
ವಯಸ್ಸು 51 ಆದರೂ ಇನ್ನೂ ಚಿನಕುರುಳಿಯಂತೆ ಇದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ಹಾಟ್ ಲೇಡಿ ಎನ್ನಿಸಿಕೊಂಡಿದ್ದಾರೆ. ಡಿವೋರ್ಸ್ ಆಗಿ, ಈಗ ಬ್ರೇಕಪ್ ಆದ್ಮೇಲೂ ಈ ವಯಸ್ಸಿನಲ್ಲಿಯೂ ಇನ್ನೊಂದು ಹುಡುಕಾಟದಲ್ಲಿ ಇದ್ದೇನೆ ಎಂದು ಖುಲ್ಲಂ ಖುಲ್ಲಾ ಆಗಿಯೇ ಹೇಳಿಕೊಳ್ಳುತ್ತಾರೆ. ಅವರ ವೈಯಕ್ತಿಯ ಲೈಫ್ ಏನೇ ಇದ್ದರೂ ಫಿಟ್ನೆಸ್ಗೆ ಇನ್ನೊಂದು ಹೆಸರೇ Malaika Arora. ಇವರು ಹೋದಲ್ಲಿ ಬಂದಲ್ಲಿ ಇವರ ಸೌಂದರ್ಯದ ಮೇಲೆಯೇ ಎಲ್ಲರ ಕಣ್ಣು. ಅಜ್ಜಿಯಾದ್ರೂ ಇವೆಲ್ಲಾ ಶೋಕಿ ಬೇಕಿತ್ತಾ, ನೀಟಾಗಿ ಡ್ರೆಸ್ ಹಾಕಿಕೊಳ್ಳಬಾರದಾ ಎನ್ನುವ ಕಮೆಂಟ್ಸ್ ಕಾಣಬಹುದು. ತುಂಡುಡುಗೆ ತೊಟ್ಟು ಮೈಮಾಟ ಪ್ರದರ್ಶಿಸುವ ಕಾರಣ ಸದಾ ಇವರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈಚೆಗೆ ನಮ್ಮ ಬುಡಿಯಾ, ಬುಡ್ಡಿ, ಮುದುಕಿ ಹೀಗೆಲ್ಲಾ ಹೇಳುವುದಕ್ಕೆ ನೋವು ತೋಡಿಕೊಂಡಿದ್ದ ಮಲೈಕಾ, ವಯಸ್ಸಿನ ಆಧಾರದ ಮೇಲೆ ಯಾರನ್ನಾದರೂ ಯಾಕೆ ಅಳೆಯುತ್ತೀರಾ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಡಿವೋರ್ಸ್ ಆದ್ರೇನು, ಬಾಯ್ಫ್ರೆಂಡ್ ಕೈಕೊಟ್ರೇನು? ನಾನಿನ್ನೂ...ಎನ್ನುತ್ತಲೇ ಶಾಕಿಂಗ್ ಹೇಳಿಕೆ ಕೊಟ್ಟ ಮಲೈಕಾ!
ಅದೇನೇ ಇರಲಿ ಬಿಡಿ. ಮಲೈಕಾ ಅವರು ಯೋಗ, ಧ್ಯಾನದ ಮೂಲಕ, ಮತ್ತೊಂದಿಷ್ಟು ಮೇಕಪ್ ಮೂಲಕ ಸುಂದರ ಕಾಣೋದಂತೂ ಹೌದು. ಆದರೆ, ಅಸಲಿಗೆ ಇವರ ಈ ಸೌಂದರ್ಯದ ಹಿಂದೆ ಇರುವ ಶಾಕಿಂಗ್ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ಕಣ್ಣು ಒಂದನ್ನು ಬಿಟ್ಟು ಮುಖದ ಎಲ್ಲಾ ಭಾಗಗಳಿಗೆ, ಜೊತೆಗೆ ದೇಹಕ್ಕೂ ಕತ್ತರಿ ಹಾಕಿಸಿಕೊಂಡವರು, ಅರ್ಥಾತ್ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡವರು. ಅಷ್ಟಕ್ಕೂ ನಟಿಯರು ಅದರಲ್ಲಿಯೂ ಬಾಲಿವುಡ್ ಬ್ಯೂಟಿಗಳು ಎಂದೆಲ್ಲಾ ಕರೆಸಿಕೊಳ್ಳುವ ಬಹುತೇಕ ಮಂದಿ ತಮ್ಮ ಒಂದಲ್ಲ ಒಂದು ಅಂಗಕ್ಕೆ ಹೀಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡವರೇ. ಹುಟ್ಟುಸೌಂದರ್ಯ ದೇವರು ಕೊಟ್ಟರೆ, ಅವರಿಗೆ ಈ ಕೃತಕ ಸೌಂದರ್ಯ ನೀಡುವುದು ವೈದ್ಯರು. ಅದರಿಂದಲೇ ಅವರು ಅಷ್ಟು ಫೇಮಸ್ ಆಗುವುದು ಕೂಡ ನಿಜ.
ಆದರೆ ಇಷ್ಟು ವಯಸ್ಸಾದರೂ ಮುಖಕ್ಕೆ ನೆರಿಗೆ ಆಗಿಲ್ಲ, ಸೌಂದರ್ಯದ ರಾಣಿ ಎಂದೆಲ್ಲಾ ಕರೆಯುವುದು ಉಂಟು. ಅಷ್ಟಕ್ಕೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೂ ಇಂಥ ನಟಿಯರು ಯೋಗ, ಧ್ಯಾನ, ವರ್ಕ್ಔಟ್ನಿಂದ ದೇಹವನ್ನು ಕಾಪಾಡಿಕೊಳ್ಳುವುದೂ ಇದೆ. ಇದು+ಅದು ಎರಡೂ ಸೇರಿ ಇವರಿಗೆ ವಯಸ್ಸು ಎನ್ನುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಈ ವೈರಲ್ ವಿಡಿಯೋದಲ್ಲಿ ನಟಿಯ ಮೊದಲ ರೂಪವನ್ನು ನೀಡಲಾಗಿದೆ. ಮಲೈಕಾ ಅವರು ಮೂಗು, ಕೆನ್ನೆ, ಜಾ ಲೈನ್, ತುಟಿ ಸೇರಿದಂತೆ ಮುಖದ ಬಣ್ಣವನ್ನೂ ಸರ್ಜರಿ ಮೂಲಕ ಬದಲಾಯಿಸಿಕೊಂಡಿದ್ದಾರೆ. ಇನ್ನು ಅವರು ಯಥೇಚ್ಛವಾಗಿ ಪ್ರದರ್ಶಿಸುವ ದೇಹದ ಬಗ್ಗೆ ಅಂತೂ ಹೇಳುವುದೇ ಬೇಡ ಬಿಡಿ. ಒಟ್ಟಿನಲ್ಲಿ ನ್ಯಾಚುಲರ್ ಬ್ಯೂಟಿ ಎಂದು ಹೇಳುವವರು ಈ ವಿಡಿಯೋ ನೋಡಿದ್ರೆ ಅವರು ಪ್ಲಾಸ್ಟಿಕ್ ಬ್ಯೂಟಿ (Plastic beauty) ಎನ್ನುವುದು ತಿಳಿಯುತ್ತದೆ.
ಇದನ್ನೂ ಓದಿ: ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಕುಡಿಯಿರಿ... ನನ್ನಂತೆ ಫಿಟ್ & ಫೈನ್ ಆಗಿ ಎಂದ ನಟಿ Malaika Arora!
ಇನ್ನು, ಸದ್ಯ ಬಾಲಿವುಡ್ನಲ್ಲಿ ಹಾಟ್ ಟಾಪಿಕ್ಗಳಲ್ಲಿ ಒಂದಾಗಿರುವುದು ನಟರಾದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಕುರಿತು. ದಶಕದಿಂದ ರಿಲೇಷನ್ನಲ್ಲಿದ್ದ ಈ ನಟರು ಈಗ ಬ್ರೇಕಪ್ ಆಗಿರುವುದು ಕನ್ಫರ್ಮ್ ಆಗಿದೆ. ಇದಾಗಲೇ ಅರ್ಜುನ್ ಕಪೂರ್ ತಾವು ಸಿಂಗಲ್ ಎಂದು ಹೇಳಿದ್ದಾರೆ. ಹತ್ತು ವರ್ಷ ದೊಡ್ಡವಳಾಗಿರುವ ಮಲೈಕಾ ಜೊತೆ ದಶಕದವರೆಗೆ ಲಿವ್ ಇನ್ ರಿಲೇಷನ್ನಲ್ಲಿದ್ದ ಅರ್ಜುನ್ ಕೂಡ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಇದಾಗಲೇ ಮಲೈಕಾ ಕೂಡ ಹಲವಾರು ರೀತಿಯಲ್ಲಿ ತಾವು ಒಂಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ, ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998 ರಲ್ಲಿ ವಿವಾಹವಾದರು, ಆಗ ಮಲೈಕಾ ಸುಮಾರು 25 ವರ್ಷ ವಯಸ್ಸಿನವರಾಗಿದ್ದರು. ನಾಲ್ಕು ವರ್ಷಗಳ ನಂತರ, 2002 ರಲ್ಲಿ, ಅವರು ತಮ್ಮ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. 18 ವರ್ಷಗಳ ದಾಂಪತ್ಯದ ನಂತರ, ದಂಪತಿಗಳು 2016 ರಲ್ಲಿ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. ನಂತರ ಮಲೈಕಾ ಅರ್ಜುನ್ ಜೊತೆ ಸಂಬಂಧದಲ್ಲಿ ಬಿದ್ದರು. ಈಗ ಅರ್ಬಾಜ್ ಖಾನ್ ಶುರಾ ಖಾನ್ಗೆ ಮದ್ವೆಯಾಗಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.