
ಲೈಂಗಿಕ ದೌರ್ಜನ್ಯ (Sexual Assault) ಆರೋಪದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ (Oscar Winning Director) ಖ್ಯಾತ ನಿರ್ದೇಶಕ ಪಾಲ್ ಹ್ಯಾಗಿಸ್ (Paul Haggis) ಅರೆಸ್ಟ್ ಆಗಿದ್ದಾರೆ. ಕೆನಡಾ ಮೂಲದ ನಿರ್ದೇಶಕ ಪಾಲ್ ಹ್ಯಾಗಿಸ್ ಅವರನ್ನು ದಕ್ಷಿಣ ಇಟಲಿಯಲ್ಲಿ (Italy) ಬಂಧಿಸಲಾಗಿದೆ. ಈ ಬಗ್ಗೆ ಇಟಲಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೆನಡಾ ಮೂಲದ 69 ವರ್ಷದ ಹ್ಯಾಗಿಸ್ ಅವರು ಸದ್ಯ ಓಸ್ಟುನಿಯಲ್ಲಿ ಮಂಗಳವಾರ ಪ್ರಾರಂಭವಾಗುವ ಚಲನಚಿತ್ರೋತ್ಸವಕ್ಕಾಗಿ ಇಟಲಿಯಲ್ಲಿದ್ದಾರೆ. ಚಲನಚಿತ್ರೋತ್ಸವ ಇದೀಗ ಹ್ಯಾಗಿಸ್ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದೇಶಿ ಮಹಿಳೆಯೊಬ್ಬಳು ಎರಡು ದಿನಗಳಿಂದ ತನಗೆ ಹ್ಯಾಗಿಸ್ ಅವರು ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆದರೆ ಹ್ಯಾಗಿಸ್ ಅವರ ಮೇಲೆ ದೂರು ಕೊಟ್ಟ ಮಹಿಳೆ ತನ್ನ ರಾಷ್ಟ್ರೀಯತೆ ಮತ್ತು ವಯಸ್ಸನ್ನು ಉಲ್ಲೇಖಿಸಿಲ್ಲ.
ಈ ಆರೋಪವನ್ನು ನಿರ್ದೇಶಕ ಹ್ಯಾಗಿಸ್ ತಳ್ಳಿಹಾಕಿದ್ದಾರೆ. ಇಟಲಿ ಮೂಲದ ವಕೀಲ ಮಿಚೆಲ್ ಲಾಪೋರ್ಗಿಯಾ ಮೂಲಕ ತನ್ನ ಮೇಲಿದ್ದ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ತಾನು ನಿರಾಪರಾಧಿ, ಸಾಧ್ಯವಾದಷ್ಟು ಬೇಗ ವಿಚಾರಣೆ ಮಾಡಿ ಎಂದು ನಿರ್ದೇಶಕ ಹ್ಯಾಗಿಸ್ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕ್ರ್ಯಾಶ್ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ್ದ ಹ್ಯಾಗಿಸ್ ಇದೀಗ ಅರೆಸ್ಟ್ ಆಗಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಪತ್ನಿ ವಿರುದ್ಧದ ಗೆಲುವನ್ನು ಸಂಭ್ರಮಿಸಲು 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್
ಇಟಲಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ದೂರು ದಾರ ಮಹಿಳೆ ಚಲನಚಿತ್ರೋತ್ಸವ ಪ್ರಯುಕ್ತ ಹ್ಯಾಗಿಸ್ ಜೊತೆಯೇ ತಂಗಿದ್ದರು ಎನ್ನಲಾಗಿದೆ. ನಿರ್ದೇಶಕ ಹ್ಯೀಗಿಸ್ ಕೆಲವು ಸಮಯದ ಹಿಂದೆ ಯುವತಿಯನ್ನು ಲೈಂಗಿಕ ಸಂಭೋಗಕ್ಕೆ ಒಳಗಾಗುವಂತೆ ಒತ್ತಾಯಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಬಳಿಕ ವೈದ್ಯಕೀಯ ಆರೈಕೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ.
ಮಹಿಳೆ ದೂರಿನ ಆಧಾರದ ಮೇಲೆ ಇಟಲಿ ಪೊಲೀಸರು ಹ್ಯಾಗಿಸ್ ಅವರನ್ನು ಬಂಧಿಸಿದ್ದು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ. ಬೃಂಡಿಸಿ ಪ್ರಾಸಿಕ್ಯೂಟರ್ ಕಚೇರಿ ಭಾನುವಾರ ಮುಚ್ಚಲಾಗಿತ್ತು. ಈ ಹಿನ್ನೆಲೆ ಹ್ಯಾಗಿಸ್ ಅವರನ್ನು ಇಂದು ಸೋಮವಾರ (ಜೂನ್ 20) ಕಛೇರಿಗೆ ಕರೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖ್ಯಾತ ಗಾಯಕ ಜಸ್ಟಿನ್ ಬೀಬರ್ ಮುಖಕ್ಕೆ ಪಾರ್ಶ್ವವಾಯು; ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಪ್ರಾರ್ಥನೆ
ಹ್ಯಾಗಿಸ್ ಹಿರಿಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. 2006 ರಲ್ಲಿ ‘ಕ್ರ್ಯಾಶ್’ ಸಿನಿಮಾಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.