
ಮಲಯಾಳಂ ಖ್ಯಾತ ನಟ ಮಾಮುಕ್ಕೋಯ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ (ಏಪ್ರಿಲ್ 26) 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪೂಂಗೋಡ್ ಜಾನಕೀಯ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಲು ಮಲಪ್ಪುರಂಗೆ ತೆರಳಿದ್ದ ಮಮುಕ್ಕೋಯ ದಿಢೀರ್ ಕುಸಿದುಬಿದ್ದಿದ್ದರು. ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆ ವೇಳೆ ಫುಟ್‌ಬಾಲ್ ಪಿಚ್‌ನಲ್ಲಿಯೇ ಮಾಮುಕ್ಕೋಯ ಕುಸಿದು ಬಿದ್ದರು. ತಕ್ಷಣ ಅರನ್ನು ಕೋಯಿಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ನಟ ನಿಧನ ಹೊಂದಿರು. 77 ವರ್ಷದ ಖ್ಯಾತ ನಟ ಮಾಮುಕ್ಕೋಯ ನಿಧನಕ್ಕೆ ಮಲಯಾಳಂ ಸಿನಿಮಾರಂಗ ಸಂತಾಪ ಸೂಚಿಸುತ್ತಿದೆ.
ರಂಗಭೂಮಿ ಮೂಲಕ ನಟನೆ ಪ್ರಾರಂಭಿಸಿದ ಮಾಮುಕ್ಕೋಯ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಸ್ಯನಟರಾಗಿ ಖ್ಯಾತಿ ಗಳಿಸಿದ್ದರು. ಸುಮಾರು 450 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಟಿಸಿದ್ದಾರೆ. ಮಾಮುಕ್ಕೋಯ ಎರಡು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಾಮುಕ್ಕೋಯ ಹೃದಯಾಘಾತದಿಂದ ಕುಸಿದು ಬಿದ್ದರು ಎಂದು ವರದಿಯಾಗಿದೆ.
Innocent Passes Away: ಮಲಯಾಳಂ ನಟ, ಮಾಜಿ ಸಂಸದ ಇನ್ನೋಸೆಂಟ್ ನಿಧನ
ಮಲಯಾಳಂನ ಪ್ರಸಿದ್ಧ ಸಿನಿಮಾಗಳಲ್ಲಿ ಮಾಮುಕ್ಕೋಯ ನಟಿಸಿದ್ದಾರೆ. ಒಪ್ಪಂ, ಉಸ್ತದ್ ಹೋಟೆಲ್, ಸಂದೇಶಂ, ಚೆಂಕೊಲ್, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸುಲೈಖಾ ಮಂಜಿಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಚಿಯಾನ್ ವಿಕ್ರಮ್ ನಟನೆಯ ಕೋಬ್ರ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೆಯಲ್ಲದೇ ಫ್ರೆಂಚ್ ಸಿನಿಮಾ ಫ್ಲೇಮೆನ್ ಇಮ್ ಪ್ಯಾರಡೀಸ್ ಚಿತ್ರದಲ್ಲೂ ಮಾಮುಕ್ಕೋಯ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.