
ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಂತೆ ನಟ-ನಟಿಯರು ಮನೆಯ ಮುಂದೆ ದುಬಾರಿ ಕಾರುಗಳನ್ನು ತಂದು ನಿಲ್ಲಿಸುತ್ತಾರೆ. ಒಂದೇ ಕಾರಾದರೆ ಓಕೆ, ಎರಡು ಮೂರು ಇದ್ರೆ ಕಾರಿನ ನಂಬರ್ ಸೀರಿಸ್ ಮಾಡುತ್ತಾರೆ. ವಿಜಯ್ ದೇವರಕೊಂಡ ಕೂಡ ಹಾಗೆ ಕ್ರೇಜಿಯಾಗಿ ನಂಬರ್ ಇಟ್ಟಿದ್ದಾರೆ.
ವಿಜಯ್ ಬಳಿ ಇರುವ ಬಿಳಿ ಬಣ್ಣ ಬಿಎಂಡಬ್ಲ್ಯೂ 5 ಸೆಡಾನ್ ಕಾರಿನ ಬೆಲೆ 60 ಲಕ್ಷ ರೂಪಾಯಿ. ಇದರ ನಂಬರ್ 1116. ವಿಚಿತ್ರವಾಗಿದೆ ಅಲ್ವಾ? ಈ ನಂಬರ್‌ನ ಮೊತ್ತವು ಒಟ್ಟು 9 ಆಗುತ್ತದೆ. ವಿಜಯ್‌ಗೆ 9 ಸಂಖ್ಯೆ ತುಂಬಾನೇ ಲಕ್ಕಿ, ಅವರು ಹುಟ್ಟಿದ ದಿನವೂ 9. ಇದೊಂದೇ ಕಾರಿಗೆ ಹೀಗೆ ಮಾಡಿದ್ದಾರೆ ಅಂದುಕೊಳ್ಳಬೇಡಿ. ವಿಜಯ್ ಬಳಿ ಇರುವ ಎಲ್ಲಾ ಕಾರುಗಳ ಒಟ್ಟು ಸಂಖ್ಯೆ 9 ಆಗುತ್ತದೆ.
ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ 'ಲೈಗರ್' ಚಿತ್ರದಲ್ಲಿ ವಿಜಯ್ ಅಭಿನಯಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಸಣ್ಣ ಸಣ್ಣ ಸುಳಿವು ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುತ್ತಿದ್ದಾರೆ. ಈ ನಡುವೆ ವಿಜಯ್ ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿ 15 ಕೋಟಿ ಬೆಲೆ ಬಾಳುವ ಮನೆ ನಿರ್ಮಾಣ ಮಾಡಿದ್ದಾರೆ. ಸ್ವತಃ ವಿಜಯ್ ಇಡೀ ಮನೆ ಡಿಸೈನ್ ಹಾಗೂ ಪ್ಲಾನಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಬಾಯಿಯಿಂದ ಚಿತ್ರ ಬಿಡಿಸಿ ಅಭಿಮಾನ ತೋರಿದ ಯುವತಿಗ ಸಲಾಂ ಎಂದ ದೇವರಕೊಂಡ!
ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದ ನಂತರ ವಿಜಯ್ ಲಕ್ ಬದಲಾಗಿದೆ. ಲಾಕ್‌ಡೌನ್ ವೇಳೆ ತಮ್ಮ ಸಾಕು ನಾಯಿಯ ಜೊತೆ ಹೆಚ್ಚಿನ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುತ್ತಿದ್ದ ವಿಜಯ್ ಸೈಲೆಂಟ್ ಆಗಿ ಸಿನಿಮಾ ಕತೆಗಳನ್ನು ಕೇಳುತ್ತಿದ್ದರಂತೆ. ಲೈಗರ್ ಬಿಡುಗಡೆಗೆ ಕಾಯುತ್ತಿರುವ ವಿಜಯ್ ಶೀಘ್ರವೇ ಮತ್ತೊಂದು ಚಿತ್ರ ಅನೌನ್ಸ್ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.