ನಶೆಯಲ್ಲಿದ್ದ ಉರ್ಫಿ ಜಾವೇದ್ ಮೈ-ಕೈ ಮುಟ್ಟಿ ನಟಿಯನ್ನು ಸುಸ್ತು ಮಾಡಿದ್ದಾರೆ ಜನರು. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹೇಳಿದ್ದೇನು?
ಉರ್ಫಿ ಜಾವೇದ್ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಚಿತ್ರ-ವಿಚಿತ್ರಗಳಿಂದ ಕಂಗೊಳಿಸುವ ನಟಿ. ಬಟ್ಟೆಗಿಂತಲೂ ಹೆಚ್ಚಾಗಿ ಈಕೆ ಮೈಮೇಲೆ ಧರಿಸುವುದು ಭಿನ್ನ -ವಿಭಿನ್ನ ವಸ್ತುಗಳನ್ನೇ. ಕೆಲವೊಮ್ಮೆ ಪ್ಲಾಸ್ಟಿಕ್, ಮತ್ತೆ ಕೆಲವು ಸಲ ಹೂವು, ಹಣ್ಣು, ತರಕಾರಿ, ಗೋಣಿಚೀಲ... ಹೀಗೆ ಇಂಥವುಗಳಿಂದಲೇ ಖಾಸಗಿ ಅಂಗ ಮುಚ್ಚಿಕೊಂಡು ಪೋಸ್ ಕೊಡುತ್ತಾರೆ. ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್ ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ ಎರಡು ಫ್ಯಾನ್ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್ ತಿರುಗುತ್ತಿತ್ತು. ಅದೂ ಸಾಲದು ಎಂಬಂತೆ ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು. ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ ಉರ್ಫಿ ಜಾವೇದ್ ಫ್ಯಾನ್ಸ್ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದರು.
ಕೊನೆಗೆ ನಟಿ ಚೈನೀಸ್ ಫುಡ್ ಇರುವ ಬಟ್ಟೆ ತೊಟ್ಟಿದ್ದರೆ. ಅಸಲಿಗೆ ಇದು Hot & Spicy Desi Chinese from Chinese Wok ಜಾಹೀರಾತಿಗಾಗಿ ಮಾಡಲಾಗಿತ್ತು. ಚಿಕ್ಕ ಬಕೆಟ್ನಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಇಟ್ಟುಕೊಂಡಿದ್ದ ನಟಿ ಈ ರೀತಿ ಡಿಸೈನ್ ಮಾಡಿಕೊಂಡಿದ್ದರು. ಹೀಗೆ ಚಿತ್ರ ವಿಚಿತ್ರ ಡ್ರೆಸ್ಗಳಿಂದಲೇ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದವರು ನಟಿ. ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ.
ಅವಳು ನನ್ನ ಹೋಮ್ವರ್ಕ್ ಮಾಡ್ತಿದ್ಲು... ಕಾಲೇಜ್ನ ಕ್ರಷ್ ಒಂದಾ, ಎರಡಾ... ಚಂದನ್ ಶೆಟ್ಟಿ ಓಪನ್ ಮಾತು
ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಈಗ ಖುದ್ದು ನಶೆ ಏರಿಸಿಕೊಂಡು ತೂರಾಡುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಇದೇ ರೀತಿ ಮೈಮೇಲೆ ಅರಿವೇ ಇಲ್ಲದೇ ನಟಿ ಬಂದಿದ್ದರು. ಅದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಲಾಗಿದೆ. ನಟಿ ತೂರಾಡುತ್ತಾ ಬಂದಾಗ ಅವರನ್ನು ಕೆಲವರು ಹಿಡಿದುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಇದೇ ನಶೆಯಲ್ಲಿ ನಟಿ ಕಾರನ್ನೇರಿ ಕುಳಿತಿದ್ದಾರೆ. ಅಲ್ಲಿ ಒಂದಿಷ್ಟು ಜನರು ಮುತ್ತಿಗೆ ಹಾಕಿದ್ದಾರೆ. ಅವರಿಗೆ ಕೊಡುವ ಸಲುವಾಗಿ ನಟಿ ಕೈಯಲ್ಲಿ ದುಡ್ಡು ಹಿಡಿದುಕೊಂಡದ್ದೇ ಇದಕ್ಕೆಲ್ಲಾ ಕಾರಣವಾಗಿದೆ. ಅಲ್ಲಿ ಮುತ್ತಿಗೆ ಹಾಕಿದ ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಉರ್ಫಿಯ ಮೈಯೆಲ್ಲಾ ಮುಟ್ಟಿದ್ದಾರೆ. ಮೂಗಿಗೆ ಏಟು ಕೂಡ ಬಿದ್ದದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಓಡಿಸುವಲ್ಲಿ ಸುಸ್ತಾಗಿ ಹೋಗಿದ್ದಾರೆ.
ನಟಿಯಂತೂ ಗಾಬರಿಯಿಂದ ಕೈಯಿಂದ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದರೂ ಜನರು ಕೇಳಲಿಲ್ಲ. ಉರ್ಫಿಯ ಮೈಮೇಲೆ ಎರಗುವುದು ಒಂದೇ ಬಾಕಿ. ಆ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಟಿಯ ಬಗ್ಗೆ ಕಾಳಜಿ ತೋರುವ ಬದಲು ಆಕೆಗೆ ಸರಿಯಾದ ಶಿಕ್ಷೆಯಾಯಿತು ಎಂದು ಹೇಳಿದವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ನಟಿ ನಶೆಯಲ್ಲಿ ಇರುವುದು ಹೆಚ್ಚಾಗುತ್ತಿದೆ. ಜನರ ಗಮನ ಸೆಳೆಯಲು ಈ ರೀತಿ ತಂತ್ರ ಮಾಡುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.
ಉರ್ಫಿ ಮೈ ತುಂಬಾ ನೀರೂರಿಸುವ ಚೈನೀಸ್ ಡಿಷಸ್: ಅಲ್ಲೇ ತಿನ್ಬೋದಾ ಕೇಳ್ತಿದ್ದಾರೆ ತರ್ಲೆ ನೆಟ್ಟಿಗರು!