ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ

By Shriram Bhat  |  First Published Mar 14, 2024, 4:47 PM IST

ಸಿನಿಮಾಗೆ ಬಂದ ಬಳಿಕ ನಾನು ಕ್ಯಾಮೆರಾ ಮುಂದೆ ನಟನೆಯನ್ನೇನೋ ಮಾಡುತ್ತಿದ್ದೆ. ಆದರೆ, ಶೂಟಿಂಗ್‌ಗೆ ಬಂದಾಗ ಯಾರೇ ಹೊಸಬರು ಎದುರಾದರೆ ಮಾತನ್ನೇ ಆಡುತ್ತಿರಲಿಲ್ಲ. ನನಗೆ ಹೊಸಬರೊಂದಿಗೆ ಮಾತನಾಡಲು ಈಗಲೂ ಸಂಕೋಚವಿದೆ. 


ಪ್ಯಾನ್ ಇಂಡಿಯಾ ನಟ ವಿಜಯ್ ಸೇತುಪತಿ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಜಯ್ ಸೇತುಪತಿ 'ನಾನು ಚಿಕ್ಕವನಾಗಿದ್ದಾಗ ಸ್ಕೂಲಿನಲ್ಲಿ ಎಲ್ಲರಿಗಿಂತ ಕುಳ್ಳಗಿದ್ದೆ. ನಾನು ಅದೆಷ್ಟು ಸಂಕೋಚದ ಸ್ವಭಾವದವನಾಗಿದ್ದೆ ಎಂದರೆ, ನಾನು ಸ್ಕೂಲಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ನಾನು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಬೆರೆಯುತ್ತಿರಲಿಲ್ಲ. ನನ್ನ ಹೈಟು ಕಡಿಮೆ ಇದೆ ಎನ್ನುವ ಕಾರಣಕ್ಕೆ ನಾನು ತುಂಬಾ ಮುಜುಗರ ಅನುಭವಿಸುತ್ತಿದ್ದೆ. 

ನನಗೆ ಕೇವಲ ಹೈಟ್ ಸಮಸ್ಯೆ ಮಾತ್ರ ಇರಲಿಲ್ಲ. ನನಗೆ ಭಾಷೆಯ ಸಮಸ್ಯೆ ಕೂಡ ಕಾಡುತ್ತಿತ್ತು. ಸ್ಟಡೀಸ್ ಮುಗಿದ ಮೇಲೆ ನಾನು ಅಕೌಂಟಂಟ್ ಕೆಲಸ ಕೂಡ ಮಾಡಿದ್ದೆ. ಪ್ರತಿದಿನವೂ ಹೊಸ ಹೊಸ ಬಯೊಡಾಟಾ ಮಾಡಿಕೊಂಡು ಹೋಗುತ್ತಿದ್ದೆ. ನನಗೆ ಕೆಲಸ ಸಿಗದಿರುವುದು 'ಸಿವಿ'ಯಿಂದ ಎಂದುಕೊಂಡಿದ್ದ ನಾನು ಪ್ರತಿ ಸಂದರ್ಶನಕ್ಕೆ ಹೋಗುವಾಗಲೂ ಹೊಸ ಸಿವಿಯನ್ನು ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಯಾವುದೂ ಕೆಲಸ ಮಾಡುತ್ತಿರಲಿಲ್ಲ. ಏಕೆಂದರೆ, ನನಗೆ ಚೆನ್ನಾಗಿ ಮಾತನಾಡಲು ಬರುತ್ತಿರಲಿಲ್ಲ. 

Tap to resize

Latest Videos

ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್‌ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್

ಸಿನಿಮಾಗೆ ಬಂದ ಬಳಿಕ ನಾನು ಕ್ಯಾಮೆರಾ ಮುಂದೆ ನಟನೆಯನ್ನೇನೋ ಮಾಡುತ್ತಿದ್ದೆ. ಆದರೆ, ಶೂಟಿಂಗ್‌ಗೆ ಬಂದಾಗ ಯಾರೇ ಹೊಸಬರು ಎದುರಾದರೆ ಮಾತನ್ನೇ ಆಡುತ್ತಿರಲಿಲ್ಲ. ನನಗೆ ಹೊಸಬರೊಂದಿಗೆ ಮಾತನಾಡಲು ಈಗಲೂ ಸಂಕೋಚವಿದೆ. ಕ್ಯಾಮೆರಾ ಮುಂದೆ ಅದೇಕೋ ಗೊತ್ತಿಲ್ಲ, ನನಗೆ ಯಾವುದೇ ಭಯ, ಸಂಕೋಚ ಕಾಡುವುದಿಲ್ಲ. ಫಸ್ಟ್ ಆಫ್ ಆಲ್, ನಾನು ಕ್ಯಾಮೆರಾ ಮುಂದೆ ಬಂದಾಗ ನಾನೆ ಆಗಿರುವುದಿಲ್ಲ' ಎಂದಿದ್ದಾರೆ ನಟ ವಿಜಯ್ ಸೇತುಪತಿ. 

ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್‌ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್

ನಾವೇನೇ ಮಾಡಲಿ, ಎಲ್ಲಿಗೇ ಹೋಗಲಿ, ನಮ್ಮ ತಪ್ಪುಗಳನ್ನು ಅರಿತುಕೊಂಡು ಸರಿಪಡಿಸಿಕೊಳ್ಳುತ್ತ ಹೋಗಬೇಕು. ಅದು ಯಾವುದೇ ಕ್ಷೇತ್ರವಿರಲಿ, ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಲೇ ಇದ್ದರೆ ನಮಗೆ ಯಶಸ್ಸು ಖಂಡಿತ ಸಿಗುವುದಿಲ್ಲ. ನಮ್ಮನ್ನು ನಾವು ಅರಿತುಕೊಂಡರೆ ಸಾಕು, ಮಿಕ್ಕಿದ್ದು ಎಲ್ಲವೂ ಸಮಯ ಬಂದಾಗ ಸಿಗುತ್ತದೆ' ಎಂದಿದ್ದಾರೆ ಇಂದು ಅಮೋಘ ಯಶಸ್ಸು ಪಡೆದಿರುವ ನಟ ವಿಜಯ್ ಸೇತುಪತಿ.

ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ಮಾರುತ್ತೇನೆ ಅಂದ್ರು ರಶ್ಮಿಕಾ; ಫುಲ್ ಶಾಕ್ ಆಗಿದಾರೆ ಫ್ಯಾನ್ಸ್! 

click me!