ಚಿತ್ರ-ವಿಚಿತ್ರ ಬಟ್ಟೆಗಳ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿರೋ ಉರ್ಫಿ ಜಾವೇದ್ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಡಿಟೇಲ್ಸ್ ಇಲ್ಲಿದೆ...
ಚಿತ್ರ ವಿಚಿತ್ರ ಡ್ರೆಸ್ಗಳಿಂದಲೇ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ ನಟಿ ಉರ್ಫಿ ಜಾವೇದ್. ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.
ಇದೀಗ ನಟಿಯ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಅದೇನೆಂದರೆ, ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ-2’ ಚಿತ್ರದಲ್ಲಿ ಉರ್ಫಿ ಕಾಣಿಸಿಕೊಳ್ಳಲಿದ್ದಾರೆ. ಇಂಟರ್ನೆಟ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಒಂದು ನೋಟವನ್ನು ನೀಡಲಿರುವ ಈ ಚಿತ್ರದಲ್ಲಿ ಇಂಟರ್ನೆಟ್ ಸೆನ್ಸೇಷನ್ ಉರ್ಫಿಗೆ ಯೋಗ್ಯ ಎಂಬುದನ್ನು ಅರಿತು ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉರ್ಫಿ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದಾರೆ.
ಉರ್ಫಿಯ ಮತ್ತೊಂದು ರೂಪಕ್ಕೆ ಫ್ಯಾನ್ಸ್ ಭಾವುಕ! ದುಡ್ಡಿಗೆ ಬೆತ್ತಲಾಗುವರ ಮುಂದೆ ನಿಮಗೊಂದು ಸಲಾಂ ಎಂದ ನೆಟ್ಟಿಗರು
ಉರ್ಫಿ ಜಾವೇದ್ ಈ ಹಿಂದೆಯೂ ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಫೆರೋ ಕಿ ಹೇರಾ ಫೆರಿ', 'ಬೇಪನ್ನಾಹ್', 'ದಯಾನ್', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ', 'ಬಡೇ ಭಯ್ಯಾ', 'ಏ ಮೇರೆ ಹಮ್ಸಫರ್', 'ಚಂದ್ರ ನಂದಿನಿ' ಮತ್ತು 'ಮೇರಿ ದುರ್ಗಾ' ಸೇರಿದಂತೆ ಹಲವು ಸೀರಿಯಲ್ಗಳ ಮೂಲಕ ಮನೆಮಾತಾದವರೇ. ಅದರೆ ಈಗೀಗ ಅವೆಲ್ಲವನ್ನೂ ಬಿಟ್ಟು ಹುಚ್ಚು ಡ್ರೆಸ್ಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಟ್ರೋಲ್ಗಳ ಮೂಲಕವೇ ಸಾಕಷ್ಟು ಖ್ಯಾತಿ, ಕುಖ್ಯಾತಿ ಎರಡನ್ನೂ ಪಡೆಯುತ್ತಿದ್ದಾರೆ. ಅಂದಹಾಗೆ ಲವ್ ಸೆಕ್ಸ್ ದೋಖಾ ಚಿತ್ರದ ಪಾರ್ಟ್-1 2010ರಲ್ಲಿಯೇ ಬಿಡುಗಡೆಯಾಗಿ ಸಕತ್ ಸದ್ದು ಮಾಡಿತ್ತು. ಇದೀಗ ಬಹಳ ವರ್ಷಗಳ ಗ್ಯಾಪ್ನಲ್ಲಿ ಪಾರ್ಟ್-2 ಬರಲಿದೆ. ಪಾರ್ಟ್-1ನ ಮುಂದುವರೆದ ಭಾಗ ಇದು ಎಂದು ಇದಾಗಲೇ ಏಕ್ತಾ ಕಪೂರ್ ಘೋಷಿಸಿದ್ದಾರೆ. ಮೊದಲ ಪಾರ್ಟ್ನಲ್ಲಿ ರಾಜ್ಕುಮಾರ್ ರಾವ್, ನುಸ್ರತ್ ಭರುಚಾ ಮತ್ತು ಅಂಶುಮಾನ್ ಝಾ ಅವರಂತಹ ತಾರೆಯರು ನಟಿಸಿದ್ದರು. ಚಿತ್ರವು ಸಕತ್ ಹಿಟ್ ಆಗಿತ್ತು. ಅದನ್ನು ನೋಡಿದವರು ಈಗ ಪಾರ್ಟ್-2 ನೋಡಲು ಕಾಯುತ್ತಿದ್ದಾರೆ. ಅದರಲ್ಲಿ ಉರ್ಫಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವೂ ಇದೆ.
ಇತ್ತೀಚೆಗೆ ಉರ್ಫಿ, ಹೋಟೆಲ್ ಪರಿಚಾರಿಕೆಯಾಗಿ ಸಕತ್ ಸುದ್ದಿಯಾಗಿದ್ದರು. ಹೋಟೆಲ್ ಒಂದರಲ್ಲಿ ದುಡಿದಿದ್ದರು. ದುಡ್ಡು ಸಂಪಾದನೆ ಮಾಡಿದ್ದರು. ಇಲ್ಲಿ ಉರ್ಫಿ ಹೋಟೆಲ್ ಸರ್ವರ್ ಆಗಿ ಕೆಲಸ ಮಾಡಿದ್ದುದು ಪ್ರಚಾರಕ್ಕಾಗಿ ಅಲ್ಲ ಎನ್ನಲಾಗಿದೆ. ಬದಲಿಗೆ ಇಲ್ಲಿಯ ಸಂಪಾದನೆಯ ಹಣವನ್ನು ಕ್ಯಾನ್ಸರ್ ಪೇಷೆಂಟ್ ಸಹಾಯಾರ್ಥ ಇರುವ ಸಂಘಕ್ಕೆ ನೀಡಿದ್ದಾರೆ. ಉರ್ಫಿ ಇಲ್ಲಿ ಪರಿಚಾರಿಕೆಯಾಗಿ ದುಡಿದು ಬಂದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುತ್ತಿದ್ದಾರೆ.
ಆಮೀರ್ ಖಾನ್@ 59: ಆರು ರೂ. ಶಾಲಾ ಫೀಸ್ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..