ಸನ್ನಿ ಲಿಯೋನ್ ಜೊತೆ ಪೋಸ್ ನೀಡಿದ ಉರ್ಫಿ; ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

Published : Mar 27, 2023, 11:14 AM IST
ಸನ್ನಿ ಲಿಯೋನ್ ಜೊತೆ ಪೋಸ್ ನೀಡಿದ ಉರ್ಫಿ; ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

ಸಾರಾಂಶ

ಹಾಟ್ ತಾರೆ ಸನ್ನಿ ಲಿಯೋನ್ ಜೊತೆ ಉರ್ಫಿ ಜಾವೆದ್ ಪೋಸ್ ನೀಡಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡಿ  ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಒಬ್ಬರು ಬಾಲಿವುಡ್‌ನ ಹಾಟ್ ನಟಿ ಮಾಜಿ ನೀಲಿ ತಾರೆ, ಮತ್ತೊಬ್ಬರು ಸಾಮಾಜಿಕ ಜಾಲತಾಣದ ಸೆನ್ಸೇಷನ್ ಉರ್ಫಿ ಜಾವೇದ್. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಬ್ಬರೂ ಇತ್ತೀಚಿಗಷ್ಟೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲ ಇಬ್ಬರೂ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿದ ಅಭಿಮಾನಿಗಳು ಖುಷಿಯಿಂದ ಜೋರಾಗಿ ಕೂಗಾಡಿದ್ದಾರೆ. ಸನ್ನಿ ಮತ್ತು ಉರ್ಫಿ ಇಬ್ಬರೂ ಒಟ್ಟಿಗೆ ಪೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. 

ನಟಿ ಸನ್ನಿ ಲಿಯೋನ್ ಸಿಲ್ವರ್ ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ. ಉರ್ಫಿ ಜಾವೇದ್ ಎಂದಿನಂತೆ ವಿಚಿತ್ರ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮನುಷ್ಯನ ಪಕ್ಕೆಲುಬಿನ ಹಾಗೆ ಇರುವ ಉಡುಗೆ ಧರಿಸಿ ಗಮನ ಸೆಳೆದಿದ್ದಾರೆ. ಉರ್ಫಿ ಖುಷಿಯಿಂದ ಸನ್ನಿ ಲಿನೋಯನ್ ನೋಡಿ ತಬ್ಬಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಮದುವೆ ಸುಳಿವು ನೀಡಿದ ನಟಿ ಉರ್ಫಿ; 'ಅಯ್ಯೋ ನನ್ನ ಹೆಸರು ಮಾತ್ರ ತಗೋಬೇಡ' ಎಂದ ನೆಟ್ಟಿಗರು

ಇಬ್ಬರ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಹರಿದು ಬಂದಿದೆ. ಸನ್ನಿ ಲಿಯೋನ್ ನೀಡಿದ ಅಭಿಮಾನಿಗಳು ಬಾರ್ಬಿ ಡಾಲ್..ಬಾರ್ಬಿ ಡಾಲ್ ಎಂದು ಕಾಮೆಂಟ್ ಮಾಡಿದ್ದಾರೆ. ಪಾಪರಾಜಿಯೊಬ್ಬರು ಮದುವೆ ಬಗ್ಗೆ ಪ್ರಶ್ನೆ ಮಾಡಿದರು. ಅವನು ಯಾವಾಗ ಮದುವೆ ಯಾಗುತ್ತಾನೆ? ಮೊದಲು ಅವನು ಮದುವೆಯಾಗಲಿ ಎಂದು ಹೇಳಿದರು. ಅವನಿಗೆ ಆಗಲೇ ಎರಡು ಬಾರಿ ಡೈಮೋರ್ಸ್ ಆಗಿದೆ ಎಂದು ಅಲ್ಲೇ ಇದ್ದರವರೊಬ್ಬರು ಪ್ರತಿಕ್ರಿಯೆ ನೀಡಿದರು. ಅದಕ್ಕೆ ಉರ್ಫಿ 3ನೇ ಬಾರಿಯೂ ಡೈವೋರ್ಸ್ ಆಗಲಿ ಎಂದು ಪ್ರತಿಕ್ರಿಯೆ ನೀಡಿದರು.

ಉರ್ಫಿ ಮೈ ತುಂಬಾ ಕಿವಿ ಹಣ್ಣು; ದುಬಾರಿ ಹಣ್ಣಿನ ರುಚಿ ನೋಡೋ ಭಾಗ್ಯ ನಮಗಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಉರ್ಫಿ ಯಾವಾಗಲೂ ವಿಚಿತ್ರ ಬಟ್ಟೆಗಳ ಮೂಲಕವೇ ಸದಾ ಸದ್ದು ಮಾಡುತ್ತಿರುತ್ತಾರೆ. ವಿಚಿತ್ರವಾಗಿ ಕಾಣಿಸಿಕೊಳ್ಳುವ ಉರ್ಫಿ ಪ್ರಶಸ್ತಿ ಸಮಾರಂಭದಲ್ಲೂ ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸನ್ನಿ ಲಿಯೋನ್ ಜೊತೆ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸಿದ್ದಾರೆ. ಸನ್ನಿ ಲಿಯೋನ್ ಅನೇಕ ಸಿನಿಮಾಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ನಟಿಸುತ್ತಿದ್ದಾರೆ. ಕನ್ನಡದಲ್ಲಿ ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಲಿಯೋನ್ ವಿಶೇಷ ಹಾಡಿನಲ್ಲಿ ಮಿಂಚಿದ್ದರು. ಸದ್ಯ ರಂಗೀಲಾ, ಕೋಕ ಕೋಲ, ಹೆಲೆನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?