Shah Rukh Khan: 'ಪಠಾಣ್' ದಾಖಲೆ ಮುರಿಯಲಿವೆಯಂತೆ ಶಾರುಖ್​ ಈ 10 ಚಿತ್ರಗಳು!

Published : Mar 26, 2023, 06:00 PM IST
Shah Rukh Khan: 'ಪಠಾಣ್' ದಾಖಲೆ ಮುರಿಯಲಿವೆಯಂತೆ ಶಾರುಖ್​ ಈ 10 ಚಿತ್ರಗಳು!

ಸಾರಾಂಶ

ಪಠಾಣ್​ ನಂತರ ಶಾರುಖ್​ ಖಾನ್​ ಅವರ ಮುಂಬರುವ 10 ಚಿತ್ರಗಳು ಕೂಡ ಬಾಕ್ಸ್​  ಆಫೀಸ್​ ಕೊಳ್ಳೆ ಹೊಡೆಯಲಿವೆ ಎನ್ನಲಾಗುತ್ತಿದೆ. ಅವು ಯಾವುವು?

ಕಳೆದ ಜನವರಿ. 26ರಂದು ಬಿಡುಗಡೆಯಾಗಿದ್ದ ಪಠಾಣ್​ ಚಿತ್ರ ಹಲವಾರು ದಾಖಲೆಗಳನ್ನು ಮುರಿದಿದೆ. ಮಕಾಡೆ ಮಲಗಿದ್ದ ಬಾಲಿವುಡ್​ ಇಂಡಸ್ಟ್ರಿಯನ್ನು ಒಂದೇ ಸಮನೆ ಮೇಲಕ್ಕೆತ್ತಿದೆ. 250 ಕೋಟಿ ರೂಪಾಯಿಗಳ ವೆಚ್ಚದಲ್ಲಿ  ನಿರ್ಮಾಣವಾಗಿದ್ದ ಪಠಾಣ್​ ಸಹಸ್ರಾರು ಕೋಟಿ ರೂಪಾಯಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವು ಈಗ ಇತಿಹಾಸ. ಆದರೆ  ಪಠಾಣ್ ನಂತರ ಶಾರುಖ್ ಖಾನ್ ಅವರ ಕೆಲವೊಂದು  ಚಿತ್ರಗಳೂ  ಬಾಕ್ಸ್ ಆಫೀಸ್ ಬುಡಮೇಲು ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.  ಇಂದು ಈ ವರದಿಯಲ್ಲಿ ಶಾರುಖ್ ಖಾನ್ ಬಾಕ್ಸ್ ಆಫೀಸ್ ಅನ್ನು ರಾಕ್ ಮಾಡಲಿರುವ ಆ ಚಿತ್ರಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಈ ಪಟ್ಟಿಯಲ್ಲಿ ಟೈಗರ್ 3 ರಿಂದ ಜವಾನ್ ಚಿತ್ರದವರೆಗಿನ ಹೆಸರುಗಳಿವೆ. ಹಾಗಾದರೆ ಈ ಪಟ್ಟಿಯನ್ನು ನೋಡೋಣ.

ಡಂಕಿ (Dunki), ಟೈಗರ್​ 3: ನಿರ್ದೇಶಕ ರಾಜ್ ಕುಮಾರ್ ಹಿರಾನಿ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಡಂಕಿ. ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಈ ಚಿತ್ರವು 22 ಡಿಸೆಂಬರ್ 2023 ರಂದು ಬಿಡುಗಡೆಯಾಗಲಿದೆ. ಇನ್ನು ಟೈಗರ್​ 3. ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಅವರ ಟೈಗರ್ 3 (Tiger 3)ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. 'ಪಠಾಣ್' ನಂತರ ಶಾರುಖ್ ಮತ್ತು ಸಲ್ಮಾನ್ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ದುಡ್ಡು ತಗೊಂಡು ಶಾರುಖ್​ರನ್ನು ಪಾಕ್​ ನಟಿ ಹೊಗಳ್ತಿದ್ದಾಳೆ ಎಂದ ಸೆನೆಟರ್​!

ಹೇ ರಾಮ್ ರಿಮೇಕ್ (Hey Ram Remake), ಆಪರೇಷನ್ ಖುಕ್ರಿ: ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ 'ಹೇ ರಾಮ್' ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ಖ್ಯಾತ ಸೌತ್ ಸ್ಟಾರ್ ಕಮಲ್ ಹಾಸನ್ ಹೇಳಿದ್ದರು. ಆದರೆ ಮಾಹಿತಿಗಾಗಿ, ಈ ಚಿತ್ರದ ಬಗ್ಗೆ ಇನ್ನೂ ಯಾವುದೇ ನವೀಕರಣವನ್ನು ಬಹಿರಂಗಪಡಿಸಲಾಗಿಲ್ಲ.  ಶಾರುಖ್ ಖಾನ್ ಅವರ ‘ಆಪರೇಷನ್ ಖುಕ್ರಿ’  (Operation Khukri) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಶಾರುಖ್ ಖಾನ್ ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆಲ್ಯೂಟ್  (Salute)​, ಇಝಾರ್, ಜವಾನ್​: ರಾಕೇಶ್ ಶರ್ಮಾ ಅವರ ಜೀವನಚರಿತ್ರೆ ಸೆಲ್ಯೂಟ್​ ಚಿತ್ರದಲ್ಲಿ ಶಾರುಖ್ ಖಾನ್ ಅವರನ್ನು ಕಾಣಬಹುದು. ವರದಿಯ ಪ್ರಕಾರ ಆಮೀರ್ ಖಾನ್ ಈ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಇದಾದ ನಂತರ ಶಾರುಖ್ ಹೆಸರು ಚರ್ಚೆಯಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಅವರನ್ನು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಇಝಾರ್' (Izhaar) ಚಿತ್ರದಲ್ಲಿ ಕಾಣಬಹುದು. ಆದರೆ ಈ ಬಗ್ಗೆ ಇನ್ನೂ ನವೀಕರಣಗಳು ಬರಬೇಕಿದೆ. ಈ ದಿನಗಳಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ (Jawan) ಚಿತ್ರವೂ ಚರ್ಚೆಯಲ್ಲಿದೆ. ಶಾರುಖ್ ಖಾನ್ ಅವರ ಈ ಚಿತ್ರ 2 ಜೂನ್ 2023 ರಂದು ಬಿಡುಗಡೆಯಾಗಲಿದೆ.

Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?

ಇವುಗಳ ಜೊತೆಗೆ,  ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿ YRF ಸ್ಪೈ ಯೂನಿವರ್ಸ್‌ನಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಈ ಚಿತ್ರದಲ್ಲಿ ಪಠಾಣ್ ಮತ್ತು ಟೈಗರ್ ಪರಸ್ಪರ ವಿರುದ್ಧವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಶಿಮಿತ್ ಅಮೀನ್ ಅವರ ಮುಂದಿನ ಚಿತ್ರದಲ್ಲಿಯೂ ಶಾರುಖ್​ ನಟಿಸಲಿದ್ದಾರೆ. ಶಾರುಖ್ ಖಾನ್ ಜೊತೆ ಚಕ್ ದೇ ಇಂಡಿಯಾ ಸಿನಿಮಾ ಮಾಡಿದ್ದ ನಿರ್ದೇಶಕ ಶಿಮಿತ್ ಮತ್ತೆ ಕಿಂಗ್ ಖಾನ್ ಜೊತೆ ಕೆಲಸ ಮಾಡಲಿದ್ದಾರೆ. ಈ ಬಾರಿ ಅವರು ರೊಮ್ಯಾಂಟಿಕ್ ಚಿತ್ರ ಮಾಡಲು ಹೊರಟಿದ್ದಾರೆ. ರಾಹುಲ್ ಧೋಲಾಕಿಯಾ ಶಾರುಖ್ ಖಾನ್ ಜೊತೆ 'ರಯೀಸ್' ಸಿನಿಮಾ ಮಾಡಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಈಗ ಇದರ ನಂತರ, ರಾಹುಲ್ ಧೋಲಾಕಿಯಾ ಶಾರುಖ್ ಖಾನ್ ಜೊತೆ ಫೈಟರ್ ತುಕಾರಾಂ ಆಧಾರಿತ ಚಿತ್ರವನ್ನು ನಿರ್ಮಿಸಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?