ಪತ್ನಿ ಹೆಸರಿನ ಬದಲು ತನ್ನ ಹೆಸರನ್ನೇ ಬದಲಿಸಿಕೊಂಡ ವರಲಕ್ಷ್ಮಿ ಶರತ್ ಕುಮಾರ್ ಪತಿ, ಮಗಳು!

By Roopa Hegde  |  First Published Jul 17, 2024, 3:08 PM IST

ಮದುವೆಯಾದ್ಮೇಲೆ ಮಹಿಳೆಯರು ತಮ್ಮ ಹೆಸರು, ಅಡ್ಡಹೆಸರು ಬದಲಿಸಿಕೊಳ್ತಾರೆ. ಆದ್ರೆ ನಟಿ ವರಲಕ್ಷ್ಮಿ ಶರತ್ ಕುಮಾರ್ ಈ ವಿಷ್ಯದಲ್ಲಿ ಲಕ್ಕಿ. ಆಕೆ ಬದಲು ಪತಿ ನಿಕೊಲಾಯ್ ಸಚ್ ದೇವ್ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರೆ. 
 


ತಮಿಳಿನ ಪ್ರಸಿದ್ಧ ನಟಿ ವರಲಕ್ಷ್ಮಿ ಶರತ್‌ಕುಮಾರ್ ಪತಿ ನಿಕೊಲಾಯ್ ಸಚ್‌ದೇವ್ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅವರ ಭಿನ್ನ ಆಲೋಚನೆ ಎಲ್ಲರನ್ನು ಖುಷಿಗೊಳಿಸಿದೆ. ಸಂಪ್ರದಾಯಕ್ಕೆ ಸವಾಲೊಡ್ಡಿ ನಿಕೊಲಾಯ್ ಸಚ್ ದೇವ್, ವರಲಕ್ಷ್ಮಿ ಶರತ್‌ಕುಮಾರ್ ಬದಲು ತಮ್ಮ ಹೆಸರನ್ನು ಬದಲಿಸಿಕೊಳ್ಳುವ ನಿರ್ಧಾರ ಘೋಷಿಸಿದ್ದಾರೆ. ಇದು ಎಲ್ಲರನ್ನು ಅಚ್ಚರಿಗೊಳಿಸಿದೆ. 

ಮದುವೆ (Marriage) ನಂತ್ರ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಂಪತಿ ಮದುವೆ ವಿಷ್ಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡ್ರು. ಈ ವೇಳೆ ನಿಕೊಲಾಯ್ (Nikolai) ತಮ್ಮ ಪರಿಚಯ ಮಾಡಿದ್ರು. ಹೆಸರು ಬದಲಾವಣೆ ಬಗ್ಗೆ ಮಾತನಾಡಿದ ನಿಕೊಲಾಯ್.  ಪತ್ನಿ ವರಲಕ್ಷ್ಮಿ  ಮದುವೆಯ ನಂತರ ತಮ್ಮ ಹೆಸರನ್ನು ಬದಲಾಯಿಸಲು ಬಯಸಿದ್ದರು. ಅವರು ತಮ್ಮ ಹೆಸರಿನ ಜೊತೆ ಇರುವ ಶರತ್‌ಕುಮಾರ್ ಕಳೆದುಕೊಳ್ಳಲು ಇಷ್ಟಪಟ್ಟಿರಲಿಲ್ಲ. ಆದ್ರೆ ಸಚ್ ದೇವ್ ಹೆಸರನ್ನು ಕೂಡ ತಮ್ಮ ಹೆಸರಿನ ಜೊತೆ ಸೇರಿಸುವ ಆಲೋಚನೆ ಮಾಡಿದ್ದರು. ಆದ್ರೆ ನಾನದಕ್ಕೆ ಅವಕಾಶ ನೀಡಿಲ್ಲ. ವರಲಕ್ಷ್ಮಿ ಸಚ್ ದೇವ್ ಬದಲು ನಾನೇ ನನ್ನ ಹೆಸರನ್ನು ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಜೊತೆ ನನ್ನ ಮಗಳೂ ಹೆಸರು ಬದಲಿಸಿಕೊಳ್ಳುತ್ತಾಳೆ ಎಂದು ನಿಕೊಲಾಯ್ ಸಚ್ ದೇವ್ ಹೇಳಿದ್ದಾರೆ. ಅವರು ತಮ್ಮ ಹೆಸರನ್ನು ನಿಕೊಲಾಯ್ ವರಲಕ್ಷ್ಮಿ ಶರತ್‌ಕುಮಾರ್ ಸಚ್‌ದೇವ್ ಬದಲಿಸಲು ಮುಂದಾಗಿರೋದಾಗಿ ಹೇಳಿದ್ದಾರೆ.

ಬೇಬಿ ಬಂಪ್ ಕಾಣುವಂತೆ ಪತಿ ಅಲಿ ಜೊತೆ ಸೆಕ್ಸಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡ ರಿಚಾ!

Tap to resize

Latest Videos

ಅಲ್ಲದೆ ತನ್ನ ಮಗಳು 15 ವರ್ಷದ ಕಾಶಾ, ಹೆಸರಿನೊಂದಿಗೆ ವರಲಕ್ಷ್ಮಿ ಹೆಸರನ್ನು ಸೇರಿಸಿಕೊಳ್ಳಲಿದ್ದಾಳೆ ಎಂದು ನಿಕೊಲಾಯ್ ಸಚ್ ದೇವ್ ಹೇಳಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಹೆಸರನ್ನು ಹಾಗೆ ಇಡುವ ಮೂಲಕ ಅವರು ಹಾಗೂ ಅವರ ತಂದೆಯ ಪರಂಪರೆಯನ್ನು ನಾವು ಮುಂದುವರೆಸುತ್ತೇವೆ, ಗೌರವಿಸುತ್ತೇವೆ. ಮದುವೆ ನಂತ್ರವೂ ಪತ್ನಿ ನಟನೆ ಮುಂದುವರೆಸ್ತಾರೆ ಎಂದು ನಿಕೊಲಾಯ್ ಸಚ್ ದೇವ್ ಹೇಳಿದ್ದಾರೆ. 

ನಿಕೊಲಾಯ್ ಅವರ ಈ ನಿರ್ಧಾರ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಮದುವೆ ನಂತ್ರ ಹೆಸರು ಬದಲಾವಣೆ ಮಹಿಳೆಯರ ಕೆಲಸ. ಆದ್ರೆ ಸಾಂಪ್ರದಾಯಿಕ ರೂಢಿಗೆ ಸವಾಲೊಡ್ಡಿ, ನಿಕೊಲಾಯ್ ಹೆಸರು ಬದಲಿಸಿಕೊಳ್ಳುವ ಮೂಲಕ ಸಂಗಾತಿ ಮತ್ತು ಅವರ ಸಾಧನೆಗೆ ಗೌರವ ನೀಡಿದ್ದಾರೆ.  

ವರಲಕ್ಷ್ಮಿ ಶರತ್‌ಕುಮಾರ್ ಜುಲೈ 3 ರಂದು ಥೈಲ್ಯಾಂಡ್‌ನಲ್ಲಿ ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ವಿವಾಹವಾದರು. ನಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. 

‘ಬಾ ಬಾ ಬ್ಲಾಕ್ ಶೀಪ್ ಎಂದು ಮಚ್ಚು ಹಿಡಿದು ಬಂದ ಕಿಚ್ಚ ! ಕಿಕ್ ಕೊಟ್ಟ ಮ್ಯಾಕ್ಸ್ ಟೀಸರ್..ಫ್ಯಾನ್ಸ್‌ಗೆ 'max'imum' ಹಬ್ಬ!

ನಿಕೋಲಾಯ್‌ಗೆ ಇದು ಎರಡನೇ ಮದುವೆ. ವರಲಕ್ಷ್ಮಿ ಶರತ್ ಕುಮಾರ್, ವಿಚ್ಛೇದಿತ ಪುರುಷನ ಜೊತೆ ಡೇಟ್ ಮಾಡ್ತಿದ್ದಾರೆ ಎಂದಾಗ ಅನೇಕ ಟೀಕೆಗಳು ವ್ಯಕ್ತವಾಗಿದ್ದವು. ನಿಕೊಲಾಯ್ ಮೊದಲ ಪತ್ನಿ ಕವಿತಾ. ಅವರಿಗೆ 15 ವರ್ಷದ ಮಗಳಿದ್ದಾಳೆ. ಬಹಿರಂಗವಾಗಿ ಮಾತನಾಡುವ ಸ್ವಭಾವದ ನಟಿ, ಈ ನಕಾರಾತ್ಮಕ ಕಾಮೆಂಟ್‌ಗಳು ತಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನನ್ನ ತಂದೆಯೂ ಎರಡು ಬಾರಿ ಮದುವೆಯಾಗಿದ್ದರು. ಅವರು ಸಂತೋಷವಾಗಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಜನರು ನಿಕೊಲಾಯ್ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಅವರು ನನ್ನ ದೃಷ್ಟಿಯಲ್ಲಿ ಸುಂದರವಾಗಿದ್ದಾರೆ. ಅವರು ನನ್ನನ್ನು ನಗಿಸುತ್ತಾರೆ, ನನ್ನ ವೃತ್ತಿಜೀವನವನ್ನು ಬೆಂಬಲಿಸುತ್ತಾರೆ ಮತ್ತು ಯಾವಾಗಲೂ ನನಗೆ ಮೊದಲ ಸ್ಥಾನ ನೀಡುತ್ತಾರೆ. ಅವರು ನನ್ನನ್ನು ಮತ್ತು ಅವರ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ, ರಕ್ಷಿಸುತ್ತಾರೆ. ನಾವು 14 ವರ್ಷಗಳಿಂದ ಪರಿಚಿತರು. ಆಗ ಪ್ರೀತಿ ಇರಲಿಲ್ಲ, ಬರೀ ಸ್ನೇಹವಿತ್ತು. ಪ್ರೀತಿ ಇತ್ತೀಚಿಗೆ ಅರಳಿದೆ ಎಂದು ವರಲಕ್ಷ್ಮಿ ಹೇಳಿದ್ದರು. ವರಲಕ್ಷ್ಮಿ ಅವರು ತಮಿಳಿನ ಹಿರಿಯ ನಟ ಶರತ್‌ಕುಮಾರ್ ಮತ್ತು ಅವರ ಮೊದಲ ಪತ್ನಿ ಛಾಯಾ ಅವರ ಹಿರಿಯ ಪುತ್ರಿ. 
 

click me!