ಕಿಲ್ ಸಿನಿಮಾದಲ್ಲಿನ ತಮ್ಮ ವಿಲನ್ ಪಾತ್ರದ ಬಗ್ಗೆ ಮತ್ತು ಅದಕ್ಕೆ ತಮ್ಮ ತಾಯಿ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ನಟ ರಾಘವ್ ಜುಯಲ್ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರಕ್ಕೆ ದೊರೆತಿರುವ ಪ್ರತಿಕ್ರಿಯೆ ಮತ್ತು ಅವಕಾಶಗಳ ಬಗ್ಗೆಯೂ ಮಾತನಾಡಿದ್ದಾರೆ.
ಜೀ ಟಿವಿಯ ಡಾನ್ಸ್ ರಿಯಾಲಿಟಿ ಶೋದ ಮೂಲಕ ಪ್ರಸಿದ್ಧಿ ಪಡೆದು ಬಳಿಕ ಸಿನಿಮಾಗೆ ಬಂದು ಈಗ ಯಶಸ್ವಿ ನಟನೆನಿಸಿರುವ ಡಾನ್ಸರ್ ಕಾಮ್ ನಟ ರಾಘವ್ ಜುಯಲ್ ಅವರು ಇತ್ತಿಚೆಗೆ ಬಿಡುಗಡೆಯಾದ ಆಕ್ಷನ್ ಮುವಿ ಕಿಲ್‌ನಲ್ಲಿ ವಿಲನ್ ರೋಲ್ ಮಾಡಿದ್ದು, ತಮ್ಮ ನಟನೆಯನ್ನು ನೋಡಿ ಅಮ್ಮ ಏನೆಂದರು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಿಲ್ ಸಿನಿಮಾದಲ್ಲಿ ಖಳ ನಾಯಕನ ಪಾತ್ರ ಮಾಡಿದ ನಂತರ ತಾನು ತಮ್ಮ ಅಮ್ಮನ ಕಾರಣಕ್ಕೆ ತನ್ನ ಇಮೇಜ್ ಅನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಿಕೊಳ್ಳಬೇಕಾಯಿತು ಎಂದು ರಾಘವ್ ಜುಯಲ್ ಹೇಳಿದ್ದಾರೆ.
ಮೊದಲ ಬಾರಿ ತಾನು ನಟಿಸಿದ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರ ಬಂದ ಅಮ್ಮ, 'ನೀನು ಎಲ್ಲೂ ನಮಗೆ ಮುಖ ತೋರಿಸಲಾಗದಂತೆ ಮಾಡ್ಬಿಟ್ಟೆ ಎಂದು ಗೋಳಾಡಿದರು. ಈ ವೇಳೆ ಸಿನಿಮಾ ನಿರ್ದೇಶಕ ನಿಖಿಲ್ ಭಟ್ ಹಾಗೂ ಗ್ಯಾರಹ್ ಸಿನಿಮಾದ ನಿರ್ದೇಶಕ ಉಮೇಶ್ ಬಿಸ್ತ್ ಹಾಗೂ ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಿರ್ದೇಶಖ ಕರಣ್ ಜೋಹರ್ ಕೂಡ ನಮ್ಮ ಜೊತೆಗೆ ನಿಂತಿದ್ದರು. ಈ ವೇಳೆ ಸಿನಿಮಾದ ನೋಡಿದ ಬಳಿಕ ನನ್ನ ಅಮ್ಮನ ಮಾತು ಕೇಳಿದ ಉಮೇಶ್ ಬಿಸ್ತ್‌ಜೀ ಅವರು ಚಿಂತೆ ಮಾಡುವುದು ಬಿಡಿ, ಎರಡು ತಿಂಗಳ ನಂತರ ನಿಮ್ಮ ಮಗನ ಇಮೇಜ್ ಅನ್ನು ನಾನು ಕ್ಲೀನ್ ಮಾಡುತ್ತೇನೆ ಎಂದು ಹೇಳಿದರು ಎಂದು ಹೇಳಿಕೊಂಡಿದ್ದಾರೆ ಕಿಲ್ ನಟ ರಾಘವ್ ಜುಯಲ್.
ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?
ಅಲ್ಲದೇ ದಕ್ಷಿಣ ಭಾರತದಲ್ಲಿ ಈ ಸಿನಿಮಾ ಚೆನ್ನಾಗಿ ಓಡುತ್ತಿದೆ. ಆದರೆ ನಮ್ಮ ಉತ್ತರದಲ್ಲಿ ಜನ ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ಬಾಯ್ಕಟ್ ಮಾಡಿ ಎಂದು ಹೇಳುವುದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಿನಿಮಾ ನಿಜವಾಗಿಯೂ ಬಿಡುಗಡೆಯಾದಾಗ ಅವರು ಸಿನಿಮಾ ನೋಡುವುದಕ್ಕೆ ಮನೆಯಿಂದ ಹೊರಗೆ ಬರುವುದಿಲ್ಲ. ನೀವು ನಿಮ್ಮ ಅಭಿಪ್ರಾಯ ಹೇಳಬಹುದು ಆದರೆ ಅದಕ್ಕಿಂತ ಮೊದಲು ಸಿನಿಮಾವನ್ನು ಮೊದಲು ನೋಡಿ, ಆದರೆ ದಕ್ಷಿಣದಲ್ಲಿ ಅದರಲ್ಲೂ ಮಲೆಯಾಳಂ ಸಿನಿಮಾದವರು ಎಂತಹ ಸಿನಿಮಾ ಮಾಡುತ್ತಾರೆ. ಅವೇಶಂ ಅಥವಾ ಮಂಜುಮ್ಮೆಲ್ ಬಾಯ್ಸ್ ಯಾವುದೇ ಆಗಿರಲಿ ಚೆನ್ನಾಗಿದೆ ಎಂದು ಅಭಿಪ್ರಾಯ ನೀಡಿದರು ರಾಘವ್.
ಕಿಲ್ ಬಿಡುಗಡೆಯಾಗಿ ಈಗಾಗಲೇ ಒಂದು ತಿಂಗಳು ಕಳೆದಿದೆ ಆದರೂ ದಕ್ಷಿಣದಲ್ಲಿ ಈ ಸಿನಿಮಾವನ್ನು ಜನ ನೋಡುತ್ತಲೇ ಇದ್ದಾರೆ. ಕಿಲ್ ಬಿಡುಗಡೆಯ ಸಮಯದಲ್ಲೇ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ನಟರಾದ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಸನ್, ಅಕ್ಷಯ್‌ಕುಮಾರ್ ಅವರ ಸಿನಿಮಾಗಳು ಬಿಡುಗೆಯಾದವು. ಆದರೂ ದಕ್ಷಿಣದಲ್ಲಿ ಸಿನೇಮಾಸ್‌ನಲ್ಲಿ ಕಿಲ್ ಓಡುತ್ತಲೇ ಇದೆ ಎಂದು ದಕ್ಷಿಣದ ಸಿನಿಮಾ ಪ್ರೇಮಿಗಳ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ ರಾಘವ್ ಜುಯಲ್.
ಸೈಕಾಗೋದೆ ಸೈಕಾದೆ ಎನ್ನುತ್ತಲೇ ಸಿನಿ ರಸಿಕರ ಹೃದಯ ಕದ್ದುಬಿಟ್ಟ ಭೀಮ ಚಿತ್ರದ ಸುಂದರಿ ಅಶ್ವಿನಿ
ಕಿಲ್ ನಂತರ ನನ್ನ ಜೀವನ ಸಂಪೂರ್ಣ ಬದಲಾಯ್ತು, ಕಿಲ್ ಬಿಡುಗಡೆ ನಂತರ ನನ್ನ ಬದುಕಿನ ಬಾಗಿಲುಗಳು ತೆರೆದುಕೊಂಡವು. ನನಗೆ ದೇಶದ ವಿವಿಧ ಪ್ರದೇಶಗಳಿಂದ ಕರೆಗಳು ಬರುತ್ತಿವೆ, ಸಿನಿಮಾ ನಿರ್ಮಾಪಕರು ನಿರ್ದೇಶಕರು ನನಗೆ ಕರೆ ಮಾಡುತ್ತಾರೆ. ಪ್ರತಿಯೊಬ್ಬರು ಸಿನಿಮಾಗೆ ತುಂಬಾ ಪ್ರೀತಿ ಕೊಟ್ಟರು. ಇನ್ನು ತಮ್ಮ ವೆಬ್ ಸಿರೀಸ್ ಗ್ಯಾರಹ್ ಬಗ್ಗೆ ಮಾತನಾಡಿದ ಅವರು ಅದೊಂದು ಅದ್ಭುತವಾದ ಮನಸ್ಸಿಗೆ ಮುದ ನೀಡುವ ಸೀರಿಸ್, ನಿಗೂಢತೆ, ಕೊಲೆ, ಥ್ರಿಲ್ಲರ್, ರೋಮಾನ್ಸ್ ಎಲ್ಲವೂ ಇದರಲ್ಲಿದೆ. ಹಾಗೆಯೇ ಅದರಲ್ಲಿ ನನ್ನ ಪಾತ್ರ ನನಗೆ ಬಹಳ ಸವಾಲಿನದ್ದಾಗಿತ್ತು. ಆತ ತನ್ನ ಜೀವನದಲ್ಲಿ ಹಿಂದೆ ಆದ ಆಘಾತದಿಂದ ತುಂಬಾ ಜರ್ಝರಿತನಾಗಿದ್ದು, ಅದರ ವಿರುದ್ಧ ಹೋರಾಡುತ್ತಿರುತ್ತಾನೆ. ತನ್ನ ಹಿಂದಿನ ಕೃತ್ಯದ ಬಗ್ಗೆ ಗಿಲ್ಟಿ ಹೊಂದಿರುವ ಆತ ಪೊಲೀಸರ ಖಾಕಿ ಸಮವಸ್ತ್ರದ ಬಗ್ಗೆಯೂ ಪ್ರಶ್ನೆ ಮಾಡ್ತಿರುತ್ತಾನೆ ಎಂದು ರಾಘವ್ ಜುಯಲ್ ತಮ್ಮ ಗ್ಯಾರಹ್ ವೆಬ್ ಸಿರೀಸ್ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು.