ಡ್ರೆಸ್ ಕಾರಣಕ್ಕೆ ನನ್ನ ರೆಸ್ಟೊರೆಂಟ್ ಒಳಗೆ ಬಿಡ್ಲಿಲ್ಲ : ಉರ್ಫಿ ಆಕ್ರೋಶ

Published : Apr 26, 2023, 01:25 PM IST
ಡ್ರೆಸ್ ಕಾರಣಕ್ಕೆ ನನ್ನ ರೆಸ್ಟೊರೆಂಟ್ ಒಳಗೆ ಬಿಡ್ಲಿಲ್ಲ : ಉರ್ಫಿ ಆಕ್ರೋಶ

ಸಾರಾಂಶ

ಮೈಗೆ ಬಟ್ಟೆಯೋ, ಬಟ್ಟೆಗೆ ಮೈಯೋ ಅನ್ನೋ ಕನ್‌ಫ್ಯೂಶನ್ ಇಟ್ಕೊಂಡೇ ಡ್ರೆಸ್ ಮಾಡೋ ಉರ್ಫಿಗೆ ಸಿಟ್ಟು ಬಂದಿದೆ. ಮುಂಬೈಯ ರೆಸ್ಟೊರೆಂಟ್‌ನವರು ಇವಳನ್ನು ಒಳಗೆ ಬಿಟ್ಟಿಲ್ಲವಂತೆ.

ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ. ಪ್ರತಿ ಬಾರಿಯೂ ತನ್ನ ವಿವಾದಾತ್ಮಕ ಫ್ಯಾಷನ್‌ನೊಂದಿಗೆ ಟ್ರೋಲ್‌ ಆಗುತ್ತಾರೆ. ಅವರು ಕೆಲವೊಮ್ಮೆ ಕಸದ ಚೀಲಗಳು, ಬಟ್ಟೆಗೆ ಹಾಕುವ ಕ್ಲಿಪ್‌, ಸೇಫ್ಟಿ ಪಿನ್‌ಗಳೊಂದಿಗೆ ಉಡುಪುಗಳನ್ನು ಆವಿಷ್ಕರಿಸಿದ್ದೂ ಇದೆ. ಅವರ ಡ್ರೆಸ್‌ಗಳೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುತ್ತದೆ. ಬಿಕಿನಿ, ಟೂಪೀಸ್ , ಸಿಂಗಲ್ ಪೀಸ್, ಹಣ್ಣು, ತರಕಾರಿ, ಕೆಲವೊಮ್ಮೆ ನೂಲು, ಗಾಜುಗಳಿಂದಲೂ ಪ್ರೈವೇಟ್ ಭಾಗಗಳನ್ನು ಬೇಕೋ ಬೇಡವೋ ಅನ್ನೋ ಹಾಗೆ ಕವರ್ ಮಾಡಿ ಉರ್ಫಿ ಜಾವೇದ್ ಹಾಟ್‌ ಪೋಸ್‌ ನೀಡುತ್ತಿರತ್ತಾರೆ. ಈ ಮೂಲಕ ಆಗಾಗ ಪಡ್ಡೆ ಹೈಕ್ಳ ನಿದ್ದೆಗೆ ಕೊಳ್ಳಿ ಇಡ್ತಾರೆ. ಆದರೆ ಉರ್ಫಿ ತನ್ನ ಬಟ್ಟೆ ವೈರಾಗ್ಯದ ಕಾರಣಕ್ಕೆ ಹೊಟೇಲಿನೊಳಗೆ ಪ್ರವೇಶ ಪಡೆಯಲು ವಿಫಲರಾಗಿದ್ದಾರೆ.

ಉರ್ಫಿ ಜಾವೇದ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಹೊಟೇಲಿನವರಿಗೆ ಚೆನ್ನಾಗಿ ಝಾಡಿಸಿದ್ದಾರೆ. 'ನಾವೇನು ಇಪ್ಪತ್ತೊಂದನೆಯ ಶತಮಾನದಲ್ಲಿ ಇದ್ದೇವಾ ಅಲ್ಲಾ ಶತಮಾನ ಹಿಂದಿದ್ದೇವಾ? ಮುಂಬೈಯ ರೆಸ್ಟೊರೆಂಟ್ ಒಂದಂತೂ ಖಂಡಿತಾ ಇಪ್ಪತ್ತೊಂದನೇ ಶತಮಾನದಲ್ಲಿ ಇಲ್ಲ. ಏಕೆಂದರೆ ನನ್ನ ಡ್ರೆಸ್‌ ಕಾರಣಕ್ಕೆ ನನ್ನನ್ನು ಹೊಟೇಲ್ ಒಳಹೋಗಲು ಬಿಟ್ಟಿಲ್ಲ. ಮ್ಯಾನೇಜರ್ ಬಂದು ಒಳಬರೋಕೆ ಬಿಡದೆ ಹೊರ ಕಳಿಸಿದ್ದಾರೆ. ನನ್ನ ಫ್ಯಾಶನ್ ಚಾಯ್ಸ್ ನನ್ನದು. ಅದನ್ನು ಗೌರವಿಸಬೇಕು ಅನ್ನೋ ಮಿನಿಮಮ್ ಸೆನ್ಸ್ ಕೂಡ ಹೊಟೇಲಿನವರಿಗೆ ಇದ್ದ ಹಾಗಿಲ್ಲ. ಅದೆಲ್ಲ ಬಿಡಿ, ನಿಮಗೆ ನನ್ನ ಫ್ಯಾಶನ್ ಸೆನ್ಸ್(Fashion sense) ಇಷ್ಟ ಆಗದಿದ್ದರೂ ಪರ್ವಾಗಿಲ್ಲ. ಆದರೆ ಆ ಕಾರಣಕ್ಕೆ ಡಿಫರೆಂಟಾಗಿ ಯಾಕೆ ಟ್ರೀಟ್ ಮಾಡ್ತೀರಿ? ಹೊಟೇಲಿಗೆ ಬರೋದನ್ನು ತಡೆಯೋದು ವಾಪಾಸ್ ಕಳಿಸೋದು ಅನ್ಯಾಯ' ಎಂದು ನಟಿ ಹೊಟೇಲಿನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

37.80 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ಆಲಿಯಾ; ಸಹೋದರಿಗೆ 2 ಅಪಾರ್ಟ್ಮೆಂಟ್ ಗಿಫ್ಟ್

ನಟಿಯ ಈ ಪೋಸ್ಟ್‌ಗೆ ಥರಾವರಿ ಪ್ರತಿಕ್ರಿಯೆ ಬಂದಿದೆ. ಎಷ್ಟೋ ಜನ ಆಕೆಗೆ ಹೇಳಿದ್ದನ್ನು ವ್ಯಂಗ್ಯ ಮಾಡಿದ್ದಾರೆ. 'ನಿಮ್ಮ ಡ್ರೆಸ್ ಸರಿಯಾಗಿಲ್ಲ, ಅವರಿಗೆ ನೋಡಲು ಮುಜುಗರ ಆಗಿ ಒಳಗಡೆ ಬರೋದು ಬೇಡ ಎಂದಿರಬೇಕು' ಅಂತ ಒಬ್ಬರು ಹೇಳಿದ್ರೆ ಇನ್ನೋರ್ವರು 'ಸರಿಯಾಗಿ ಡ್ರೆಸ್ ಹಾಕೋದನ್ನು ಕಲಿತಿಕೋ' ಅಂತ ಕ್ಲಾಸ್(Class) ತಗೊಂಡಿದ್ದಾರೆ. 'ಉರ್ಫಿ ಜಾವೇದ್ ಡ್ರೆಸ್ ನೋಡಿ ಈ ರೀತಿ ಜಡ್ಜ್(Judge) ಮಾಡಬಾರದು' ಒಬ್ಬ ಉರ್ಫಿ ಫ್ಯಾನ್ ಆಕೆಯ ಪರ ಮಾತಾಡಿದ್ದಾರೆ. ಹೀಗೆ ಈಕೆಯ ಪೋಸ್ಟಿಗೆ ನಾನಾ ಬಗೆಯ ಕಮೆಂಟ್‌ಗಳು ಬರುತ್ತಿವೆ.

ಉರ್ಫಿ ಡ್ರೆಸ್‌ಗಳು ಬಹಳ ಹಿಂದಿನಿಂದಲೇ ಟ್ರೋಲ್(Troll) ಆಗುತ್ತಿವೆ. ಈಕೆಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಈ ಕಾರಣಕ್ಕೆ ಗಮನ ಸೆಳೆಯೋ ಉದ್ದೇಶದಿಂದ ಉರ್ಫಿ ಹೀಗೆಲ್ಲ ವೇಷ ಮಾಡ್ತಿದ್ದಾಳೆ ಅನ್ನೋದು ಆಕೆಯ ಬಗ್ಗೆ ಜನರಲ್ಲಾಗಿ ಇರೋ ಅಭಿಪ್ರಾಯ. ಆದರೆ ಉರ್ಫಿಗೆ ತನ್ನ ಡ್ರೆಸಿಂಗ್ ಬಗ್ಗೆ ಮುಜುಗರ ಇದ್ದ ಹಾಗಿಲ್ಲ. 'ಎಲ್ಲರೂ ಡ್ರೆಸ್(Dress) ಮಾಡಿಕೊಳ್ತಾರೆ, ಮೇಕಪ್ ಮಾಡಿಕೊಳ್ತಾರೆ. ನಾನು ಕೂಡ ನನಗೆ ಬೇಕಾದ ಹಾಗೆ ಡ್ರೆಸ್ ಮಾಡಿಕೊಳ್ತೀನಿ, ಮೇಕಪ್ ಮಾಡಿಕೊಳ್ತೀನಿ; ಎಂದು ಈಕೆ ಆಗಾಗ ಹೇಳ್ತಾ ಇರ್ತಾರೆ. 'ನನ್ನ ಡ್ರೆಸ್ ನೋಡಿ ಯಾರು ಉತ್ತೇಜಿತರಾಗುತ್ತಾರೋ ಅವರಲ್ಲಿ ತೊಂದರೆ ಇದೆ, ಅವರಿಗೆ ಸಹಾಯದ ಅಗತ್ಯತೆ ಇದೆ' ಅನ್ನೋದು ಕಮೆಂಟ್ ಮಾಡೋರಿಗೆ ಉರ್ಫಿ ಜಾವೇದ್ ನೀಡೋ ಉತ್ತರ. ಬಿಗ್ ಬಾಸ್ ಓಟಿಟಿಯಲ್ಲಿ(OTT) ಉರ್ಫಿ ಜಾವೇದ್ ಅವರು ಭಾಗವಹಿಸಿದ್ದರು. ಅಲ್ಲೂ ಕಾಲು ಕೆರ್ಕೊಂಡು ಜಗಳಕ್ಕೆ ಬರ್ತಾಳೆ ಅನ್ನೋ ಆಪಾದನೆ ಹೊತ್ತುಕೊಂಡಿದ್ದರು.

ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಿದ ಮಲಯಾಳಂ ಚಿತ್ರರಂಗ; ಕಾರಣವೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?