Priyanka Upendra's Phone Hack : ಬುದ್ಧಿವಂತನಿಗೆ ಹ್ಯಾಕರ್ ಕಾಟ, ಪ್ರಿಯಾಂಕ ಉಪೇಂದ್ರ ಫೋನ್ ಹ್ಯಾಕ್

Published : Sep 15, 2025, 12:11 PM IST
Priyanka Upendra, Upendra

ಸಾರಾಂಶ

Priyanka Upendra Phone Hack: ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಉಪೇಂದ್ರ ಹ್ಯಾಕರ್ ಬಾಯಿಗೆ ಆಹಾರ ಆಗಿದ್ದಾರೆ. ಅವರ ಫೋನ್ ಹ್ಯಾಕ್ ಆಗಿದೆ. ಈ ಬಗ್ಗೆ ಉಪೇಂದ್ರ ಮಾಹಿತಿ ನೀಡಿದ್ದಾರೆ. 

ಡಿಜಿಟಲ್ (Digital) ಬಳಕೆ ನಮ್ಮ ಕೆಲ್ಸವನ್ನು ಸಾಕಷ್ಟು ಸುಲಭಗೊಳಿಸಿದೆ. ಆದ್ರೆ ಹ್ಯಾಕರ್ ಹಾವಳಿ ಕೂಡ ಅಷ್ಟೇ ಹೆಚ್ಚಾಗಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ರೂ ಹ್ಯಾಕರ್ಸ್ ನಮಗೆ ಮೋಸ ಮಾಡ್ತಾರೆ. ಅಪರಿಚಿತ ಫೋನ್ ನಂಬರ್ ರಿಸೀವ್ ಮಾಡೋದೇ ಈಗ ಕಷ್ಟವಾಗಿದೆ. ಫೋನ್ ರಿಸೀವ್ ಮಾಡ್ತಿದ್ದಂತೆ ಬ್ಯಾಂಕ್ ಖಾತೆ ಖಾಲಿ ಮಾಡೋ ಹ್ಯಾಕರ್ಸ್, ಅದು – ಇದು ಅಂತ ಮರಳು ಮಾಡಿ ಫೋನ್ ಹ್ಯಾಕ್ ಮಾಡ್ತಾರೆ. ಈಗ ರಿಯಲ್ ಸ್ಟಾರ್ ಉಪೇಂದ್ರ (Upendra) ಪತ್ನಿ ಹಾಗೂ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ (Priyanka) ಉಪೇಂದ್ರ ಫೋನ್ ಹ್ಯಾಕ್ ಆಗಿದೆ. ಈ ಬಗ್ಗೆ ನಟ ಉಪೇಂದ್ರ, ತಮ್ಮ ಆಪ್ತರಿಗೆ, ಫ್ಯಾನ್ಸ್ ಗೆ ಮಾಹಿತಿ ನೀಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ ಉಪೇಂದ್ರ : ಉಪೇಂದ್ರ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ಫೋನ್ ಹ್ಯಾಕ್ ಆಗಿದೆ. ಅವರ ನಂಬರ್ ನಿಂದ ಯಾವುದೇ ಕರೆ ಬಂದ್ರೂ ನಂಬಬೇಡಿ. ಅವರು ಹಣ ಕೇಳಿದ್ರೆ ಕೊಡಬೇಡಿ ಅಂತ ಉಪೇಂದ್ರ ತಮ್ಮ ಫ್ಯಾನ್ಸ್ ಗೆ ಮಾಹಿತಿ ನೀಡಿದ್ದಾರೆ.

ಕೇರಳದ ಥಿಯೇಟರ್‌ನಲ್ಲಿ Kantara Movie 1 ರಿಲೀಸ್‌ ಆಗೋದಿಲ್ಲ; ನಟ! ಪೃಥ್ವಿರಾಜ್‌ ಸುಕುಮಾರನ್‌ ಕಾರಣ!

ಆಗಿದ್ದೇನು? : ಉಪೇಂದ್ರ ಹೇಳಿಕೆ ಪ್ರಕಾರ, ಪ್ರಿಯಾಂಕ ಉಪೇಂದ್ರ ಆನ್ಲೈನ್ ನಲ್ಲಿ ಯಾವ್ದೋ ವಸ್ತು ಆರ್ಡರ್ ಮಾಡಿದ್ರು. ಅವರಿಗೆ ಬೆಳಿಗ್ಗೆ ಫೋನ್ ಬಂದಿದೆ. ಆರ್ಡರ್ ಬಂದಿದೆ ಅಂತ ಪ್ರಿಯಾಂಕ ಭಾವಿಸಿದ್ದಾರೆ. ಅಷ್ಟೇ ಅಲ್ಲ ಅವರು ಹೇಳಿದಂತೆ ಫೋನ್ ಆಪರೇಟ್ ಮಾಡಿದ್ದಾರೆ. ಹ್ಯಾಶ್ ಟ್ಯಾಗ್ ಒತ್ತಿ, ಆ ನಂಬರ್ ಪ್ರೆಸ್ ಮಾಡಿ, ಈ ನಂಬರ್ ಪ್ರೆಸ್ ಮಾಡಿ ಅಂದಿದ್ದಾರೆ. ಕೋರಿಯರ್ ಇರ್ಬೇಕು ಅಂತ ಪ್ರಿಯಾಂಕ ಅವರು ಹೇಳಿದಂತೆ ಮಾಡಿದ್ದಾರೆ. ಹ್ಯಾಕರ್ಸ್ ಸುಲಭವಾಗಿ ಪ್ರಿಯಾಂಕ ಫೋನ್ ಹ್ಯಾಕ್ ಮಾಡಿದ್ದಾರೆ. ಇದಾದ್ಮೇಲೆ ಉಪೇಂದ್ರ ಆ ನಂಬರ್ ಗೆ ಕರೆ ಮಾಡಿದ್ರಿಂದ ಉಪೇಂದ್ರ ಫೋನ್ ಕೂಡ ಹ್ಯಾಕ್ ಆಗಿರುವ ಸಾಧ್ಯತೆ ಇದೆ.

ಫ್ಯಾನ್ಸ್ ಗೆ ಉಪೇಂದ್ರ ಮನವಿ : ಪ್ರಿಯಾಂಕಾ ಹಾಗೂ ನನ್ನ ಫೋನ್ ಎರಡೂ ಹ್ಯಾಕ್ ಆಗಿದೆ. ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ತೇವೆ. ಪೊಲೀಸರಿಗೆ ದೂರು ನೀಡ್ತೇವೆ. ನಮ್ಮಿಬ್ಬರ ಫೋನ್ ನಿಂದ ನಿಮಗೆ ಕರೆ ಬಂದ್ರೆ, ಮೆಸ್ಸೇಜ್ ಬಂದ್ರೆ, ಯಾರಾದ್ರೂ ಹಣ ಕೇಳಿದ್ರೆ ದಯವಿಟ್ಟೂ ನೀಡ್ಬೇಡಿ ಎಂದು ಉಪೇಂದ್ರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಎಲ್ಲರೂ ಎಚ್ಚರವಾಗಿರಿ ಅಂತ ಉಪೇಂದ್ರ ಹೇಳಿದ್ದಾರೆ.

ಹೂವಿನ ಬಾಣದಂತೆ... ವೈರಲ್​ ಹಾಡಿಗೆ ಸ್ವೀಟ್​ ದನಿ ಕೊಟ್ಟ Naa Ninna Bidalaare ಹಿತಾ ಪುಟ್ಟಿ!

ಅಭಿಮಾನಿಗಳ ಪ್ರತಿಕ್ರಿಯೇ ಏನು? : ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಹ್ಯಾಕರ್ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಫ್ಯಾನ್ಸ್ ಪ್ರತಿಕ್ರಿಯೆ ಶುರು ಮಾಡಿದ್ದಾರೆ. ಸೂಚನೆ ನೀಡಿದ್ದಕ್ಕೆ ಕೆಲ ಫ್ಯಾನ್ಸ್ ಧನ್ಯವಾದ ಹೇಳಿದ್ರೆ, ಉಪ್ಪಿಗೆ ಉಪ್ಪಿಟ್ಟು ತಿನ್ನಿಸಿದ್ದು ಯಾರು, ಉಪ್ಪಿಗೆ ಶಾಕ್ ಕೊಟ್ಟಿರೋರು ಯಾರು ಅಂತೆಲ್ಲ ತಮಾಷೆಯಾಗಿ ಕಮೆಂಟ್ ಕೂಡ ಮಾಡಿದ್ದಾರೆ. ಮತ್ತೆ ಕೆಲವರು, ಮುಂದಾಗುವ ಸಮಸ್ಯೆ ತಪ್ಪಿಸಬೇಕು ಅಂದ್ರೆ ಮೊಬೈಲ್ ಸೆಟ್ಟಿಂಗ್ ಹೇಗೆ ಬದಲಿಸಬೇಕು ಎನ್ನುವ ಬಗ್ಗೆ ಉಪೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ.

ದುಬೈನಲ್ಲಿ ಉಪೇಂದ್ರ : ಉಪೇಂದ್ರ, ಪತ್ನಿ ಪ್ರಿಯಾಂಕ ಹಾಗೂ ಮಕ್ಕಳ ಜೊತೆ ದುಬೈ ಪ್ರವಾಸ ಮುಗಿಸಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಪ್ರವಾಸದ ಖುಷಿ ಮುಗಿಯೋ ಮುನ್ನವೇ ಉಪ್ಪಿಗೆ ಕುಟುಂಬಕ್ಕೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?