
ಕಾಲಿವುಡ್ (Kollywood) ಸೂಪರ್ ಸ್ಟಾರ್, ಸಾಲ್ಟ್ ಆ್ಯಂಡ್ ಪೆಪ್ಪರ್ (Salt and Pepper) ಹ್ಯಾಂಡ್ಸಮ್ ತಲಾ ಅಜಿತ್ (Ajith Kumar) ಸೋಷಿಯಲ್ ಮೀಡಿಯಾ, ಪ್ರಚಾರ ಹಾಗೂ ಪ್ಯಾಪರಾಜಿಗಳಿಂದ ಸದಾ ಕೊಂಚ ದೂರ ಉಳಿಯುವ ವ್ಯಕ್ತಿ. ವೈಯಕ್ತಿಕ ವಿಚಾರಗಳನ್ನು ತುಂಬಾನೇ ಪ್ರೈವೇಟ್ ಆಗಿಡಲು ಇಷ್ಟ ಪಡುವ ವ್ಯಕ್ತಿಯೇ ಆದರೂ ಅಭಿಮಾನಿಗಳು ಶೇರ್ ಮಾಡಿಕೊಳ್ಳುವ ವಿಡಿಯೋ ಹಾಗೂ ಫೋಟೋಗಳ ಬಗ್ಗೆ ಏನೂ ಮಾತನಾಡುವುದಿಲ್ಲ.
ಆದರೆ ಕಳೆದು ವರ್ಷ ಅಜಿತ್ ಮತ್ತು ಪತ್ನಿ ಶಾಲಿನಿ (Shalini Ajith) ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಜಿತ್ ಅಸಿಸ್ಟೆಂಟ್ ಇಂಥ ವೀಡಿಯೋಗಳ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಿರುತ್ತಾರೆ. ಆದರೂ ಈ ರೀತಿ ಖಾಸಗೀ ವಿಚಾರಗಳು ಹೊರ ಬಂದರೆ, ಸುಮ್ಮನೆ ಬಿಡುವವರಲ್ಲ. ಆ ಆಸ್ಪತ್ರೆಯಲ್ಲಿ ನರ್ಸ್ (Nurse) ಆಗಿ ಕೆಲಸ ಮಾಡುತ್ತಿದ್ದ ಫಿರ್ಜಾನಾ (Farzana) ಹೆಸರಿನ ಮಹಿಳೆ ದಂಪತಿ ವಿಡಿಯೋ ಸೆರೆ ಹಿಡಿದು ಅಪ್ಲೋಡ್ ಮಾಡಿದ್ದರು. ಇದು ಅಜಿತ್ ಮ್ಯಾನೇಜ್‌ಮೆಂಟ್ ಗಮನಕ್ಕೆ ಬಂದ ಕೂಡಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅಂದಿನಿಂದಲೂ ಅಜಿತ್ ಕುಟುಂಬವನ್ನು ಭೇಟಿ ಮಾಡಲು ಫಿರ್ಜಾನಾ ಪ್ರಯತ್ನಿಸುತ್ತಲೇ ಇದ್ದರು.
ಕೆಲವು ತಿಂಗಳ ಹಿಂದೆ ಅಜಿತ್ ಪತ್ನಿ ಶಾಲಿನಿ ಅವರನ್ನು ಭೇಟಿ ಮಾಡಿ, ನಡೆದಿರುವ ಘಟನೆಯನ್ನು ವಿವರಿಸಿದ್ದರು. ಆಸ್ಪತ್ರೆ (Hospital) ಮ್ಯಾನೇಜ್‌ಮೆಂಟ್ ಜೊತೆ ಮಾತನಾಡಿದ ಶಾಲಿನಿ, ಫಿರ್ಜಾನಾ ಅವರನ್ನು ಮರು ಕೆಲಸಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಫಿರ್ಜಾನಾ ಆಸ್ಪತ್ರೆಯಲ್ಲಿರುವ ಕೆಲವು ಸಿಬ್ಬಂದಿ ಜೊತೆ ಹಾಗೂ ಇನ್ನಿತರ ಜೊತೆ ಕಿರಿಕ್ ಮಾಡಿಕೊಳ್ಳುವ ಕಾರಣ ಬೇಡವೇ ಬೇಡ ಎಂದು ಮ್ಯಾನೇಜ್‌ಮೆಂಟ್‌ನವರು ತಿಳಿಸಿದ್ದಾರೆ.
ಅಜಿತ್ ಕುಟುಂಬದಿಂದ ನನ್ನ ಕೆಲಸ ಹೋಗಿದೆ. ನನಗೆ ಬೇರೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ, ಎಂದು ನರ್ಸ್ ಫಿರ್ಜಾನಾ ಅಕ್ಟೋಬರ್ 6ರಂದು, ಅಜಿತ್ ಮನೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸ್ನೇಹಿತೆ ಸಹಾಯ ಪಡೆದು, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ತಕ್ಷಣವೇ ಸುತ್ತ ಇದ್ದ ಜನರು ನೀರು ಹಾಕಿ ನರ್ಸ್ ಫಿರ್ಜಾನಾರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಫಿರ್ಜಾನಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಸದ್ಯ ಅಜಿತ್ Valimai ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿರುವ ಈ ಚಿತ್ರದ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದೆ ತಂಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.