ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಕಥೆ ಲೀಕ್; ರಶ್ಮಿಕಾ ಪಾತ್ರ ಇಷ್ಟೇನಾ?

Published : Jun 20, 2022, 02:03 PM IST
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಕಥೆ ಲೀಕ್; ರಶ್ಮಿಕಾ ಪಾತ್ರ ಇಷ್ಟೇನಾ?

ಸಾರಾಂಶ

ಪುಷ್ಪ-2 ಸಿನಿಮಾದ ಕಥೆ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕಥೆ ಹರಿದಾಡುತ್ತಿದೆ. ವೈರಲ್ ಆಗಿರುವ ಸುದ್ದಿ ಪ್ರಕಾರ ಪುಷ್ಪ-2ನಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರ ಹೆಚ್ಚು ಇರುವುದಿಲ್ಲ. 

ಅಲ್ಲುಅರ್ಜುನ್ ನಟನೆಯ ಪುಷ್ಪ (Pushpa) ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ (Director Sukumar) ಸಾರಥ್ಯದಲ್ಲಿ ಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಈ ಸಿನಿಮಾಗೆ ಎಲ್ಲಾ ಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪುಷ್ಪ-2 (Pushpa-2)ಸಿನಿಮಾಗೆ ಚಿತ್ರತಂಡ ಸಜ್ಜಾಗಿದೆ. ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಸುತ್ತಿದೆ. ಮೂಲಗಳ ಪ್ರಕಾರ ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್‌ ಹಿನ್ನಲ್ಲೇ 2ನೇ ಭಾಗದ ಕಥೆಯಲ್ಲಿ ಬದಲಾವಮೆ ಮಾಡಲಾಗಿದೆ, ಮತ್ತಷ್ಟು ಪವರ್ ಫುಲ್ ಆಗಿ ಪುಷ್ಪ-2 ಅಭಿಮಾನಿಗಳ ಮುಂದೆ ಬರಲಿದೆ ಹಾಗಾಗಿ ತಡವಾಗತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. 

ಈ ನಡುವೆ ಸಿನಿಮಾದಿಂದ ಮತ್ತೊಂದು ಸುದ್ದಿ ವೈರಲ್ ಆಗಿದೆ. ಪುಷ್ಪ-2 ಸಿನಿಮಾದ ಕಥೆ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕಥೆ ಹರಿದಾಡುತ್ತಿದೆ. ವೈರಲ್ ಆಗಿರುವ ಸುದ್ದಿ ಪ್ರಕಾರ ಪುಷ್ಪ-2ನಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರ ಹೆಚ್ಚು ಇರುವುದಿಲ್ಲ. ಕಾರಣ ಶ್ರೀವಲ್ಲಿ ಸಿನಿಮಾದ ಪ್ರಾರಂಭದಲ್ಲಿಯೇ ಸಾಯುತ್ತಾಳಂತೆ. ಶ್ರೀವಲ್ಲಿಯನ್ನು ಆರಂಭದಲ್ಲಿ ಸಾಯಿಸಲಾಗುತ್ತಂತೆ. ಶ್ರೀವಲ್ಲಿ ಸಾವಿನ ಬಳಿಕ ಹೀರೋ ಮತ್ತು ವಿಲನ್ ನಡುವಿನ ದೃಶ್ಯಗಳೆ ಹೆಚ್ಚು ಇರಲಿದೆ ಎನ್ನಲಾಗುತ್ತಿದೆ. ರಶ್ಮಿಕಾ ಪಾತ್ರಕ್ಕೆ ಕತ್ತರಿಹಾಕಲಾಗಿದ್ದು ಪುಷ್ಪ 2 ಸಿನಿಮಾ ಅಲ್ಲು ಅರ್ಜುನ್ ಒನ್ ಮ್ಯಾನ್ ಶೋ ಆಗಿರಲಿದೆ. ಇಲ್ಲಿ ಪುಷ್ಪ ರಾಜ್ ಹೇಗೆ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಾನೆ ಹೇಗೆ ತನ್ನ ಯಶಸ್ಸಿನ ದಾರಿಯನ್ನು ಮುಂದುವರಿಸುತ್ತಾನೆ ಎನ್ನುವ ಅಂಶಗಳು ಇರುತ್ತವೆ. ಇಡೀ ಚಿತ್ರದಲ್ಲಿ ಪುಷ್ಪರಾಜ್ ಅಬ್ಬರವೇ ಹೆಚ್ಚಾಗಿ ಇರಲಿದೆಯಂತೆ.

ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ; ಕಾರಣವೇನು?

ರಾಕಿ ಭಾಯ್ ಫಾಲೋ ಮಾಡಿದ್ರಾ ಪುಷ್ಪರಾಜ್? 

ಇನ್ನು ಸಿನಿಮಾತಂಡ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋಗಲು ಸಜ್ಜಾಗಿದೆ. ಅಂದರೆ ಪುಷ್ಪರಾಜ್ ತನ್ನ ಸಾಮ್ರಾಜ್ಯವನ್ನು ವಿದೇಶದ ವರೆಗೂ ವಿಸ್ತರಿಸುತ್ತಾನೆ ಎನ್ನುವ ಸುಳಿವು ಸಿಕ್ಕಿದೆ. ಕೆಜಿಎಫ್-2 ಸಿನಿಮಾದ ರಾಕಿ ಭಾಯ್ ಹಾಗೆ ಪುಷ್ಪರಾಜ್ ಕೂಡ ವಿದೇಶದ ವರೆಗೂ ನನ್ನ ಬ್ಯುಸಿಸೆನ್ ಬೆಳೆಸುತ್ತಾನೆ. ವಿದೇಶದವರ ಜತೆನರವಾಗಿ ಡೀಲ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ ಎನ್ನುವ ಸುಳಿವು ವಿದೇಶಿ ಚಿತ್ರೀಕರಣ ರಿವೀಲ್ ಮಾಡಿದೆ. 

ಅಬ್ಬಾ..ಪುಷ್ಪ-2ಗಾಗಿ ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಅಲ್ಲು ಅರ್ಜುನ್ ..

ಅಂದಹಾಗೆ ಪುಷ್ಪ-2ನಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಫಹಾದ್ ಪಾತ್ರ ಮೊದಲ ಭಾಗದ ಕೊನೆಯಲ್ಲಿ ತೊರಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಫಹಾದ್ ಎಂಟ್ರಿ ಕೊಟ್ಟಿದ್ದಾರೆ. ಪಾರ್ಟ್-1 ರಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಪಾರ್ಟ್-2ನ ತೀವ್ರರತೆಯನ್ನು ತೋರುತ್ತಿತ್ತು. ಹಾಗಾಗಿ ಪಾರ್ಟ್-2ನಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ಜಿದ್ದಾಜಿದ್ದಿಯ ದೃಶ್ಯಗಳೇ ಜಾಸ್ತಿ ಇರುವ ಸಾದ್ಯತೆ ಇದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.     

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!