KBC ವೇದಿಕೆಯಲ್ಲಿ ಕಣ್ಣೀರಾದ ಜೆನಿಲಿಯಾ..! ಕ್ಯಾನ್ಸರ್ ಪೀಡಿತ ಮಕ್ಕಳ ಜೊತೆ ನಿಂತ ಜೋಡಿ

By Suvarna News  |  First Published Oct 7, 2021, 11:24 AM IST
  • ಕ್ಯಾನ್ಸರ್ ಪೀಡಿತ ಮಕ್ಕಳ ಬೆಂಬಲಕ್ಕೆ ನಿಂತ ಬಾಲಿವುಡ್ ಜೋಡಿ
  • ಕೆಬಿಸಿ ವೇದಿಕೆಯಲ್ಲಿ ಕಣ್ಣೀರಾದ ಜೆನಿಲಿಯಾ

ಬಾಲಿವುಡ್‌ನ ಫನ್ನಿ & ಕೂಲ್ ಜೋಡಿ ಭಾವುಕರಾದ ಘಟನೆ ನಡೆದಿದೆ. ರಿತೇಷ್ ದೇಶ್‌ಮುಖ್ ಹಾಗೂ ಜೆನಿಲಿಯಾ ಡಿಸೋಜ ಕೆಬಿಸಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ಯಾವಾಗಲೂ ಫನ್ನಿಯಾಗಿ ತಮಾಷೆ ಮಾಡುತ್ತಾ ಜಾಲಿಯಾಗಿರೋ ಬಾಲಿವುಡ್ ಸೆಲೆಬ್ರಿಟಿ ಜೋಡಿ ಅತ್ತಿದ್ದೇಕೆ ?

ಕೌನ್ ಬನೇಗಾ ಕರೋಡ್‌ಪತಿ 13 ರ ಸಂಚಿಕೆಯ ಹೊಸ ಪ್ರೋಮೋವನ್ನು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಇದು ಸೆಲೆಬ್ರಿಟಿ ಅತಿಥಿಗಳಾದ ರಿತೀಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಹಾಗೂ ಅವರು ಕೆಬಿಸಿಯಲ್ಲಿ ಆಡುವ ಕಾರಣವನ್ನು ವಿವರಿಸಿದೆ.

Tap to resize

Latest Videos

undefined

ಕ್ಯಾನ್ಸರ್ ಟ್ರೀಟ್‌ಮೆಂಟ್ ಕೇಂದ್ರದ ವಿಡಿಯೋ ಒಂದನ್ನು ಪ್ಲೇ ಮಾಡಿದಾಗ ಜೆನಿಲಿಯಾ ಭಾವುಕರಾಗಿ ಕಣ್ಣೀರು ಒರೆಸಿಕೊಂಡರು. ಮಕ್ಕಳು ಈಗ ಅನುಭವಿಸೋ ನೋವನ್ನು ನಾವೆಂದು ಅರ್ಥ ಮಾಡಿಕೊಳ್ಳಲಾರೆವು ಎಂದಿದ್ದಾರೆ ರಿತೇಷ್. ಅಂತಹ ಮಕ್ಕಳಿಗಾಗಿ ಹಣ ಸಂಗ್ರಹಿಸಲು ಮುಂದಾದ ಜೋಡಿಯ ಬಗ್ಗೆ ಅಮಿತಾಭ್ ಬಚ್ಚನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಬಿಸಿ ಶೋನಲ್ಲಿ ಮಗಳ ಈ ರಹಸ್ಯ ಬಯಲು ಮಾಡಿದ ಅಮಿತಾಬ್‌!

ಹಿಂದೆ ಕೆಬಿಸಿ 13 ಪ್ರೋಮೋದಲ್ಲಿ ರಿತೀಶ್ ಒಂದು ಮೊಣಕಾಲಿನ ಮೇಲೆ ನಿಂತು ಅಮಿತಾಬ್ ಅವರ ಸಿನಿಮಾ ಸಾಲುಗಳನ್ನು ಓದುತ್ತಿದ್ದು, ರಿತೀಶ್ ಸಹ ಶಹೆನ್ಶಾದಿಂದ ಅಮಿತಾಬ್ ಅವರ ಐಕಾನಿಕ್ ಲೈನ್‌ಗೆ ತನ್ನದೇ ಆದ ಟ್ವಿಸ್ಟ್ ಕೊಟ್ಟು ಹೇಳಿದ್ದಾರೆ. ನಾನು ನಿಮ್ಮ ಪತಿ, ಆದರೆ ನನ್ನ ಹೆಸರು ಜೆನಿಲಿಯಾ ಪತಿ ಎಂದು ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್ಪತಿ 13 ಪ್ರತಿ ಶುಕ್ರವಾರ ಪ್ರಸಿದ್ಧ ಅತಿಥಿಗಳನ್ನು ಒಳಗೊಂಡಿರುತ್ತದೆ. ಇತ್ತೀಚಿಗೆ ಪಂಕಜ್ ತ್ರಿಪಾಠಿ ಮತ್ತು ಪ್ರತೀಕ್ ಗಾಂಧಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ-ಫರಾ ಖಾನ್, ವೀರೇಂದ್ರ ಸೆಹ್ವಾಗ್-ಸೌರವ್ ಗಂಗೂಲಿ ಮತ್ತು ಜಾಕಿ ಶ್ರಾಫ್-ಸುನೀಲ್ ಶೆಟ್ಟಿ ಶೋನಲ್ಲಿ ಭಾಗವಹಿಸಿದ್ದರು.

ರಿತೀಶ್ ಮತ್ತು ಜೆನಿಲಿಯಾ ತಮ್ಮ ಮೊದಲ ಚಿತ್ರವಾದ ತುಜೆ ಮೇರಿ ಕಸಮ್ ಚಿತ್ರೀಕರಣದ ಸಮಯದಲ್ಲಿ ಮೊದಲು ಭೇಟಿಯಾದರು. ಇದು 2003 ರಲ್ಲಿ ಬಿಡುಗಡೆಯಾಯಿತು. ಹಲವು ವರ್ಷಗಳ ಡೇಟಿಂಗ್ ನಂತರ, ಅವರು ಫೆಬ್ರವರಿ 3, 2012 ರಂದು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳು, ರಹೈಲ್ ಮತ್ತು ರಿಯಾನ್.

click me!