
ದಕ್ಷಿಣ ಭಾರತ ಚಿತ್ರರಂಗದ ಹಾಸ್ಯ ನಟಿ, ಟ್ರಾನ್ಸ್‌ಫಾರ್ಮೇಷನ್ ಕ್ವೀನ್ (Transformation Queen) ವಿದ್ಯುಲೇಖಾ ಕೆಲವು ದಿನಗಳ ಹಿಂದೆ ತಮ್ಮ ಹನಿಮೂನ್‌ನಿಂದ ಹಿಂದಿರುಗಿದ್ದಾರೆ. ಜಾಲಿ ಮೂಡ್ (Jolly Mood)ನಲ್ಲಿರುವ ನಟಿ ತಮ್ಮ ಟ್ರಿಪ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರೂ, ಎಂದೂ ವಿದ್ಯುಲೇಖಾರನ್ನು ಈ ಅವತಾರದಲ್ಲಿ ನೋಡಿರದ ಕಾರಣ ಟ್ರೋಲ್ (Troll) ಹಾಗೂ ಕೊಂಕು ಪ್ರಶ್ನೆಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ ಸುಮ್ಮನಿದ್ದರೆ ನಡೆಯುವುದಿಲ್ಲ ಎಂದು ನಟಿ ಎಲ್ಲರಿಗೂ ಉತ್ತರ ನೀಡಿದ್ದಾರೆ.
ನಟಿ ವಿದ್ಯುಲೇಖಾ (Vidyulekha Raman) ತುಂಬಾ ದಪ್ಪ ಇದ್ದ ಕಾರಣ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ತೂಕ (WeightLoss) ಇಳಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಅವರಿಗೆ ಪ್ರೀತಿ ಆಗಿದೆ. ಫಿಟ್ನೆಸ್ ಟ್ರೈನರ್ (Fitness Trainer) ಸಂಜಯ್ ಜೊತೆ ಸೆಪ್ಟೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹನಿಮೂನ್‌ಗೆಂದು ಮಾಲ್ಡೀವ್ಸ್ (Maldives) ಟ್ರಿಪ್ ಹೋಗಿದ್ದಾರೆ. ಕಡಲ ಕಿನಾರೆಯಲ್ಲಿ ಹಳದಿ (Yellow) ಬಿಕಿನಿ (Bikini) ಧರಿಸಿ ಕುಳಿತಿರುವ ಫೋಟೋ ಹಂಚಿಕೊಂಡು, 'ವರ್ಷಕ್ಕೆ ಎರಡು ಸಲ, 6 ತಿಂಗಳ ಅವಧಿಯ ವೆಕೇಷನ್ (Vacation) ಬೇಕಿದೆ,' ಎಂದು ಬರೆದುಕೊಂಡಿದ್ದಾರೆ.
ವಿದ್ಯುಲೇಖಾ ಫಿಟ್ (Fit) ಆಗಿರುವ ಕಾರಣ ಬಿಕಿನಿ ಸೂಟ್ ಆಗುತ್ತಿದೆ. ಆದರೆ ಕೆಲವು ಮೆಸೇಜ್ ಮೂಲಕ ನೆಟ್ಟಿಗರು ಕೆಟ್ಟ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ. ' ಹಾಯ್ ಸ್ನೇಹಿತರೇ, ಕೆಲವು ದಿನಗಳಿಂದ ನನಗೆ ನಾನ್ ಸ್ಟಾಪ್ ಮೆಸೇಜ್ ಬರುತ್ತಿವೆ. ನಿಮ್ಮ ಡಿವೋರ್ಸ್ (Divorce) ಯಾವಾಗ? ಎಂದು. ಅದು ನಾನು ಬಿಕಿನಿ ಧರಿಸಿ ಫೋಟೋ ಹಂಚಿಕೊಂಡಿರುವುದಕ್ಕೆ. ವಾವ್. Get out of 1920 aunties and uncles. ದಯವಿಟ್ಟು 2021ನೇ ವರ್ಷಕ್ಕೆ ಬನ್ನಿ. ಇಲ್ಲಿ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದು ಸಮಸ್ಯೆ ಅಲ್ಲ. ಸಮಾಜ ಯೋಚನೆ ಮಾಡುತ್ತಿರುವ ರೀತಿಯದ್ದೇ ಸಮಸ್ಯೆ. ಒಂದು ಹೆಣ್ಣು ತುಂಡ ಬಟ್ಟೆ ಧರಿಸುವ ರೀತಿಯೇ ವಿಚ್ಛೇದನಕ್ಕೆ ಕಾರಣವಾಗುತ್ತದೆ, ಎಂದರೆ ಯಾರೆಲ್ಲಾ ಖುಷಿಯಾಗಿ ಜೀವನ ನಡೆಸುತ್ತಿರುವವರು ಮಾತ್ರ ಸರಿಯಾಗಿ ಬಟ್ಟೆ ಧರಿಸಿರುತ್ತಾರೆ ಎಂದರ್ಥವೇ? ನರಕದಲ್ಲಿ ಇರುವವರೂ ಕೂಡ ಸರಿಯಾಗಿ ಬಟ್ಟೆ ಧರಿಸಿರುತ್ತಾರೆ. ಸದ್ಯ ನಾನು ಈ ವಿಚಾರದಲ್ಲಿ ತುಂಬಾನೇ ಲಕ್ಕಿ. ನನ್ನ ಪತಿ ಸಂಜಯ್ ನಿಮ್ಮೆಲ್ಲರಿಗಿಂತ ಬೇರೆ ರೀತಿಯ ಲೈಫ್ ಮಾರೆಲ್ ಹಾಗೂ ನಂಬಿಕೆಗಳನ್ನು ಹೊಂದಿದ್ದಾರೆ. ಅವರು ಹೇಳಿದ್ದಾರೆ, ಇಂತಹ ಕಾಮೆಂಟ್ ಹಾಗೂ ಮೆಸೇಜ್‌ಗಳನ್ನು ನಿರ್ಲಕ್ಷ್ಯ ಮಾಡು ಎಂದು. ಆದರೆ ಇದನ್ನ ಹೀಗೆ ಬಿಡಲು ನನಗೆ ಮನಸ್ಸಿಲ್ಲ,' ಎಂದು ವಿದ್ಯುಲೇಖಾ ಬರೆದುಕೊಂಡಿದ್ದಾರೆ.
'ನಿಮ್ಮ ಕೆಟ್ಟ ಮನಸ್ಸು, ದುರಾಲೋಚನೆ ಹಾಗೂ ಜೀವನವನ್ನು ನೋಡುವ ದೃಷ್ಟಿಯನ್ನು ನಾನು ಬದಲಾಯಿಸುವುದಕ್ಕೆ ಆಗುವುದಿಲ್ಲ. ಆದರೆ ನಿಮ್ಮ ಜೀವದಲ್ಲಿರುವ ಮಹಿಳೆಯರು ಈ ರೀತಿಯ sexist, Oppressive ಹಾಗೂ ಕೀಳು ಮಟ್ಟದ ಅವಮಾನಗಳನ್ನು ತಡೆದು ಕೊಂಡಿರಬಹುದು. ಅದಕ್ಕೆ ಆಕೆಯ ವ್ಯಕ್ತಿತ್ವಕ್ಕೆ ಬೆಲೆ ಸಿಗುತ್ತದೆ, ಎಂದು ಭಾವಿಸುವೆ. #LiveandLetLive' ಎಂದಿದ್ದಾರೆ ವಿದ್ಯುಲೇಖಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.