ಉರ್ಫಿ ಎದುರಿದ್ದರೆ ತಿರುಗುತ್ತೆ ಫ್ಯಾನ್​, ಕೂಲೋ ಕೂಲ್​: ಇಂಥ ಐಡಿಯಾ ಯಾರಿಗೂ ಬರಲು ಸಾಧ್ಯನೇ ಇಲ್ಲ ಬಿಡಿ!

By Suvarna News  |  First Published Apr 6, 2024, 7:39 PM IST

ಸೆಖೆ ಸೇಖೆ... ಉರಿ ಉರಿ ಅನ್ನೋರಿಗೆಲ್ಲಾ ಥಂಡಾ ಥಂಡಾ ಕೂಲ್​ ಕೂಲ್​ ಮಾಡುವ ಐಡಿಯಾ ಕೊಟ್ಟಿದ್ದಾರೆ ಉರ್ಫಿ ಜಾವೇದ್​. ವೈರಲ್​ ವಿಡಿಯೋ ಇಲ್ಲಿದೆ ನೋಡಿ... 
 


ಅಬ್ಬಬ್ಬಾ ಸೆಖೆ ಸೆಖೆ. ಉರಿ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಎಲ್ಲೆಡೆ. ಮನೆಯಲ್ಲಿ, ಕಚೇರಿಯಲ್ಲಿ ಫ್ಯಾನೋ, ಎಸಿನೋ ಹಾಕಿಕೊಂಡು ಕುಳಿತುಕೊಳ್ಳಬಹುದು. ಆದರೆ ಹೊರಗಡೆ ಹೋದ ಸಮಯದಲ್ಲಿ? ಅಬ್ಬಾ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿ  ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಉರ್ಫಿ ಜಾವೇದ್​, ಎಲ್ಲರನ್ನೂ ಥಂಡಾ ಥಂಡಾ ಕೂಲ್​ ಕೂಲ್​ಗೊಳಿಸಲು ಹೊಸ ಯೋಜನೆ ರೂಪಿಸಿದ್ದಾರೆ. ಅಷ್ಟಕ್ಕೂ  ಉರ್ಫಿ ಜಾವೇದ್​,  ಕೆಲ ದಿನಗಳ ಹಿಂದೆ ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿ ಅಭಿಮಾನಿಗಳನ್ನು ಸುಸ್ತು ಮಾಡಿದ್ದರು. ಸದ್ಯ ನಟಿ, ಸದ್ಯ ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ 2’ ಚಿತ್ರದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಇಂಟರ್​ನೆಟ್​  ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಒಂದು ನೋಟವನ್ನು ನೀಡಲಿರುವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು,  ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉರ್ಫಿ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಇದರ ಹೊರತಾಗಿಯೂ ಉರ್ಫಿ ತಮ್ಮ ಡ್ರೆಸ್​ಗಳಿಂದ ನೆಟ್ಟಿಗರನ್ನು ಚಕಿತಗೊಳಿಸುವುದನ್ನು ಮುಂದುವರೆಸಿದ್ದಾರೆ.

ಅಷ್ಟಕ್ಕೂ ಉರ್ಫಿ ಎಂದರೆ, ಚಿತ್ರ ವಿಚಿತ್ರ ಡ್ರೆಸ್​ಗಳಿಂದಲೇ ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದವರು.  ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. 

Tap to resize

Latest Videos

ಡ್ರೆಸ್​ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್​ ವಿಡಿಯೋಗೆ ಉಫ್​ ಎಂದ ಫ್ಯಾನ್ಸ್​...

ಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ  ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.ಇದೀಗ ನಟಿ ಬಟ್ಟೆಗೇ ಎರಡು ಫ್ಯಾನ್​ ಸಿಕ್ಕಿಸಿಕೊಂಡಿದ್ದಾರೆ. ಅದೂ ದೇಹದ ಭಾಗದ ಅತ್ತ ಇತ್ತ ಫ್ಯಾನ್​ ಜೋಡಿಸಿಕೊಂಡಿದ್ದಾರೆ. ಅದು ತಿರುಗುತ್ತೆ ಕೂಡ. ಇಂಥದ್ದೊಂದು ಹೊಸ ಐಡಿಯಾ ಮಾಡಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕುತ್ತಿದ್ದಾರೆ. 

ಅಷ್ಟಕ್ಕೂ ನಟಿ, ಕೆಲ ದಿನಗಳ ಹಿಂದೆ  ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು.  ಇದಕ್ಕಾಗಿ ಈಕೆಯನ್ನು ಆಧುನಿಕ ಶ್ರೀಕೃಷ್ಣ ಎಂದಿದ್ದರು ಅಭಿಮಾನಿಗಳು. ಉಡುಪಿನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಈಕೆಯ ಉಡುಪು ತಿರುಗುವಂತೆ ಮಾಡಲಾಗಿದ್ದು, ಅದರಲ್ಲಿ ಗ್ರಹಗಳನ್ನು ನೋಡಬಹುದಾಗಿದೆ. ಆರಂಭದಲ್ಲಿ ಕೆಲವರು ನಟಿಯ ಕೈಹಿಡಿದು ಕರೆದುಕೊಂಡು ಬಂದಿದ್ದರು. ಆ ಬಳಿಕ ನಟಿಯ ಉಡುಪನ್ನು ಗಮನಿಸಿದರೆ, ಬ್ರಹ್ಮಾಂಡವನ್ನು ನೋಡಬಹುದಾಗಿದೆ. ಇದನ್ನು ನೋಡಿ ಅಭಿಮಾನಿಗಳು ಉಫ್​ ಎನ್ನುತ್ತಿದ್ದಾರೆ. ನಿಮಗೆ ನೀವೇ ಸಾಟಿ ಎನ್ನುತ್ತಿದ್ದರೆ, ನಿಮ್ಮ ಡ್ರೆಸ್ಸಿಂಗ್​ ಸೆನ್ಸ್​ಗೆ ಹ್ಯಾಟ್ಸ್​ ಆಫ್​ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. 

ದಾವೂದ್​ ಜೊತೆ ಡೇಟಿಂಗ್​, ಪ್ರತಿ ಎಪಿಸೋಡ್​ಗೆ ಎಂಟು ಲಕ್ಷ- ಪಾಕ್​ನ 36 ವರ್ಷದ ಸುಂದರಿ ಯಾರು ಗೊತ್ತಾ?

 

click me!