ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಡೇಟಿಂಗ್ ಮಾಡ್ತಿದ್ದ, ಪ್ರತಿ ಎಪಿಸೋಡ್ಗೆ ಎಂಟು ಲಕ್ಷ ಸಂಭಾವನೆ ಪಡೀತಿದ್ದ ಪಾಕ್ನ ಈ ಬೆಡಗಿ ಯಾರು ಗೊತ್ತಾ?
ಕೆಲವೇ ವರ್ಷಗಳ ಹಿಂದಿನವರೆಗೂ ಬಾಲಿವುಡ್ ಸಂಪೂರ್ಣ ಭೂಗತಲೋಕದ (under world) ಕೈಯಲ್ಲಿತ್ತು ಎನ್ನುವ ವಿಷಯವೇನೂ ಹೊಸತಲ್ಲ. 90ರ ದಶಕಕ್ಕೂ ಮುಂಚೆ ಬಾಲಿವುಡ್ ಸಂಪೂರ್ಣವಾಗಿ ಭೂಗತ ಲೋಕದ ಕಪಿಮುಷ್ಠಿಯಲ್ಲಿತ್ತು. ಸಿನಿಮಾ ಪಾರ್ಟಿಗಳಲ್ಲಿ ಭೂಗತ ಪಾತಕಿಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾ ನಾಯಕಿಯರೊಟ್ಟಿಗೆ ಈ ಪಾತಕಿಗಳು ಆತ್ಮೀಯ ಸಂಬಂಧ ಹೊಂದಿದ್ದರು. ತಮ್ಮ ಮೆಚ್ಚಿನ ನಟಿಯರಿಗೆ ಹೆಚ್ಚು ಸಿನಿಮಾಗಳು ಸಿಗುವಂತೆ ಮಾಡುತ್ತಿದ್ದರು. ಸಿನಿಮಾ ನಿರ್ಮಾಪಕರಿಗೆ ಬೆದರಿಕೆ ಹಾಕಿ ಸಿನಿಮಾ ಲಾಭದಲ್ಲಿ ಪಾಲು ಪಡೆಯುತ್ತಿದ್ದರು. ಆದರೆ 90ರ ದಶಕದ ಬಳಿಕ ಬಾಲಿವುಡ್ ಮೇಲೆ ಮಾಫಿಯಾದ ಹಿಡಿತ ಕೈತಪ್ಪಿತು ಎಂದೇ ಹೇಳಲಾಗುತ್ತಿದ್ದರೂ, ಇದು ಸಂಪೂರ್ಣ ಸತ್ಯವಲ್ಲ ಎನ್ನುವ ಮಾತೂ ಇದೆ. ಈಗಲೂ ಬಾಲಿವುಡ್ ಅವರದ್ದೇ ಕೈಯಲ್ಲಿದೆ ಎನ್ನುವುದಕ್ಕೆ ಆಗಾಗ್ಗೆ ಹಲವಾರು ಸಾಕ್ಷ್ಯಾಧಾರಗಳೂ ಸಿಗುತ್ತಿವೆ ಎಂಬ ಮಾತಿದೆ. ನಟ-ನಟಿಯರ ದಿನನಿತ್ಯದ ಆಗುಹೋಗು ಮಾತ್ರವಲ್ಲದೇ, ನಟ-ನಟಿಯರ ಮದುವೆಯ ವಿಷಯದಲ್ಲಿಯೂ ಇವರು ಭೂಗತ ಜಗತ್ತಿನವರನ್ನೇ ಅನುಸರಿಸಬೇಕು ಎಂಬ ಮಾತೂ ಇದೆ. ಇದೇ ಕಾರಣಕ್ಕೆ, ಬಾಲಿವುಡ್ನಲ್ಲಿ ನಡೆಯುವ ಕೆಲವು ವಿಚಿತ್ರ ಮದುವೆಗಳೂ ಸಾಕ್ಷಿಯಾಗಿವೆ. ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದರೆ ಇದು ಮಾಮೂಲು ಎನ್ನುತ್ತಾರೆ ಬಲ್ಲವರು.
ಅದೇನೇ ಇದ್ದರೂ ಬಾಲಿವುಡ್ ಆಳುತ್ತಿದ್ದವರಲ್ಲಿ ಒಬ್ಬಾಗ ಭೂಗತ ಪಾತಕಿ ದಾವೂದ್ ಇಬ್ರಾಹಿಂ. ಈತನ ಸಾವಿನ ಬಗ್ಗೆ ಈಗಲೂ ಊಹಾಪೋಹಗಳು ಹರಿದಾಡುತ್ತಲೇ ಇವೆ. ಇಂಥ ಸಂದರ್ಭದಲ್ಲಿಯೇ ಪಾಕಿಸ್ತಾನದ ನಟಿಯೊಬ್ಬಳು ದಾವೂದ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವೀಗ ಬೆಳಕಿಗೆ ಬಂದಿದೆ. ಅವಳ ಹೆಸರೇ ಮೆಹ್ವಿಶ್ ಹಯಾತ್| ಈಕೆಯ ಬ್ಯೂಟಿಗೆ ದಾವೂದ್ ಕ್ಲೀನ್ ಬೋಲ್ಡ್ ಆಗಿದ್ದ, ಇವಳು ಕೂಡ ದಾವೂದ್ ಜೊತೆ ಡೇಟಿಂಗ್ನಲ್ಲಿದ್ದಳು ಎನ್ನಲಾಗಿದೆ. ಅಷ್ಟಕ್ಕೂ ದಾವೂದ್ ಇಬ್ರಾಹಿಂ ಅನೇಕ ಬಾಲಿವುಡ್ ನಟಿಯರೊಂದಿಗೆ ಸಂಬಂಧ ಹೊಂದಿದ್ದ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಅವರಲ್ಲಿ ಅನಿತಾ ಅಯೂಬ್ ಒಬ್ಬರು. ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ನಟಿಸಲು ಅನಿತಾ ಅಯೂಬ್‌ಳನ್ನು ನಿರಾಕರಿಸಿದ ನಂತರ, ದಾವೂದ್ ಅವರನ್ನು ಕೊಲೆ ಮಾಡಿದ್ದಾನೆಂಬ ಸುದ್ದಿ ಇದೆ.
ದಾವೂದ್ಗೆ ಬಾಲಿವುಡ್ ಲಿಂಕ್? ಆತ್ಮಕಥೆಯಲ್ಲಿ ನಟ ರಿಷಿ ಕಪೂರ್ ಬಹಿರಂಗಪಡಿಸಿದ್ದರೊಂದು ಸತ್ಯ!
ಈಗ ದಾವೂದ್ ಹೆಸರು ಪಾಕ್ ನಟಿ ಮೆಹ್ವಿಶ್ ಹಯಾತ್ ಜೊತೆ ಕೇಳಿ ಬರುತ್ತಿದೆ. 37 ವರ್ಷದ ನಟಿ ದಾವೂದ್‌ಗಿಂತ 27 ವರ್ಷ ಚಿಕ್ಕವಳು. ದಾವೂದ್ ಕೃಪೆಯಿಂದ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳಂತೆ. ಹಯಾತ್ ಅವರು ಮಾಸಿ ಔರ್ ಮಲಿಕಾ ಎಂಬ ಟಿವಿ ಶೋ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಮೇರೆ ಖತಿಲ್ ರೊಮ್ಯಾಂಟಿಕ್ ಸೀರಿಸ್ ನೊಂದಿಗೆ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದರು. ಪ್ರತಿ ಎಪಿಸೋಡ್ಗೂ ಕನಿಷ್ಠ ಎಂಟು ಲಕ್ಷ ರೂಪಾಯಿ ಚಾರ್ಜ್ ಮಾಡುವ ಮೂಲಕ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೂ ಎನಿಸಿಕೊಂಡಿದ್ದರು. ನಂತರ ಈಕೆ, ಫಿರ್ ಚಂದ್ ಪೆ ದಸ್ತಕ್, ಮೀರಾತ್-ಉಲ್-ಉರೂಸ್, ಇಷ್ಕ್ ಮೇ ತೇರೆ, ರು ಬರು ಮತ್ತು ಅಂಜುಮ್ ಶಹಜಾದ್ ಅವರ ಮಹಿತ್, ಕಭಿ ಕಭಿ ಮುಂತಾದ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದರು.
ಹಯಾತ್ ದಾವೂದ್ ಜೊತೆ ಮಾತ್ರವಲ್ಲ, ಪಾಕಿಸ್ತಾನಿ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಹಾಗೂ ಅನೇಕ ಕ್ರಿಕೆಟಿಗರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾಳೆ ಎಂದೇ ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಕಳೆದ ವರ್ಷ ಮೆಹ್ವಿಶ್‌ಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ತಮ್ಗಾ-ಎ-ಇಮ್ತಿಯಾಜ್ ನೀಡಲಾಯಿತ್ತೆಂದು ವರದಿಯಾಗಿತ್ತು. ಮೆಹ್ವಿತ್ ಹಯಾತ್ ನಾಯಕಿಯಾಗಿ ನಟಿಸಿರುವ ಹಲವು ಚಿತ್ರಗಳ ನಿರ್ಮಾಣಕ್ಕೆ ದಾವೂದ್ ಹಣಕಾಸಿನ ನೆರವು ನೀಡಿದ್ದಾನೆ ಎಂದು ಕೆಲವು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ದಾವೂದ್, ಹಯಾತ್ ಗೆ ಸಿನಿಮಾದಲ್ಲಿ ಆಫರ್ ನೀಡಲು ಅನೇಕರ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕಾಗಿ ನಿರ್ದೇಶಕರು ಮತ್ತು ನಿರ್ಮಾಪಕರ ಮೇಲೆ ದಾವೂದ್ ಪ್ರಭಾವ ಬೀರುತ್ತಿದ್ದ ಎನ್ನಲಾಗ್ತಿದೆ.
ಡೆಲಿವರಿ ಡೇಟ್ ಅನೌನ್ಸ್ ಮಾಡಿದ ದೀಪಿಕಾ: ಗಮನ ಸೆಳೆದ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ...