ಯಶ್ ಮಾತು, ಫೋಟೋನಾದ್ರೂ ಇತ್ತೀಚೆಗೆ ನೋಡೋಕೆ ಸಿಗುತ್ತೆ. ಅವರ ಡ್ಯಾನ್ಸ್ ನೋಡಿ ಯಾವ ಕಾಲ ಆಯ್ತಲ್ಲಾ ಅನ್ನೋರಿಗೆ ಇಲ್ಲಿದೆ ಲೇಟೆಸ್ಟ್ ಡ್ಯಾನ್ಸ್ ವೀಡಿಯೋ. ಟಗರು ಹಾಡಿಗೆ ಯಶ್ ಏನ್ ಮಸ್ತ್ ಸ್ಟೆಪ್ ಹಾಕಿದ್ದಾರೆ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಸದ್ಯ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅದರ ನಡುವೆ ಮಗನ ಬರ್ತ್‌ಡೇಗೆ ಬಿಡುವು ಮಾಡಿಕೊಂಡಿದ್ದಾರೆ. ಇರೋ ಅವಕಾಶದಲ್ಲೇ ಮಗನ ಬರ್ತ್‌ಡೇ ಸೆಲೆಬ್ರೇಶನ್ ಅನ್ನು ಸಿಂಪಲ್ಲಾಗಿ ಮಾಡಿದಂಗಿದೆ. ಆದರೆ ಭರ್ಜರಿಯಾಗಿ ಆಗಿದ್ದು ಯಶ್ ಡ್ಯಾನ್ಸ್. ಇತ್ತೀಚೆಗೆ ಆಕ್ಷನ್ಸ್ ಸಿನಿಮಾಗಳ ಹಿಂದೆ ಬಿದ್ದಿರೋ ಯಶ್ ಡ್ಯಾನ್ಸ್ ಮಾಡೋದನ್ನೇ ಮರೆತಿದ್ದಾರ ಅಂತ ಒಂದಿಷ್ಟು ಜನ ಮಾತಾಡಿಕೊಳ್ತಿದ್ರು. ಅದಕ್ಕೆ ಉತ್ತರ ಅನ್ನೋ ಹಾಗೆ ಯಶ್ ಮಸ್ತಾಗಿ ಶಿವಣ್ಣನ ಟಗರು ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೀಡಿಯೋ ಹೊರಬಿದ್ದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಟ್ಟಿದೆ. ಯಶ್ ಡ್ಯಾನ್ಸ್ ನೋಡಿ ಯಾವ ಕಾಲ ಆಗಿತ್ತು ಮಗ ಅಂತ ಅವರ ಫ್ಯಾನ್ಸ್ ಎಲ್ಲ ತಮ್ಮ ನೆಚ್ಚಿನ ನಟನ ಡ್ಯಾನ್ಸ್ ಅನ್ನು ಕಣ್ತುಂಬಿಕೊಂಡಿದ್ದಾರೆ.
ಜೊತೆಗೆ ಯಶ್ ಇಂಟರ್‌ನ್ಯಾಶನಲ್ ಲೆವೆಲ್‌ಗೆ ಏರಿದ್ರೂ ನಮ್ಮತನ ಬಿಡಲಿಲ್ಲ ನೋಡು ಅಂತ ಅಭಿಮಾನದಿಂದ ಮಾತಾಡಿಕೊಂಡಿದ್ದಾರೆ. ಕಾರಣ ತಮ್ಮ ಸಿನಿಮಾಕ್ಕೆ ಹಾಲಿವುಡ್ ತಂತ್ರಜ್ಞರನ್ನು ಕರೆಸಿದರೂ, ತನ್ನ ಸಿನಿಮಾವನ್ನು ಹಾಲಿವುಡ್ ರೇಂಜ್‌ನಲ್ಲಿ ಮಾಡಿದ್ರೂ ಯಶ್ ಇಲ್ಲಿ ಸ್ಟೆಪ್ಸ್ ಹಾಕಿರೋದು ಪಕ್ಕಾ ಲೋಕಲ್ ಹಾಡಿಗೆ. ಅದರಲ್ಲೂ ಹೆಚ್ಚಿನೆಲ್ಲ ಕನ್ನಡ ಆರ್ಕೆಸ್ಟ್ರಾಗಳಲ್ಲಿ ಕಡ್ಡಾಯವಾಗಿ ಇದ್ದೇ ಇರುವ ಫೇಮ್ ಡ್ಯಾನ್ಸ್ ಗೆ ಯಶ್ ಹೆಜ್ಜೆ ಹಾಕಿದ್ದಾರೆ.
ಕೊಳಕು ಕಾಮೆಂಟ್ ನಿಮ್ಮ ಸಂಸ್ಕಾರ ತೋರಿಸುತ್ತೆ, ಅಂಥಾ ಅಸಹ್ಯವನ್ನ ಕಣ್ಣೆತ್ತಿಯೂ ನೋಡಲ್ಲ : ಜನ್ಮಜಾಲಾಡಿದ ನಿವೇದಿತಾ ಗೌಡ
ಈ ಹಾಡಿನ ಹಿನ್ನೆಲೆಯಲ್ಲಿ ಅವರ ಮಗ ಯಥರ್ವನ ಬರ್ತ್ ಡೇ ಗೆ ಸಂಬಂಧಿಸಿದ ಬೋರ್ಡ್‌ಗಳೆಲ್ಲ ಇವೆ. ಜೊತೆಗೆ ಅವರ ಇಬ್ಬರೂ ಮಕ್ಕಳೂ ಜೊತೆಗಿದ್ದಾರೆ. ಯಥರ್ವವನನ್ನು ರಾಧಿಕಾ ಪಂಡಿತ್ ಎತ್ತಿಕೊಂಡು ಯಶ್ ಜೊತೆ ಸ್ಟೆಪ್ಸ್ ಹಾಕಲು ಪ್ರಯತ್ನಿಸಿದ್ದಾರೆ. ಇನ್ನೊಂದು ಕಡೆ ಪುಟಾಣಿ ಮಗಳು ಆಯ್ರಾ ಕೂಡ ಅಪ್ಪನ ಡ್ಯಾನ್ಸ್‌ಗೆ ಸ್ಟೆಪ್ಸ್ ಹಾಕೋ ಜೊತೆಗೆ ಅವರ ಡ್ಯಾನ್ಸ್ ಅನ್ನು ಬೆರಗಾಗಿ ನೋಡಿದ್ದಾಳೆ. ಏಕೆಂದರೆ ಶೂಟಿಂಗ್, ಸಿನಿಮಾ ಕೆಲಸ ಅಂತ ಸದಾ ಬ್ಯುಸಿ ಇರುವ ಯಶ್ ಅವಳಿಗೆ ಸಿಗೋದು ಅಪರೂಪ. ಅಂಥಾದ್ರಲ್ಲಿ ಡ್ಯಾನ್ಸ್ ಮಾಡೋದಂತೂ ಕಾಣೋದಕ್ಕೇ ಸಿಗಲ್ಲ. ಹೀಗಿರುವಾಗ ಅಪ್ಪ ಎಲ್ಲ ಮರೆತು ತಮ್ಮನ ಬರ್ತ್ ಡೇ ನೆವದಲ್ಲಿ ಆ ಲೆವೆಲ್‌ಗೆ ಡ್ಯಾನ್ಸ್ ಮಾಡಿದರೆ ಮಗಳಿಗೆ ಖುಷಿ ಆಗದೇ ಇರುತ್ತಾ?
ಇದರ ಜೊತೆಗೆ ಸಿನಿಮಾ ಮಂದಿಯೂ ಜೊತೆಗೂಡಿದ್ದಾರೆ. ಯಶ್ ಜೊತೆಗೆ ಅನೇಕ ಮಂದಿ ಸೆಟ್ ಹುಡುಗರಂತೆ ಕಾಣುವವರು ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್ ನೋಡುವವರಿಗೆ ಭರ್ಜರಿ ಮನರಂಜನೆಯನ್ನಂತೂ ನೀಡಿದೆ. ಇನ್ನೊಂದು ಕಡೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಇತ್ತೀಚೆಗೆ ಯಶ್ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್‌ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ತನ್ನ ಕನಸು, ಸಿನಿಮಾ ವ್ಯಾಮೋಹವನ್ನೆಲ್ಲ ಬಿಚ್ಚಿಟ್ಟಿದ್ದರು.
ಜೈ ಹನುಮಾನ್ ಫಸ್ಟ್ ಲುಕ್: ಆಂಜನೇಯನಾದ ಪ್ಯಾನ್‌ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ, 1000 ಕೋಟಿ ಪಕ್ಕಾ ಎಂದ ಫ್ಯಾನ್ಸ್!
ಜೊತೆಗೆ ತನ್ನ ಫ್ಯಾಮಿಲಿ ಸಪೋರ್ಟ್ ಅನ್ನೂ ಭಾವುಕವಾಗಿ ಸ್ಮರಿಸಿಕೊಂಡಿದ್ದರು. ತನ್ನ ಜೊತೆಗೆ ಇಂಡಸ್ಟ್ರಿಯಲ್ಲಿ ಬೆಳೆದ ತಾರಾ ಪತ್ನಿ ರಾಧಿಕಾ ತನ್ನ ಜೊತೆ ಯಾವತ್ತೂ ಸಿನಿಮಾಕ್ಕೆ ಎಷ್ಟು ಹಣ ಪಡೆಯುತ್ತೀ ಅಂತ ಮಾತಾಡದೇ ನೀನು ಹ್ಯಾಪಿಯಾಗಿದ್ದರೆ ಅಷ್ಟೇ ಸಾಕು ಅನ್ನೋ ಹಾಗಿರೋದೆ ತನ್ನನ್ನು ಈ ಲೆವೆಲ್‌ಗೆ ಬೆಳೆಸಿದೆ ಎಂದಿದ್ದರು. ಇವೆಲ್ ಯಶ್ ಆ ಲೆವೆಲ್‌ಗೆ ಬೆಳೆದರೂ ಎಷ್ಟು ಡೌನ್ ಟು ಅರ್ಥ್ ಇದ್ದಾರೆ ಅನ್ನೋದನ್ನು ತೋರಿಸಿತ್ತು.