ಅಯ್ಯೋ..ಬೇಡ ಕ್ಲಿಕ್ ಮಾಡ್ಬೇಡಿ: ಪಾಪರಾಜಿಗಳಿಂದ ತಪ್ಪಿಸಿಕೊಂಡು ಓಡಿದ ನೋ ಮೇಕಪ್ ಲುಕ್‌ನಲ್ಲಿದ್ದ ಉರ್ಫಿ

Published : Jul 16, 2023, 06:48 PM IST
ಅಯ್ಯೋ..ಬೇಡ ಕ್ಲಿಕ್ ಮಾಡ್ಬೇಡಿ: ಪಾಪರಾಜಿಗಳಿಂದ ತಪ್ಪಿಸಿಕೊಂಡು ಓಡಿದ ನೋ ಮೇಕಪ್ ಲುಕ್‌ನಲ್ಲಿದ್ದ ಉರ್ಫಿ

ಸಾರಾಂಶ

ಅಯ್ಯೋ..ಬೇಡ ಕ್ಲಿಕ್ ಮಾಡ್ಬೇಡಿ ಎನ್ನುತಾ ನೋ ಮೇಕಪ್ ಲುಕ್‌ನಲ್ಲಿದ್ದ ನಟಿ ಉರ್ಫಿ ಜಾವೇದ್ ಪಾಪರಾಜಿಗಳಿಂದ ತಪ್ಪಿಸಿಕೊಂಡು  ಓಡಿದ ವಿಡಿಯೋ ವೈಲರ್ ಆಗಿದೆ.  

ಬಾಲಿವುಡ್ ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ ದಿನಕ್ಕೊಂದು ಅವತಾರದ ಮೂಲಕ ದರ್ಶನ ನೀಡುತ್ತಿರುತ್ತಾರೆ. ಉರ್ಫಿಯ ಹೊಸ ಹೊಸ ಅವತಾರಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಯಾವ ಲುಕ್‌ನಲ್ಲಿ ದರ್ಶನ  ನೀಡುತ್ತಾರೆ ಎಂದು ಅನೇಕ ಮಂದಿ ಕಾಯುತ್ತಿರುತ್ತಾರೆ. ಪಾಪರಾಜಿಗಳ ಮುಂದೆ ಹಾಜರಾಗುವ ಉರ್ಫಿ ಮಸ್ತ್ ಪೋಸ್ ನೀಡಿ, ಪಾಪರಾಜಿಗಳ ಕ್ಷೇಮ ವಿಚಾರಿಸಿ ಹೊರಡುತ್ತಾರೆ. ಆದರೆ ಇತ್ತೀಚೆಗೆ ಉರ್ಫಿ ಪಾಪರಾಜಿಗಳಿಂದ ತಪ್ಪಿಕೊಂಡು ಓಡಿದ್ದಾರೆ. ಕ್ಯಾಮರಾಗಳು ಎದುರಾಗುತ್ತಿದ್ದಂತೆ ಉರ್ಫಿ ಅಯ್ಯೋ ಬೇಡ ಎನ್ನುತ್ತಾ ಮುಖಮುಚ್ಚಿಕೊಂಡು ಹೋಗಿದ್ದಾರೆ. 

ಅಂದಹಾಗೆ ಉರ್ಫಿ ಈ ಪರಿ ಓಡಲು ಕಾರಣ ನೋ ಮೇಕಪ್ ಲುಕ್. ಹೌದು ಮೇಕಪ್ ಇಲ್ಲದೇ ಕಾಣಿಸಿಕೊಂಡಿದ್ದ ಉರ್ಫಿ ಕ್ಯಾಮರಾಗಲಿಗೆ ಪೋಸ್ ನೀಡಲು ಹಿಂದೇಟು ಹಾಕಿದ್ದಾರೆ. ಸದಾ  ಮೇಕಪ್‌ನಲ್ಲೇ ಮಸ್ತ್ ಪೋಸ್ ನೀಡುತ್ತಿದ್ದ ಉರ್ಫಿ ಮೇಕಪ್ ಇಲ್ಲದೆ ಕಾಣಿಸಿಕೊಳ್ಳಲು ಇಷ್ಟಪಡಲ್ಲ. ಜಿಮ್‌ಗೆ ಹೋಗಿದ್ದ ಉರ್ಫಿಯನ್ನು ಪಾಪರಾಜಿಗಳು ಮುತ್ತಿಕೊಂಡಿದ್ದರು. ಕ್ಯಾಮರಾಗಳನ್ನು ನೋಡುತ್ತಿದ್ದೆ ಉರ್ಫಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮುಖ ಮುಚ್ಚಿಟ್ಟುಕೊಂಡು ಕ್ಲಿಕ್ ಮಾಡಬೇಡಿ ಎನ್ನುತ್ತಾ ಕಾರೊಳಗೆ ಹತ್ತಿ ಕುಳಿತಿದ್ದಾರೆ. 

ತರಹೇವಾರಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಉರ್ಫಿ ಮೊದಲ ಬಾರಿಗೆ ಜಿಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮೇಕಪ್ ಇಲ್ಲದೆ ಇರೋದು ಆಕೆಗೆ ಸಮಸ್ಯೆ ಅಲ್ಲ, ವಿಚಿತ್ರ ಬಟ್ಟೆ ಹಾದರೆ ಇರೋದು ಸಮಸ್ಯೆ ಎಂದು ಹೇಳುತ್ತಿದ್ದಾರೆ. ನಾರ್ಮಲ್ ಬಟ್ಟೆ ಹಾಕಿದ್ದೆ ದೊಡ್ಡ ಸಮಸ್ಯೆಯಾಗಿದೆ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. ಅನೇಕರು ಟ್ರೋಲ್ ಮಾಡಿದ್ದಾರೆ.

ಮೈ ಪೂರ್ತಿ ಮುಚ್ಕೊಂಡ ಬಟ್ಟೆಯಲ್ಲಿ ಉರ್ಫಿ? ಸೂರ್ಯ ಯಾವ ಕಡೆ ಹುಟ್ಟಿದ್ದಾನೆಂದ ನೆಟ್ಟಿಗರು!

ಉರ್ಫಿ ಜಾವೆದ್‌ಗೆ ಟೀಕೆ ಹೊಸದಲ್ಲ. ಪ್ರತಿ ಭಾರಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಂಡಾಗ ಟೀಕೆಗಳು ವ್ಯಕ್ತವಾಗಿದೆ. ಟ್ರೋಲ್, ಮೀಮ್ಸ್‌ ಸಂಖ್ಯೆ ಹೇಳತೀರದು. ಉರ್ಫಿಯ ಉರಿಸುವ ಟ್ರೋಲ್‌ಗಳು ಸಾಕಷ್ಟಿದೆ. ಉರ್ಫಿ ಜಾವೆದ್ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಜಗತ್ತಿಗೆ ತೋರಿಸಲು ಇನ್ನೇನು ಉಳಿದಿಲ್ಲ. ಹೀಗಾಗಿ ಡ್ರೆಸ್ ಹಾಕದೆ ಪೋಸ್ ನೀಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಉರ್ಫಿಗೆ ಸವಾಲು ಹಾಕಿದ್ದಾರೆ.

ನೀಲಿ ಸೀರೆಯ ಜಾರಿದ ಸೆರಗು, ಬ್ಲೂ ಸ್ಟಾರ್‌ ಉಡುಗೆಯಲ್ಲಿ ತಿಳಿ ನೀಲ ಕನಸು ಕಟ್ಟಿಕೊಟ್ಟ ಉರ್ಫಿ!

ವಿಚಿತ್ರವಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸದಾ ತುಂಡುಡುಗೆಯಲ್ಲಿ ಪೋಸ್ ನೀಡುತ್ತಾರೆ. ಆದರೆ ಮೈತುಂಬಾ ಬಟ್ಟೆ ಹಾಕಿಕೊಂಡರೆ ಈಗ ಟ್ರೋಲ್ ಆಗುತ್ತಾರೆ. ಅರೇ ಉರ್ಫಿಗೇ ಏನಾಗಿದೆ. ಸೂರ್ಯ ಯಾವ ಕಡೆ ಹುಟ್ಟಿದ್ದಾನೆ. ಉರ್ಫಿ ತುಂಡುಗೆ ಎಲ್ಲಿ ಎಂದು ಪ್ರಶ್ನಿಸುತ್ತಾರೆ. ಒಟ್ನಲ್ಲಿ ಉರ್ಫಿ ಯಾವುದೇ ಡ್ರೆಸ್ ಹಾಕಿದ್ರು ಸುದ್ದಿಯಲ್ಲಿರುತ್ತಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?