ಕೇರಳದ ಥಿಯೇಟರ್‌ನಲ್ಲಿ Kantara Movie 1 ರಿಲೀಸ್‌ ಸಮಸ್ಯೆ ಬಗೆಹರಿದಿದೆ!

Published : Sep 15, 2025, 11:50 AM IST
actor prithviraj sukumaran ask profit in kantara movie collection

ಸಾರಾಂಶ

Kantara Movie 1: ನಟ ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಚಾಪ್ಟರ್‌ 1 ರಿಲೀಸ್‌ ಆಗಲು ದಿನಗಣನೆ ಶುರುವಾಗಿದೆ. ಹೀಗಿರುವಾಗ ಕೇರಳದಲ್ಲಿ ಸಿನಿಮಾ ರಿಲೀಸ್‌ಗೆ ಸಮಸ್ಯೆ ಉಂಟಾಗಿದ್ದು, ಈಗ ಸರಿ ಹೋಗಿದೆ. 

ರಿಷಬ್‌ ಶೆಟ್ಟಿ ನಟನೆಯ ‘ಕಾಂತಾರ ಸಿನಿಮಾ 1’ ರಿಲೀಸ್‌ ದಿನಾಂಕ ಹತ್ತಿರದಲ್ಲಿದೆ. ಆದರೆ ಈಗ ನೆಗೆಟಿವ್‌ ವಿಚಾರಗಳಿಗೆ ಈ ಸುದ್ದಿ ಭಾರೀ ಸೌಂಡ್‌ ಮಾಡ್ತಿದೆ. ಕೇರಳದಲ್ಲಿ ಈ ಸಿನಿಮಾ ರಿಲೀಸ್‌ಗೆ ಸಮಸ್ಯೆ ಬಂದಿದೆ. ಲಾಭದ ಶೇರ್‌ ವಿಚಾರವಾಗಿ ಸಿನಿಮಾ ರಿಲೀಸ್‌ ಮಾಡದಿರಲು ನಿರ್ಧಾರ ಮಾಡಲಾಗಿತ್ತು. ಈ ಸಮಸ್ಯೆ ಈಗ ಬಗೆಹರಿದಿದೆ. 

ಸಿನಿಮಾ ರಿಲೀಸ್‌ ಮಾಡಬೇಡಿ!

ಈ ಸಿನಿಮಾ ರಿಲೀಸ್‌ ಆದ ಎರಡು ವಾರಗಳಲ್ಲಿ ಎಷ್ಟು ಕಲೆಕ್ಷನ್‌ ಆಗುತ್ತದೆಯೋ ಅದರಲ್ಲಿ 55% ಲಾಭ ಕೊಡಬೇಕು ಎಂದು ನಟ ಪೃಥ್ವಿರಾಜ್‌ ಸುಕುಮಾರನ್‌ ಹಾಗೂ ಅವರ ಪತ್ನಿ ಸುಪ್ರಿಯಾ ಮೆನನ್‌ ಬೇಡಿಕೆ ಇಟ್ಟಿದ್ದರು. ಈ ರೀತಿ ಡಿಮ್ಯಾಂಡ್‌ ಮಾಡುವ ಹಾಗಿಲ್ಲ. ವಿತರಕರ ಒಪ್ಪಿಗೆ ಇಲ್ಲ ಅಂದರೆ ಸಿನಿಮಾವನ್ನು ರಿಲೀಸ್‌ ಮಾಡಬೇಡಿ ಎಂದು ಫಿಲ್ಮ ಎಕ್ಸಿಬಿಟರ್ಸ್‌ ಯುನೈಟೆಡ್‌ ಆರ್ಗನೈಸೇಶನ್‌ ಆಫ್‌ ಕೇರಳ ಹೇಳಿತ್ತು.

ಈ ರೀತಿ ಲಾಭ ಕೇಳಬೇಡಿ

ಸಿನಿಮಾ ರಿಲೀಸ್‌ ಆದ ಕೆಲ ದಿನಗಳಲ್ಲಿ ಆದ ಕಲೆಕ್ಷನ್‌ನಲ್ಲಿ 50% ಲಾಭ ಕೊಡಿ ಎಂದು ವಿತರಕರು ಕೇಳಬಹುದು ಎಂದು FEUOK ಅಧ್ಯಕ್ಷ ಕೆ ವಿಜಯ್‌ಕುಮಾರ್‌ ಹೇಳಿದ್ದಾರೆ. “ರಿಲೀಸ್‌ ಆದ ಎರಡು ವಾರಗಳ ಕಾಲದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ಅವರ ಪ್ರೊಡಕ್ಷನ್‌ ಹೌಸ್‌ 55% ಲಾಭವನ್ನು ಕೇಳಿದೆ. ಕೊರೊನಾ ಟೈಮ್‌ನಲ್ಲಿ 55% ಲಾಭ ಕೇಳಬಹುದು ಎಂದು ನಾವು ಹೇಳಿದ್ದೆವು. ಆದರೆ ಈ ರೀತಿ ಟೈಮ್‌ನಲ್ಲಿ ನಾವು ಇದಕ್ಕೆ ಸಮ್ಮತಿ ಕೊಡೋದಿಲ್ಲ” ಎಂದು ಅವರು ಹೇಳಿದ್ದಾರೆ.

ನಷ್ಟ ಆಗಿದೆ

“ಮಲಯಾಳಂ ಸಿನಿಮಾಗಳು ರಿಲೀಸ್‌ ಆದಾಗ ವಿತರಕರು 30-40% ಲಾಭ ಕೇಳಬಹುದು ಎಂದು ಅವರು ಹೇಳಿದ್ದಾರೆ. “Thundarum ಸಿನಿಮಾ ದೊಡ್ಡ ಹಿಟ್‌ ಆಯ್ತು. ಆದರೆ ಈ ಸಿನಿಮಾ ಬೇರೆ ರಾಜ್ಯಗಳಲ್ಲಿ ಪ್ರದರ್ಶನ ಕಂಡಾಗ ದೊಡ್ಡ ನಷ್ಟ ಆಯ್ತು. ಕೇರಳದಲ್ಲಿ ರಿಲೀಸ್‌ ಆಗುವ ಬೇರೆ ರಾಜ್ಯಗಳ ಬಿಗ್‌ ಪ್ರೊಡಕ್ಷನ್‌ ಹೌಸ್‌ ಸಿನಿಮಾಗಳಿಗೆ ದೊಡ್ಡ ಮಟ್ಟದ ಲಾಭ ಕೇಳುತ್ತಾರೆ” ಎಂದು ಕೂಡ ಅವರು ಹೇಳಿದ್ದಾರೆ.

ಸೂಪರ್‌ ಹಿಟ್‌ ಸಿನಿಮಾ

2022ರಲ್ಲಿ ರಿಲೀಸ್‌ ಆದ ಕಾಂತಾರ ಸಿನಿಮಾ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಯ್ತು. ಈ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ, ಆ ಬಳಿಕ ಬೇರೆ ರಾಜ್ಯಗಳಲ್ಲಿ ಕೂಡ ರಿಲೀಸ್‌ ಆಗಿತ್ತು. ಈ ಸಿನಿಮಾವನ್ನು ಬಾಲಿವುಡ್‌ ನಟರು ಕೂಡ ಹೊಗಳಿದ್ದರು. ಕೇವಲ ಕನ್ನಡ ರಾಜ್ಯಕ್ಕೆ ಸೀಮಿತ ಮಾಡಿ ಸಿನಿಮಾ ಮಾಡಲಾಗಿತ್ತಾದರೂ ಕೂಡ, ಈ ಸಿನಿಮಾದ ಕಂಟೆಂಟ್‌ ದೇಶ-ವಿದೇಶಗಳಲ್ಲಿ ರಿಲೀಸ್‌ ಆಗುವ ಹಾಗೆ ಮಾಡಿತು.

ಈ ಸಿನಿಮಾದ ಪ್ರಿಕ್ವೆಲ್‌ ಅಕ್ಟೋಬರ್‌ 2ರಂದು ದೇಶ-ವಿದೇಶಗಳಲ್ಲಿ ರಿಲೀಸ್‌ ಆಗಲಿದೆ. ಈ ಸಿನಿಮಾಕ್ಕೋಸ್ಕರ ರಿಷಬ್‌ ಶೆಟ್ಟಿ ಅವರು ಬೆಂಗಳೂರು ಬಿಟ್ಟು ಕೆರಾಡಿಯಲ್ಲಿದ್ದರು. ರುಕ್ಮಿಣಿ ವಸಂತ್‌ ಅವರು ಈ ಸಿನಿಮಾ ಹೀರೋಯಿನ್‌ ಕೂಡ ಹೌದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌