
ಟಾಲಿವುಡ್ ಸ್ಟಾರ್ ನಟಿ ಸಮಂತಾ ತಮ್ಮ ಸಿನಿ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಲೈಫ್‌ಸ್ಟೈಲ್, ಫ್ಯಾಷನ್ ಹಾಗೂ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ತಮ್ಮ ಲೈಫ್ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ.
ಏನಮ್ಮ ಮದುವೆ ಆಗಿ ನಾಲ್ಕು ವರ್ಷ ಆಗ್ತಿದೆ. ಮಕ್ಳು ಮಾಡ್ಕೊಳ್ಳವಾ ಎಂದು ಪದೆ ಪದೇ ಪ್ರಶ್ನೆ ಮಾಡುವ ನೆಟ್ಟಿಗರಿಗೆ ಉತ್ತರಿಸಲು ತಮ್ಮ ಸಾಕು ನಾಯಿ Hash ಫೋಟೋ ಹಂಚಿಕೊಳ್ಳುತ್ತಾರೆ. ಅಂದಿನಿಂದ ಸಮಂತಾಳಷ್ಟೇ ಈ ಹ್ಯಾಷ್ ಕೂಡ ಫೇಮಸ್ ಆಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ಒಂದು ಕಾಲಿಗೆ ಮಾತ್ರ ಚಪ್ಪಲಿ ಧರಿಸಿ ಓಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಿತ್ರೀಕರಣಕ್ಕೆಂದು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಸಮಂತಾ ತಮ್ಮ ಜೊತೆ ಹ್ಯಾಷ್‌ನೂ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಟವಾಡುತ್ತಿದ್ದ ತುಂಟ ಹ್ಯಾಷ್ ಶಮಂತಾಳ ಒಂದು ಚಪ್ಪಲಿಯನ್ನು ಕಚ್ಚಿಕೊಂಡು ಓಡಿ ಹೋಗಿದೆ. ಅದರ ಹಿಂದೆ ಸಮಂತಾ ಒಂದು ಚಪ್ಪಲಿ ಧರಿಸಿ ಓಡಿ ಹೋಗುತ್ತಿದ್ದಾರೆ.
ಸ್ವತಃ ಸಮಂತಾ ಈ ಫೋಟೋ ಹಂಚಿಕೊಂಡಿದ್ದಾರೆ. ಬ್ಲಾಕ್ ಕ್ರಾಪ್ ಟಾಪ್‌ನಲ್ಲಿ ಮಿಂಚುತ್ತಿರುವ ಈ ಚೆಲುವೆ, 'ಇದು ನನ್ನ ಲೈಫ್ ಸ್ಟೋರಿ. ಸಿಂಡ್ರೆಲಾ ಮತ್ತು ಅವಳು ಕಳೆದು ಕೊಂಡ ಚಪ್ಪಲ್‌ನಿಂದ ಫೇಮಸ್. ಆದರೆ ನನ್ನ ಕೇಸ್‌ನಲ್ಲಿ ಪ್ರಿನ್ಸ್ ಚಾರ್ಮಿಂಗ್ ಬೇರೆಯಾರೂ ಅಲ್ಲ...ಹ್ಯಾಷ್' ಎಂದು ಬರೆದು ಕೊಂಡಿದ್ದಾರೆ. ಅಲ್ಲದೇ ಇದೆ #Everydayathomethings ಎಂದು ಬರೆದುಕೊಂಡಿದ್ದಾರೆ. ಅಂದರೆ ಇದು ದಿನ ನಿತ್ಯ ಮನೆಯಲ್ಲಿ ನಡೆಯುವ ರಂಪಾಟ ಎಂದಿದ್ದಾರೆ. 'ಏನೂ ವ್ಯತ್ಯಾಸವಿಲ್ಲ ಬಿಡಿ, ಎಲ್ಲರ ಮನೆ ನಾಯಿಗಳ ಕಥೆಯೂ ಇದೇ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.