
ಟಾಲಿವುಡ್ ರೋಮ್ಯಾಂಟಿಕ್ ಮ್ಯಾನ್ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ 8 ಮಿಲಿಯನ್ ಫಾಲೋವರ್ಸ್ ರನ್ನು ಸಂಪಾದಿಸಿದ್ದರು. ಇದೇ ಸಂಭ್ರಮದಲ್ಲಿ ತಮ್ಮ ಕುಟುಂಬಕ್ಕೆ ಸ್ಪೆಷಲ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮದುವೆಯಾಗಿ ಮಕ್ಕಳು ಮಾಡಿಕೊಳ್ಳಲು ನಾನ್ ರೆಡಿ; ಆದ್ರೆ ಮೆಚ್ಯುರಿಟಿ ಇನ್ನೂ ಬಂದಿಲ್ಲ!
ಇತ್ತೀಚೆಗೆ ಹಸ್ಕಿ ಎಂಬ ದುಬಾರಿ ನಾಯಿಯನ್ನು ತಮ್ಮ ಕುಟುಂಬಕ್ಕೆ ಬರ ಮಾಡಿಕೊಂಡಿದ್ದ ದೇವರಕೊಂಡ ಸ್ಟ್ರಾಮ್ ಎಂದು ನಾಮಕರಣ ಮಾಡಿದ್ದಾರೆ. ಸ್ಟ್ರಾಮ್ ಹೆಸರಿನಲ್ಲಿ ಒಂದು ಇನ್‌ಸ್ಟಾಗ್ರಾಂ ಪೇಜ್ ತೆರೆಯುವ ಬಗ್ಗೆ ಆಲೋಚಿಸುತ್ತಿದ್ದಾರಂತೆ ! ಲಾಕ್‌ಡೌನ್ ಪ್ರಾರಂಭದಿಂದಲೂ ಸ್ಟ್ರಾಮ್ ಹಾಗೂ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ವಿಜಯ್ ಫಿಟ್ನೆಸ್ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಿದ್ದಾರೆ.
ಶರ್ಟ್ ಲೆಸ್ ಆಗಿ ಸ್ಟ್ರಾಮ್ ಜೊತೆ ಪೋಸ್ ಕೊಟ್ಟ ವಿಜಯ್ 'ಮೈ ಕ್ಯೂಟ್ ಬೀಸ್ಟ್' ಎಂದು ಬರೆದುಕೊಂಡಿದ್ದಾರೆ. ಪೋಟೋ ನೋಡಿ ಥ್ರಿಲ್ ಆದ ಮಹಿಳಾ ಅಭಿಮಾನಿಗಳು 'ಇಲ್ಲಿ ಯಾರನ್ನು ನೋಡಿ ಕ್ಯೂಟ್‌ನೆಸ್ ಎಂದು ಕಾಮೆಂಟ್ ಮಾಡಬೇಕು' ಎಂದು ಹೇಳಿದ್ದಾರೆ. ಇನ್ನು ಕೆಲವರೂ 'ಅತಿ ಹೆಚ್ಚು ಕಾಮೆಂಟ್ ಪಡೆದುಕೊಳ್ಳುವ ಫೋಟೋ ಇದಾಗುತ್ತದೆ ದೇವರಕೊಂಡ' ಎಂದು ಹೇಳಿದ್ದರೆ ಮತ್ತಷ್ಟು ಜನ ಸ್ಟ್ರಾಮ್ ವಿತ್ ದೇವರಕೊಂಡ ಫ್ಯಾಮಿಲಿ ಫೋಟೋ ಶೇರ್ ಮಾಡಿ ಪ್ಲೀಸ್' ಎಂದು ಕೇಳಿಕೊಂಡಿದ್ದಾರೆ.
'ಗೀತಾ ಗೋವಿಂದಂ' ನೋಡಿ ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುಧಾಮೂರ್ತಿ!
ಇದೆಲ್ಲದರ ಜೊತೆ ವಿಜಯ್ ದೇವರಕೊಂಡು ತೆಲುಗು ಬಿಗ್ ಬಾಸ್ ಸೀಸನ್ 4ರಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ. ಈಗಾಗಲೇ 3 ಸೀಸನ್ ನಿರೂಪಣೆ ಮಾಡಿರುವ ಅಕ್ಕಿನೇನಿ ನಾಗಾರ್ಜುನ ಈ ರಿಯಾಲಿಟಿ ಶೋನಿಂದ ಹೊರ ಬರಲಿದ್ದಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಸಹಜವಾಗಿ ಮೂಡಿದೆ. ಈ ಎಲ್ಲಾ ಅನುಮಾನಗಳಿಗೆ ಶೋ ಪ್ರಾರಂಭಗೊಂಡ ನಂತರ ಉತ್ತರ ಸಿಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.