯ್ಯಾ ಹಾಡಿನ ಮೂಲಕ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ತಮನ್ನ ಇದೀಗ ಆಜ್ ಕಿ ರಾತ್ ಹಾಡಿನಲ್ಲಿ ಹಲವರ ನಿದ್ದೆಗೆಡಿಸಿದ್ದಾರೆ. ಆದರೆ ಈ ಹಾಡಿನ ಹಾಟ್ ಸೀನ್ ಶೂಟಿಂಗ್ ವೇಳೆ ನಡೆದ ಅಚ್ಚರಿಯನ್ನುತಮನ್ನಾ ಇದೀಗ ಹಂಚಿಕೊಂಡಿದ್ದಾರೆ. ಈ ಹಾಡಿನ ಶೂಟಿಂಗ್ ವೇಳೆ ತಮನ್ನಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಚಿತ್ರತಂಡ ತಮನ್ನಾಗೆ ಸರ್ಪ್ರೈಸ್ ನೀಡಿತ್ತು.
ಆಜ್ ಕಿ ರಾತ್ ಹಾಡಿನ ಶೂಟಿಂಗ್ ವೇಳೆ ತಮನ್ನಾ ಹುಟ್ಟು ಆಚರಿಸಿಕೊಂಡಿದ್ದರು. ಹೀಗಾಗಿ ಚಿತ್ರತಂಡ ದೊಡ್ಡ ಕೇಕ್ ತರಿಸಿ ತಮನ್ನಾ ಸರ್ಪ್ರೈಸ್ ನೀಡಿತ್ತು.ಶೂಟಿಂಗ್ ನಡುವೆ ತಮನ್ನಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಚಿತ್ರ ತಂಡ ತಮನ್ನಾಗೆ ಹಟ್ಟು ಹಬ್ಬದ ಶುಭಾಶಯ ಕೋರಿದ್ದರು. ಆಜ್ ಕಿ ರಾತ್ ಹಾಡಿನ ಶೂಟಿಂಗ್ ಕಳೆದ ಡೆಸೆಂಬರ್ ತಿಂಗಳಲ್ಲಿ ನಡೆದಿತ್ತು. ತಮನ್ನಾ ಹುಟ್ಟು ಹಬ್ಬ ದಿನಾಂಕ ಡಿಸೆಂಬರ್ 21. ಆದರೆ ಈ ವಿಡಿಯೋವನ್ನು ತಮನ್ನ ಬಹಿರಂಗ ಮಾಡಿರಲಿಲ್ಲ. ಕಾರಣ ಹಾಡು ರಿಲೀಸ್‌ಗೂ ಮೊದಲೇ ಹಾಡಿನ ತುಣುಕುಗಳನ್ನು ರಿಲೀಸ್ ಮಾಡಲು ಸಾಧ್ಯವಿಲ್ಲದ ಕಾರಣ ತಮನ್ನಾ ಇದೀಗ ಹಾಡು ಬಿಡುಗಡೆಯಾದ ಬೆನ್ನಲ್ಲೇ ತಮ್ಮ ಸರ್ಪ್ರೈಸ್ ಹುಟ್ಟು ಹಬ್ಬ ಆಚರಣೆ ವಿಡಿಯೋ ಬಹಿರಂಗ ಮಾಡಿದ್ದಾರೆ.
ಮುಂಬೈನ ಒಂದು ವಾಣಿಜ್ಯ ಕಟ್ಟದಿಂದ ನಟಿ ತಮನ್ನಾ ಪಡೆಯುತ್ತಿರುವ ತಿಂಗಳ ಬಾಡಿಗೆ ಎಷ್ಟು?
ಶೂಟಿಂಗ್ ಸೆಟ್‌ನಲ್ಲಿ ತಮನ್ನಾ ಸಹ ನಟರಾದ ರಾಜ್‌ಕುಮಾರ್ ರಾವ್, ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ನಟ ನಟಿಯರ ಜೊತೆ ಕೇಕ್ ಕತ್ತರಿಸಿದ್ದಾರೆ. ಈ ವಿಡಿಯೋಗೆ ಅಂದಿನ ರಾತ್ರಿಯಿಂದ ಇಂದಿನ ರಾತ್ರಿವರೆಗೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ವಾತಾವರಣ ಅತೀಯಾಗಿ ತಂಪಾಗಿತ್ತು. ಆದರೆ ಎಲ್ಲ ಪ್ರೀತಿ ನನ್ನನ್ನು ಬೆಚ್ಚಗಿರಿಸಿತು. ನನ್ನ ಅತೀವ ಸಂತಸದ ಹುಟ್ಟು ಹಬ್ಬಗಳಲ್ಲಿ ಒಂದು ಎಂದು ತಮನ್ನಾ ಹೇಳಿಕೊಂಡಿದ್ದಾರೆ.
ಸ್ತ್ರೀ 2 ಚಿತ್ರ ಆಗಸ್ಟ್ 15ರಂದು ತೆರೆ ಕಾಣಲಿದೆ. ಇದು ಕಾಮಿಡಿ ಹಾರರ್ ಮೂವಿಯಾಗಿದ್ದು ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಅಮರ್ ಕೌಶಿ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜಾನ್ ಹಾಗೂ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ಮೆಡಾಕ್ ಫಿಲ್ಮ್ ಹಾಗೂ ಜಿಯೋ ಸ್ಟುಡಿಯೋಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ವರುಣ್ ಧವನ್, ಪಂಕಜ್ ತ್ರಿಪಾಠಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರೆಡ್ ಸೀರೆ, ಮಾದಕ ನೋಟದಲ್ಲೇ ಹಾಟ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ