ಕ್ರಿಕೆಟರ್ ರೋಹಿತ್ ದಾಮೋದರ್‌ ಜೊತೆ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ ಮದುವೆ!

Published : Jun 28, 2021, 11:15 AM IST
ಕ್ರಿಕೆಟರ್ ರೋಹಿತ್ ದಾಮೋದರ್‌ ಜೊತೆ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ ಮದುವೆ!

ಸಾರಾಂಶ

ಅದ್ಧೂರಿಯಾಗಿ ನಡೆಯಿತು ರೋಹಿತ್ ದಾಮೋದರ್ ಮತ್ತು ಐಶ್ವರ್ಯಾ ಮದುವೆ. ಮುಖ್ಯಮಂತ್ರಿ ಸ್ಟಾಲಿನ್‌ನಿಂದ ಆಶೀರ್ವಾದ.

'ಜಂಟಲ್‌ಮ್ಯಾನ್',' ಅನ್ನಿಯನ್', 'ಶಿವಾಜಿ, 'ಎಂಧಿರನ್', '2.o' ಸಿನಿಮಾ ನಿರ್ದೇಶನ ಮಾಡಿರುವ ಶಂಕರ್‌ ಅವರ ಪುತ್ರಿ ಐಶ್ವರ್ಯಾ ಮತ್ತು ಕ್ರಿಕೆಟರ್ ರೋಹಿತ್ ದಾಮೋದರನ್ ಭಾನುವಾರ ವೈವಾಜಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಕೂಡ ಈ ಶುಭ ಕಾರ್ಯಕ್ಕೆ ಆಗಮಿಸಿ, ಶುಭ ಹಾರೈಸಿದ್ದಾರೆ. 

ಬಿಗ್‌ಬಾಸ್ ಮನೆಯಲ್ಲಿ ಮದ್ವೆ ವಿಷ್ಯಾನೇ ಮಾತನಾಡೋಲ್ಲ: ವೈಷ್ಣವಿ ಗೌಡ 

ಸರ್ಕಾರದ ನಿಯಮಾವಳಿ ಪ್ರಕಾರ 50ಕ್ಕಿಂತ ಕಡಿಮೆ ಜನರು ಮದುವೆಯಲ್ಲಿ ಭಾಗಿಯಗಿದ್ದರು. ಮದುವೆ ತಯಾರಿಯನ್ನು ಸ್ವತಃ ಶಂಕರ್ ಮತ್ತು ಪತ್ನಿ ಈಶ್ವರಿ ವಹಿಸಿದ್ದರು.  ಮದುವೆಯ ಅಲಂಕಾರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮುತ್ತುರಾಜ್‌ ಮಾಡಿದ್ದಾರೆ.  ಸರಳವಾಗಿ ಮದುವೆ ಮಾಡಿರುವ ಕಾರಣ ಶಂಕರ್  ಇನ್ನೂ ಒಂದೆರಡು ತಿಂಗಳು ನಂತರ ಅದ್ಧೂರಿಯಾಗಿ ಆರತಕ್ಷತೆ ಮಾಡುವ ಆಲೋಚನೆ ಮಾಡಿದ್ದಾರೆ. ಮದುವೆಗೆ ದಕ್ಷಿಣ ಭಾರತ ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ತಂತ್ರಜ್ಞರನ್ನು ಆಹ್ವಾನಿಸಬೇಕು ಎಂದು ಕೊಂಡಿದ್ದಾರೆ. 

ಶಂಕರ್ ಅವರ ಪುತ್ರಿ ಐಶ್ವರ್ಯ ವೃತ್ತಿಯಲ್ಲಿ ವೈದ್ಯೆ. ಉದ್ಯಮಿ ದಾಮೋದರ್ ಅವರ ಪುತ್ರ ರೋಹಿತ್ ಮಧುರೈ ಪ್ಯಾಂಥರ್ಸ್ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ.  ಮಹಾಬಲಿ ಪುರಂನಲ್ಲಿರುವ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ. ಮದು ಮಗಳು ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ವರ ಬಿಳಿ ಬಣ್ಣದ ಶೇರ್ವಾಣಿ ಧರಿಸಿದ್ದಾರೆ. ಇಬ್ಬರ ವಸ್ತ್ರವೂ ಡಿಸೈನರ್‌ ತಯಾರಿ ಮಾಡಿರುವುದು ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರೀ ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್‌; ಇನ್‌ಸ್ಟಾಗ್ರಾಮ್‌ ರೀಲ್ ತಂದ ಆಪತ್ತು ಎಂಥದ್ದು ಗೊತ್ತಾ?!
ಶೂಟಿಂಗ್​​ ಸೆಟ್​ನಲ್ಲಿ ಆಕಸ್ಮಿಕವಾಗಿ ಮುಗುತಿ ನುಂಗಿದ ಬಾಲಿವುಡ್​ ನಟಿ ಶೆಹನಾಜ್​- ಮುಂದಾದದ್ದು ಭಯಾನಕ