
ತೆಲುಗಿನ ಬಾಹುಬಲಿ ಖ್ಯಾತಿಯ ನಟ ರೆಬಲ್ ಸ್ಟಾರ್ ಪ್ರಭಾಸ್ ಅವರು ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿದೆ. ನಟ ಪ್ರಭಾಸ್ ಅವರಿಗೆ ನಿರೂಪಕಿ 'ನೀವು ತುಂಬಾ ಲೇಝಿ ಪರ್ಸನ್ ಅಂತೆ ಹೌದಾ?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ಕೊಟ್ಟ ಪ್ರಭಾಸ್ 'ಹೌದು, ನಾನು ಇಂಪಾರ್ಟೆಂಟ್ ಕೆಲಸ ಇಲ್ಲ ಅಂದ್ರೆ ಸ್ವಲ್ಪ ಲೇಝಿನೇ' ಎಂದು ನಗುತ್ತ ಉತ್ತರಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸಿದ ನಿರೂಪಕಿ, 'ನೀವು ಫೂಡ್ಡಿನಾ?' ಎಂದೂ ಕೇಳಿದ್ದಾರೆ. ಅದಕ್ಕೆ ನಟ ಪ್ರಭಾಸ್ ವಿಭಿನ್ನ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.
'ನಾನು ಸಿನಿಮಾ ನಟನಾಗಿರುವುದರಿಂದ ಸಹಜವಾಗಿಯೇ ಡಯಟ್‌ನಲ್ಲಿ ಇರುತ್ತೇನೆ. ಸಿನಿಮಾ ಪಾತ್ರಕ್ಕೆ ತಕ್ಕಂತೆ ನಮ್ಮ ಬಾಡಿಯನ್ನು ನಾವು ಶೇಪ್ ಮಾಡಿಕೊಳ್ಳಬೇಕಾಗಿರುವು ಕಾರಣಕ್ಕೆ ಮೋಸ್ಟ್ ಆಫ್ ದ ಟೈಮ್ ನಾವು ಡಯಟ್ ಪಾಲಿಸಲೇಬೇಕಾಗುತ್ತದೆ. ಆದರೆ, ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಸಹಜವಾಗಿಯೇ ನಮ್ಮನಮ್ಮ ಟ್ರೆಡಿಷನ್‌ಗೆ ಸಂಬಂಧಪಟ್ಟು ವಿಶೇಷ ತಿನಿಸುಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ನಾನು ಡಯಟ್ ಮಾಡುವುದಿಲ್ಲ, ಚೆನ್ನಾಗಿ ತಿನ್ನುತ್ತೇನೆ' ಎಂದಿದ್ದಾರೆ 'ಸಲಾರ್' ಖ್ಯಾತಿಯ ನಟ ಪ್ರಭಾಸ್.
ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್
ನಟ ಪ್ರಭಾಸ್ ' ವರ್ಷಂ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿ ತೆಲುಗು ಇಂಡಸ್ಟ್ರಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಬಳಿಕ 'ಡಾರ್ಲಿಂಗ್' ಸಿನಿಮಾದಲ್ಲಿ ನಟಿಸುವ ಮೂಲಕ ನಟ ಪ್ರಭಾಸ್ ಅವರಿಗೆ 'ಡಾರ್ಲಿಂಗ್ ಪ್ರಭಾಸ್' ಎಂಬ ಹೆಸರು ಅಂಟಿಕೊಂಡಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಜಗತ್ತಿನಾದ್ಯಂತ ಸೂಪರ್ ಹಿಟ್ ಆದ ಬಳಿಕವಂತೂ ನಟ ಪ್ರಭಾಸ್ ಅವರಿಗೆ 'ಬಾಹುಬಲಿ' ಪ್ರಭಾಸ್ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ.
ಹೊಟೆಲ್ ರೂಮಿನಲ್ಲಿ ಕುಂಕುಮ ಹಚ್ಚಿದೆ, ಅಲ್ಲೇ ಫಸ್ಟ್ ನೈಟ್ ಆಯ್ತು; ಲಕ್ಷ್ಮೀ ಮಾಜಿ ಪತಿ ಶಾಕಿಂಗ್ ಹೇಳಿಕೆ!
ಬಾಹುಬಲಿ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಸೋಲು ಅನುಭವಿಸಿ ಪ್ರಭಾಸ್ ಅವರು ಇನ್ನೇನು ಸ್ಟಾರ್ ಪಟ್ಟ ಕಳೆದುಕೊಳ್ಳುತ್ತಾರೆ ಎನ್ನುವಷ್ಟು ಕೆಳಗೆ ಹೋಗಿದ್ದರು. ಆದರೆ, ಇನ್ನೇನು ಸೋತು ಸುಣ್ಣವಾಗಿದ್ದಾರೆ ಎನ್ನುವಷ್ಟರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಂದ 'ಸಲಾರ್' ಚಿತ್ರವು ನಟ ಪ್ರಭಾಸ್ ಅವರಿಗೆ ಮರುಜನ್ಮ ನೀಡಿತು. ಸಲಾರ್ ಚಿತ್ರದ ಬಳಿಕ ಮತ್ತೆ ಪ್ರಭಾಸ್ ಸ್ಟಾರ್ ನಟ ಪಟ್ಟದಲ್ಲಿ ಮುಂದುವರೆದಿದ್ದು, ಹೊಸ ಹೊಸ ಚಿತ್ರಗಳಿಗೆ ಸಹಿ ಮಾಡುತ್ತಿದ್ದಾರೆ.
ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.