ಡೆಲಿವರಿ ಡೇಟ್​ ಅನೌನ್ಸ್​ ಮಾಡಿದ ದೀಪಿಕಾ: ಗಮನ ಸೆಳೆದ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ...

By Suvarna News  |  First Published Apr 6, 2024, 6:02 PM IST

ಗರ್ಭಿಣಿಯಾಗಿರುವ ಬಗ್ಗೆ ಕೊನೆಗೂ ಮಾಹಿತಿ ನೀಡಿದ ದೀಪಿಕಾ ಪಡುಕೋಣೆ, ಡೆಲಿವರಿ ಡೇಟ್​ ಅನೌನ್ಸ್​ ಮಾಡಿದ್ದಾರೆ.  ಇದಕ್ಕೆ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
 


ಬಾಲಿವುಡ್​ ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್​ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಈ ಜೋಡಿ,  25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು.  ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪಠಾಣ್​, ಜವಾನ್​ ಸಕ್ಸಸ್​ ಆದರೆ ಫೈಟರ್​ನಲ್ಲಿ ಅಶ್ಲೀಲ ಎಂಬಂತೆ ಕಾಣಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಮಗುವಿನ ಸುದ್ದಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಅಧಿಕೃತವಾಗಿ ಈ ವಿಷಯವನ್ನು ಖುದ್ದು ದೀಪಿಕಾ ತಿಳಿಸಿದ್ದಾರೆ. ಜೊತೆಗೆ ತಮ್ಮ ಡೆಲವರಿ ಯಾವಾಗ ಎಂದೂ ಹೇಳಿದ್ದಾರೆ. ಬರುವ ಸೆಪ್ಟೆಂಬರ್​ ತಿಂಗಳಿನಲ್ಲಿ ಮಗು ಹುಟ್ಟುತ್ತಿರುವುದಾಗಿ  ದೀಪಿಕಾ ಪಡುಕೋಣೆ ಬಹಿರಂಗಪಡಿಸಿದ್ದಾರೆ. ನಟಿ  ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಣೆಯನ್ನು ಮಾಡಿದ್ದು, ನಾನು ಗರ್ಭಿಣಿಯಾಗಿದ್ದೇನೆ ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜನ್ಮ ನೀಡುತ್ತೇನೆ ಎಂದಿದ್ದಾರೆ.  ಅವರು "ಸೆಪ್ಟೆಂಬರ್ 2024" ದಿನಾಂಕವನ್ನು ಬರೆದಿರುವ ಸಿಹಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಜೊತೆಗೆ ಮಕ್ಕಳ ಉಡುಪುಗಳ ಗ್ರಾಫಿಕ್ಸ್, ಆಟಿಕೆಗಳು ಮತ್ತು ನೀಲಿ ಮತ್ತು ಗುಲಾಬಿ ಬಣ್ಣದ ಬಲೂನ್‌ಗಳನ್ನು  ಇಟ್ಟಿದ್ದಾರೆ.

Tap to resize

Latest Videos

ರಶ್ಮಿಕಾ @28: ಹುಟ್ಟುಹಬ್ಬಕ್ಕೆ ಬಂದಳು ಗರ್ಲ್​ಫ್ರೆಂಡ್​​, ಶ್ರೀವಲ್ಲಿ! ಅಬುದಾಬಿಯಲ್ಲಿ ಭರ್ಜರಿ ಸೆಲೆಬ್ರೇಷನ್​

ಈ ಪೋಸ್ಟ್​ಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿ ಶುಭಾಶಯಗಳ ಸುರಿಮಳೆಯನ್ನೇಗೈದಿದ್ದಾರೆ. ವಿಕ್ರಾಂತ್ ಮಾಸ್ಸೆ, ಕೃತಿ ಸನೋನ್, ಕರೀನಾ ಕಪೂರ್ ಖಾನ್, ಶ್ರೇಯಾ ಘೋಷಾಲ್​,  ವರುಣ್ ಧವನ್, ಆಲಿಯಾ ಭಟ್, ಮೇಧಾ ಶಂಕ್ರ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದೇ ವೇಳೆ ಪ್ರಿಯಾಂಕಾ  ಚೋಪ್ರಾ ಜೋನಾಸ್ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ. ಅದೇನೆಂದರೆ ನಾನು ಮತ್ತು   ಪತಿ ನಿಕ್ ಜೋನಾಸ್ ನನ್ನ ಮೊದಲ ಮಗಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿರುವುದಾಗಿ ಹೇಳಿದ್ದಾರೆ. ಅಸಲಿಗೆ ಈ ವಿಷಯವನ್ನು ಸೋಷಿಯಲ್​ ಮೀಡಿಯಾ ಮೂಲಕ ಇಷ್ಟು ಬಹಿರಂಗವಾಗಿ ಹೇಳಿದ್ದು ಇದೇ ಮೊದಲು.  “ನಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ನನ್ನ ಪತಿ ಮತ್ತು ನಾನು ಬಾಡಿಗೆ ತಾಯ್ತನದ ಮೂಲಕ ನಮ್ಮ ಮೊದಲ ಮಗುವನ್ನು ಹೊಂದಿದ್ದೇವೆ ಎಂದು ಖಚಿತಪಡಿಸಲು ಬಯಸುತ್ತೇವೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಗೌಪ್ಯತೆಯನ್ನು ಗೌರವಿಸುತ್ತಾರೆ ಎಂದು ನಿಕ್ ಮತ್ತು ನಾನು ಭಾವಿಸುತ್ತೇನೆ ಏಕೆಂದರೆ ನಾನು ನನ್ನ ಚಿಕ್ಕ ಕುಟುಂಬದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಬಯಸುತ್ತೇನೆ ಎಂದಿದ್ದಾರೆ. ಇದನ್ನು ದೀಪಿಕಾ ಅವರ ಪ್ರೆಗ್ನೆನ್ಸಿ ಸುದ್ದಿಗೆ ಏಕೆ ಹಾಕಬೇಕಿತ್ತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ದೀಪಿಕಾ ಅವರೂ ನಿಮ್ಮಂತೆಯೇ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಬೇಕಿತ್ತೆ ಎಂದು ನಟಿಯನ್ನು ಪ್ರಶ್ನಿಸುತ್ತಿದ್ದಾರೆ. 
 
ಇದೇ ವೇಳೆ ದೀಪಿಕಾ ಮಗುವಿನ ಕುರಿತು ಮತ್ತೊಂದು ಅಪ್​ಡೇಟ್​ ಕೂಡ ಸಕತ್​ ಸದ್ದು ಮಾಡುತ್ತಿದೆ.  ಅದೇನೆಂದರೆ, ದೀಪಿಕಾ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ. ಅಷ್ಟಕ್ಕೂ ದೀಪಿಕಾ ಕರ್ನಾಟಕ ಮೂಲದವರು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯ. ಮಂಗಳೂರು ಮೂಲದವರಾಗಿರುವ ಪಡುಕೋಣೆಯವರ ಮಾತೃಭಾಷೆ ಕೊಂಕಣಿ ಆಗಿದೆ. ಆದರೆ ದೀಪಿಕಾ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ನಂತರ ಅವನು ತನ್ನ ಹೆತ್ತವರೊಂದಿಗೆ ಭಾರತಕ್ಕೆ ಬಂದರು. ಆದರೆ ಮೂಲ ಮಾತ್ರ ಕರ್ನಾಟಕ. ಇದೇ ಹಿನ್ನೆಲೆಯಲ್ಲಿ, ದೀಪಿಕಾ ಮಗು ಕೂಡ ಕರ್ನಾಟದಲ್ಲಿಯೇ ಜನಿಸಲಿದೆ ಎಂದು ಹೇಳಲಾಗುತ್ತಿದೆ.  ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ವಿಷ್ಣು, ರಾಮನ ಅಂಶವೇ ಪ್ರಧಾನಿ ನರೇಂದ್ರ ಮೋದಿ: ನಟಿ ಕಂಗನಾ ಹೇಳಿಕೆ ಭಾರಿ ವೈರಲ್​
 

click me!