ರಣಬೀರ್​ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?

By Suchethana D  |  First Published Oct 4, 2024, 9:02 PM IST

ಅನಿಮಲ್​ ಚಿತ್ರದಲ್ಲಿ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ರಾತ್ರೋರಾತ್ರಿ ನ್ಯಾಷನಲ್​ ಕ್ರಷ್​ ಆಗಿದ್ದ ತೃಪ್ತಿ ಡಿಮ್ರಿ ಈಗ ಹೀಗೆ ಮೋಸ ಮಾಡೋದಾ?  5 ಲಕ್ಷ ಟೋಪಿ ಹಾಕಿದ್ರಾ ನಟಿ? 
 


ಸಂದೀಪ್ ರೆಡ್ಡಿ ವಂಗಾ ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಯಾವಾಗ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ರೋ ಆಗ ಈಕೆಯ ಹುಡುಕಾಟ ಗೂಗಲ್​ನಲ್ಲಿ ಜೋರಾಯಿತು.  ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿತ್ತು.  ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದರು ಈ ಬೆಡಗಿ.  ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡರು. ರಾತ್ರೋರಾತ್ರಿ ನ್ಯಾಷನಲ್​  ಕ್ರಷ್​ ಕೂಡ ಆದರು.  ಅನಿಮಲ್​ ಚಿತ್ರದಲ್ಲಿ ಆಲಿಯಾ ಭಟ್​ ಪತಿ ರಣಬೀರ್​ ಕಪೂರ್​ ಜೊತೆ ಬೆತ್ತಲಾದ ಬಳಿಕ ಬ್ಯಾಡ್ ನ್ಯೂಸ್​ ಚಿತ್ರದಲ್ಲಿ ಕತ್ರೀನಾ ಕೈಫ್​ ಪತಿ ವಿಕ್ಕಿ ಕೌಶಲ್​ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡವರು ತೃಪ್ತಿ ಡಿಮ್ರಿ. 

ಇದೀಗ ಇಷ್ಟೆಲ್ಲಾ ಪ್ರಚಾರ ಗಿಟ್ಟಿಸಿಕೊಂಡಿದ್ದು, ಟ್ರೋಲ್​ ಆಗಿದ್ದು ಎಲ್ಲಾ ಸಾಕಾಗಿಲ್ಲ ಎಂದು ಮತ್ತಷ್ಟು ಪ್ರಚಾರಕ್ಕೆ ಬರಲು ನಟಿ 5 ಲಕ್ಷ ರೂಪಾಯಿ ಟೋಪಿ ಹಾಕಿದ್ರಾ? ಹೀಗೊಂದು ಗಂಭೀರ ಆರೋಪ ಕೇಳಿಬಂದಿದೆ.  ಜೈಪುರದಲ್ಲಿ ನಿಗದಿತ FICCI FLO ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೃಪ್ತಿ ಐದು ಲಕ್ಷ ರೂಪಾಯಿ ಮುಂಗಡ ಹಣ ಪಡೆದು ಅದನ್ನು ವಾಪಸ್​ ಕೂಡ ನೀಡದೆ, ಕಾರ್ಯಕ್ರಮಕ್ಕೂ ಹಾಜರಾಗಿಲ್ಲ ಎಂದು ಸಂಘಟಕರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ನಟಿಯ ಚಲನಚಿತ್ರಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವರನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟಕ್ಕೂ ತೃಪ್ತಿ ಅವರು ಈ ಕಾರ್ಯಕ್ರಮಕ್ಕೆ ಹೋಗುವುದಾಗಿ ಖುದ್ದು ಸೋಷಿಯಲ್​  ಮೀಡಿಯಾದಲ್ಲಿ ಅನೌನ್ಸ್​ಕೂಡ ಮಾಡಿಬಿಟ್ಟಿದ್ದರು. ಬೆತ್ತಲೆ ರಾಣಿಯನ್ನು ನೋಡಲು ಅಲ್ಲಿಯ ಜನರು ಉತ್ಸುಕರಾಗಿ ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಟಿ ಕಾರ್ಯಕ್ರಮವನ್ನೇ ರದ್ದು ಮಾಡಿಬಿಟ್ಟಿದ್ದಾರೆ. ಆದರೆ ಯಾವುದೇ ಮುನ್ಸೂಚನೆಯನ್ನೂ ಕೊಟ್ಟಿಲ್ಲವಂತೆ! 

Tap to resize

Latest Videos

undefined

ರಣಬೀರ್​ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ! 


FICCI FLO ದ ಅಧಿಕೃತ Instagram ಹಂಚಿಕೊಂಡಿರುವ ವಿಡಿಯೋದಲ್ಲಿ ನಟಿ,  “ನಾನು FICCI FLO ಈವೆಂಟ್ ಟೀಮ್ ಶಕ್ತಿಯ ಭಾಗವಾಗುತ್ತೇನೆ ಎಂದು ಖಚಿತಪಡಿಸಲು ನನಗೆ ಸಂತೋಷವಾಗಿದೆ. ಮಹಿಳೆಯರ ಶಕ್ತಿಯನ್ನು ಈ ಕಾರ್ಯಕ್ರಮ ಆಚರಿಸುತ್ತಿದೆ.  ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ FICCI FLO ಜೈಪುರ ಅಧ್ಯಾಯದ ಅಧ್ಯಕ್ಷರಾದ ಶ್ರೀಮತಿ ರಘುಶ್ರೀ ಪೊದ್ದಾರ್ ಅವರಿಗೆ ಧನ್ಯವಾದಗಳು. ನಾಳೆ ಮಧ್ಯಾಹ್ನ 12 ಗಂಟೆಗೆ ನಿಮ್ಮೆಲ್ಲರನ್ನೂ ಭೇಟಿಯಾಗೋಣ“ ಎಂದಿದ್ದರು. ಆದರೆ ದಿಢೀರ್​ ಎಂದು ಕ್ಯಾನ್ಸಲ್​ ಮಾಡಿದ್ರೆ ಪಾಪ ಆಯೋಜಕರಿಗೆ ಹೇಗಾಗಿರಬೇಡ. ಆದರೆ ದುಡ್ಡು ಪಡೆದಿರುವ ಆರೋಪವನ್ನು ನಟಿಯ ಮ್ಯಾನೇಜರ್​ ನಿರಾಕರಿಸಿದ್ದಾರೆ. ತೃಪ್ತಿ ಅವರು ದುಡ್ಡು ಪಡೆದಿಲ್ಲ. ಅವರು ಯಾರನ್ನೂ ಅಗೌರವಿಸಿಲ್ಲ. ಬದಲಿಗೆ ಅವರ ಮುಂಬರುವ ಚಿತ್ರ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಪ್ರಚಾರದಲ್ಲಿ ಬಿಜಿಯಾಗಿದ್ದರಿಂದ  ಬರಲು ಆಗಲಿಲ್ಲ. ಕಾರ್ಯಕ್ರಮಕ್ಕೆ ಬರಲು ಎಲ್ಲಾ ರೀತಿ ಟ್ರೈ ಮಾಡಿದ್ರು. ಸಂಘಟಕರಿಗೆ ಫೋನ್​ ಮಾಡಿ ಶೀಘ್ರವೇ ಬರುವುದಾಗಿಯೂ ಹೇಳಿದ್ದರು.  ಆದರೆ  ಕೊನೆಯ ಕ್ಷಣದಲ್ಲಿ ಕಷ್ಟವಾಯ್ತು ಎಂದಿದ್ದಾರೆ.

  ಆದರೆ ಇವೆಲ್ಲಾ ನೆಪಗಳು. ಪ್ರಚಾರ ಬೇಕಿತ್ತು ಆಕೆಗೆ, ಅದಕ್ಕಾಗಿಯೇ ಹೀಗೆ ಮಾಡಿದ್ದಾರೆ ಎನ್ನುವುದು ಸಂಘಟಕರ ಆರೋಪ. ಇನ್ನು ನಟಿಯ ಮುಂಬರುವ ಚಿತ್ರದ ಕುರಿತು ಹೇಳುವುದಾದರೆ, ಇತ್ತೀಚೆಗೆ, ಅನೀಸ್ ಬಾಜ್ಮಿ ನಿರ್ದೇಶಿಸಿದ ಬಹು ನಿರೀಕ್ಷಿತ ಭೂಲ್ ಭುಲೈಯಾ 3 ಸೇರಿದಂತೆ ಇನ್ನು ಕೆಲವು  ಚಿತ್ರಗಳಿಗಾಗಿ ತೃಪ್ತಿ  ಗಮನ ಸೆಳೆದಿದ್ದಾರೆ, ಈ ಚಿತ್ರದಲ್ಲಿ ಇವರು  ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ.  ಇದು 1990 ರ ದಶಕದ ಕಥೆ ಆಧರಿಸಿರುವ  ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ  ಅವರು ಋಷಿಕೇಶದ ವಿದ್ಯಾ ಎಂಬ ಸಣ್ಣ-ಪಟ್ಟಣದ ಹುಡುಗಿಯಾಗಿ ನಟಿಸಿದ್ದಾರೆ ಮತ್ತು ಟ್ರೈಲರ್ ಈಗಾಗಲೇ 90 ರ ದಶಕದ ವೈಬ್ ಮತ್ತು ಹಾಸ್ಯಮಯ ಒಳನೋಟಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ರಾಜ್‌ಕುಮಾರ್ ರಾವ್ ಅವರನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಟ್ವಿಸ್ಟ್‌ನೊಂದಿಗೆ ಕ್ಲಾಸಿಕ್ ಪ್ರೇಮಕಥೆಯನ್ನು ರಿಫ್ರೆಶ್ ಮಾಡುವ ಭರವಸೆ ನೀಡುತ್ತದೆ. ಇನ್ನು ವಿಕ್ಕಿ ಕೌಶಲ್​ ಅವರು,  ಲಕ್ಷ್ಮಣ್ ಉಟೇಕರ್ ಅವರ ಛಾವಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಅಲ್ಲಿ ಅವರು ಮರಾಠ ದೊರೆ ಮತ್ತು ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಪಾತ್ರ ಮಾಡುತ್ತಿದ್ದಾರೆ.  

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

 

click me!