ಶೂ ಹಾಕಿ ದೇವಸ್ಥಾನ ಪ್ರವೇಶಿಸಿದ್ರಾ ರಣಬೀರ್? ವಿವಾದದ ಬಗ್ಗೆ 'ಬ್ರಹ್ಮಾಸ್ತ್ರ' ನಿರ್ದೇಶಕರ ಸ್ಪಷ್ಟನೆ

Published : Jun 20, 2022, 12:29 PM IST
ಶೂ ಹಾಕಿ ದೇವಸ್ಥಾನ ಪ್ರವೇಶಿಸಿದ್ರಾ ರಣಬೀರ್? ವಿವಾದದ ಬಗ್ಗೆ 'ಬ್ರಹ್ಮಾಸ್ತ್ರ' ನಿರ್ದೇಶಕರ ಸ್ಪಷ್ಟನೆ

ಸಾರಾಂಶ

ಬ್ರಹ್ಮಾಸ್ತ್ರ ಸಿನಿಮಾದ ವಿವಾದದ ದೃಶ್ಯದ ಬಗ್ಗೆ ನಿರ್ದೇಶಕ ಅಯನ್ ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ. 'ರಣಬೀರ್ ಕಪೂರ್ ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿ ದೇವಸ್ಥಾನದ ಘಂಟೆ ಬಾರಿಸಿದ ದೃಶ್ಯದಿಂದ ಅನೇಕರು ಅಪ್‌ಸೆಟ್ ಆಗಿದ್ದಾರೆ. ನಾನು ಈ ಸಿನಿಮಾದ ನಿರ್ದೇಶಕನಾಗಿ, ಭಕ್ತನಾಗಿ ನಿಜಕ್ಕೂ ಏನು ಆಗಿದೆ ಎನ್ನುವ ಬಗ್ಗೆ ವಿವರಿಸುತ್ತೇನೆ. ರಣಬೀರ್ ಕಪೂರ್ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿಲ್ಲ, ದುರ್ಗಾ ಪೂಜಾ ಪೆಂಡಲ್‌ಗೆ ಪ್ರವೇಶ ಮಾಡಿದ್ದು ಅಷ್ಟೆ ಎಂದಿದ್ದಾರೆ.

ಬಾಲಿವುಡ್ ಸ್ಟಾರ್ ದಂಪತಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ (Ranbir Kapoor and Alia Bhatt) ನಟನೆಯ ಬಹುನಿರೀಕ್ಷೆಯ ಬ್ರಹ್ಮಾಸ್ತ್ರ (Brahmastra) ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು. ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ವಿವಾದದಲ್ಲಿ ಸಿಲುಕಿಸಿತ್ತು. ರಣಬೀರ್ ಕಪೂರ್ ಧಾರ್ಮಿಕ ಭಾವನೆಗೆ ಧಕ್ಕೆ ದಂತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಬ್ರಹ್ಮಾಸ್ತ್ರ ಟ್ರೈಲರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಒಂದು ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ರಣಬೀರ್ ಕಪೂರ್ ವಿರುದ್ಧ ಅನೇಕರು ಸಿಡಿದೆದ್ದಿರು. 

ಹೌದು, ಟ್ರೈಲರ್‌ನಲ್ಲಿ ರಣಬೀರ್ ಕಪೂರ್ ಜೋರಾಗಿ ಓಡಿ ಬಂದು ದೇವಸ್ಥಾನಕ್ಕೆ ನುಗ್ಗುತ್ತಾರೆ. ಆ  ವೇಳೆ ಶೂ ಧರಿಸಿದ್ದರು. ಶೂ ಹಾಕಿ ದೇವಸ್ಥಾನ ಪ್ರವೇಶ ಮಾಡುವ ರಣಬೀರ್ ಕಪೂರ್ (Ranbir Kapoor) ದೇವಸ್ಥಾನದ ಘಂಟೆ ಬಾರಿಸುವ ದೃಶ್ಯವಿದೆ. ಈ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು. ಈ ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ವೈರಲ್ ಮಾಡಿ ಇದು ಬ್ರಹ್ಮಾಸ್ತ್ರ ಸಿನಿಮಾದ ದೊಡ್ಡ ಡಿಸಾಸ್ಟರ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು.

ಈ ವಿವಾದದ ದೃಶ್ಯದ ಬಗ್ಗೆ ನಿರ್ದೇಶಕ ಅಯನ್ ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ (Ayan Mukerji gives clarification). 'ರಣಬೀರ್ ಕಪೂರ್ ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿ ದೇವಸ್ಥಾನದ ಘಂಟೆ ಬಾರಿಸಿದ ದೃಶ್ಯದಿಂದ ಅನೇಕರು ಅಪ್‌ಸೆಟ್ ಆಗಿದ್ದಾರೆ. ನಾನು ಈ ಸಿನಿಮಾದ ನಿರ್ದೇಶಕನಾಗಿ, ಭಕ್ತನಾಗಿ ನಿಜಕ್ಕೂ ಏನು ಆಗಿದೆ ಎನ್ನುವ ಬಗ್ಗೆ ವಿವರಿಸುತ್ತೇನೆ. ರಣಬೀರ್ ಕಪೂರ್ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿಲ್ಲ, ದುರ್ಗಾ ಪೂಜಾ ಪೆಂಡಲ್‌ಗೆ ಪ್ರವೇಶ ಮಾಡಿದ್ದು ಅಷ್ಟೆ' ಎಂದಿದ್ದಾರೆ. 

'ನನ್ನ ಕುಟುಂಬದವರು 75 ವರ್ಷಗಳಿಂದ ದುರ್ಗ ಪೂಜಾ ಕಾರ್ಯ ಆಯೋಜಿಸುತ್ತಿದ್ದಾರೆ. ನಾನು ಬಾಲ್ಯದಿಂದನೂ ನಾನು ಭಾಗಿಯಾಗುತ್ತೇನೆ. ದೇವರ ಇರುವ ಜಾಗಕ್ಕೆ ಚಪ್ಪಲಿ ಧರಿಸಿಹೋಗಲ್ಲ. ಆದರೆ ಪೆಂಡಲ್‌ಗೆ ಎಂಟ್ರಿ ಕೊಡುವಾಗ ತೆಗೆಯುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಇತಾಹಸವನ್ನು ಗೌರವಿಸುವ ಮತ್ತು ಆಚರಿಸುವ ಅನುಭವದಿಂದ ಬ್ರಹ್ಸಾಮಸ್ತ್ರ ಮಾಡಲಾಗಿದೆ.  ನನ್ನ ಹೃದಯದಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಿದ್ದೇನೆ. ಈ ಅನುಭವ ಪ್ರತಿಯೊಬ್ಬ ಭಾರತೀಯನಿಗೂ ತಲುಪುವುದು ಮುಖ್ಯವಾಗಿದೆ' ಎಂದು ಹೇಳಿದ್ದಾರೆ. 

ವಿವಾದದಲ್ಲಿ ಬ್ರಹ್ಮಾಸ್ತ್ರ; ಶೂ ಧರಿಸಿ ದೇವಸ್ಥಾನದ ಘಂಟೆ ಹೊಡೆದ ರಣಬೀರ್, ಡಿಸಾಸ್ಟರ್ ಎಂದ ನೆಟ್ಟಿಗರು

ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಕಪೂರ್ ಶಿವ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಭಾರತದ ಪುರಾಣದ ಆಧಾರದ ಮೇಲೆ ಬಂದ ಫ್ಯಾಂಟಸಿ ಸಿನಿಮಾವಾಗಿದೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆ ಅನೇಕ ಸ್ಟಾರ್ಸ್ ನಟಿಸಿದ್ದಾರೆ. ಮೌನಿ ರಾಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟಾಲಿವುಡ್ ಸ್ಟಾರ್ ನಾಗಾರ್ಜುನ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ನಾಗಾರ್ಜುನ ಅವರ ಒಂದು ದೃಶ್ಯ ಮಾತ್ರ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಇನ್ನು ಈ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ

ರಣಬೀರ್ ಕಪೂರ್ ಶಂಶೇರಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲೀಕ್‌

. ಬ್ರಹ್ಮಾಸ್ತ್ರ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಭಾಗ ಸೆಪ್ಟಂಬರ್ 9ರಂದು ರಿಲೀಸ್ ಆಗುತ್ತಿದೆ. ಪಾರ್ಟ್-2 ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಬ್ರಹ್ಮಾಸ್ತ್ರ ಸಿನಿಮಾ ಪ್ರಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಕಪೂರ್ ನಡುವೆ ಪ್ರೀತಿ ಪ್ರಾರಂಭವಾಗಿತ್ತು. ಸುಮಾರು 5 ವರ್ಷಗಳ ಪ್ರೀತಿಯ ಬಳಿಕ 2022ರಲ್ಲಿ ರಣಬೀರ್ ಮತ್ತು ಅಲಿಯಾ ಹಸಮಣೆ ಏರಿದರು. ಆದರೂ ಸಿನಿಮಾ ಇನ್ನು ರಿಲೀಸ್ ಆಗಿರಲಿಲ್ಲ. ದೀರ್ಘಾವದಿಯ ಚಿತ್ರೀಕರಣ ಮುಗಿಸಿ ಬ್ರಹ್ಮಾಸ್ತ್ರ ಅಭಿಮಾನಿಗಲ ಮುಂದೆ ಬರಲು ಸಜ್ಜಾಗಿದೆ.      

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!