
ಸ್ಯಾಂಡಲ್‌ವುಡ್‌ನಲ್ಲಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ತೆಗೆದುಕೊಂಡಿರುವುದು ಸಾಬೀತಾದ ಬೆನ್ನಲ್ಲೇ ಇದೀಗ ಟಾಲಿವುಡ್‌ನಲ್ಲಿಯೂ ಡ್ರಗ್ಸ್ ಕೇಸ್ ಸುದ್ದಿಯಾಗಿದೆ. ಸ್ಯಾಂಡಲ್‌ವುಡ್ ಟಾಪ್ ನಟಿಯರ ಡ್ರಗ್ಸ್ ಕೇಸ್ ಭಾರೀ ಸುದ್ದಿಯಾಗಿದ್ದು, ಇದೇ ಸಂದರ್ಭ ತೆಲುಗು ಚಿತ್ರರಂಗದ ಖ್ಯಾತ ನಟ, ನಟಿಯ ಹೆಸರು ಡ್ರಗ್ಸ್ ವಿಚಾರವಾಗಿ ಕೇಳಿ ಬಂದಿದೆ.
ಟಾಪ್ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಸೇರಿದಂತೆ ಒಟ್ಟು 10 ಜನರಿಗೆ ನೋಟಿಸ್ ಕಳುಹಿಸಲಾಗಿದೆ. 4 ವರ್ಷ ಹಳೆಯ ಪ್ರಕರಣದಲ್ಲಿ ಇವರನ್ನು ಶೀಘ್ರವೇ ವಿಚಾರಣೆ ಮಾಡಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ. ಜಾರಿ ನಿರ್ದೇಶನಾಲಯ ರಾಕುಲ್ ಪ್ರೀತ್ ಸಿಂಗ್ ಅವರನ್ನು ಸೆ.6ರಂದು, ಬಾಹುಬಲಿ ನಟ ರಾಣಾ ಅವರನ್ನು ಸೆ.8ರಂದು ತೆಲುಗು ನಟ ರವಿ ತೇಜ ಅವರನ್ನು ಸೆ.9 ಹಾಗೂ ನಿರ್ದೇಶಕ ಪುರಿ ಜಗನ್ನಾಥ ಅವರನ್ನು ಸೆ.31 ರಂದು ವಿಚಾರಣೆ ನಡೆಸಲಿದೆ.
ಡ್ರಗ್ಸ್ ಸೇವನೆ ಸಾಬೀತು: ಮೌನ ಮುರಿದ ರಾಗಿಣಿ ಹೇಳಿದ್ದಿಷ್ಟು
ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜ, ಪುರಿ ಜಗನ್ನಾಥ ಯಾರನ್ನೂ ಆರೋಪಿ ಎಂದು ಹೇಳಲಾಗಿಲ್ಲ. ಅವರು ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದರೇ ಇಲ್ಲವೇ ಎಂಬುದನ್ನು ಈಗಲೇ ಹೇಳುವುದಕ್ಕೆ ಸಕಾಲವಲ್ಲ ಎಂದಿದ್ದಾರೆ ಅಧಿಕಾರಿಗಳು. 2017ರಲ್ಲಿ ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆ 30 ಲಕ್ಷದ ಡ್ರಗ್ಸ್ ಸೀಝ್ ಮಾಡಿ 12 ಕೇಸುಗಳನ್ನು ದಾಖಲಿಸಿತ್ತು. 11 ಕೇಸ್‌ಗಳಲ್ಲಿ ಚಾರ್ಜ್‌ಶೀಟ್ ಕೂಡಾ ಸಲ್ಲಿಕೆಯಾಗಿತ್ತು.
ನಂತರ ಜಾರಿ ನಿರ್ದೇಶನಾಲಯವು ಅಬಕಾರಿ ಇಲಾಖೆಯ ಪ್ರಕರಣಗಳಲ್ಲಿ ಹಣ ವರ್ಗಾವಣೆ ಕೋನದ ಬಗ್ಗೆ ತನಿಖೆ ಆರಂಭಿಸಿತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಅಬಕಾರಿ ಇಲಾಖೆಯಿಂದ ಇಲ್ಲಿಯವರೆಗೆ 30 ಜನರನ್ನು ಬಂಧಿಸಲಾಗಿದೆ. 62 ಮಂದಿಯನ್ನು ಪ್ರಶ್ನಿಸಲಾಗಿದೆ. ಪ್ರಶ್ನಿಸಿದವರಲ್ಲಿ 11 ಮಂದಿ ಚಿತ್ರರಂಗದೊಂದಿಗೆ ಸಂಬಂಧ ಹೊಂದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ಮಾದಕವಸ್ತುಗಳ ಸಾಗಾಟದ ಅನೇಕ ಉದಾಹರಣೆಗಳು ಕಂಡುಬಂದಿದೆ. 2017 ರ ಜುಲೈನಲ್ಲಿ ಅತಿ ದೊಡ್ಡ ಪ್ರಮಾಣದ ಎಲ್‌ಎಸ್‌ಡಿ ಮತ್ತು ಕೊಕೇನ್ ಅನ್ನು ಕನಿಷ್ಠ 13 ಜನರಿಂದ ಸರಣಿ ದಾಳಿಗಳಲ್ಲಿ ವಶಪಡಿಸಿಕೊಳ್ಳಲಾಯಿತು. ಬಳಕೆದಾರರಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿದ್ದಾರೆ ಎಂದು ಅಬಕಾರಿ ಇಲಾಖೆ ಹೇಳಿದೆ. ಕನಿಷ್ಠ 26 ಶಾಲೆಗಳು ಮತ್ತು 27 ಕಾಲೇಜುಗಳು, ಮತ್ತು ಪೋಷಕರಿಗೆ ಸಹ ಮಾಹಿತಿ ನೀಡಲಾಗಿದೆ.
ಬಂಧಿತರು ಗೋವಾ ಮತ್ತು ಹೈದರಾಬಾದ್‌ನ ಪಬ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ರೇವ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆದಾರರಾಗಿದ್ದು, ಪುಣೆ, ಮುಂಬೈ ಮತ್ತು ದೆಹಲಿಗೂ ಸಂಪರ್ಕ ಹೊಂದಿದ್ದಾರೆ. ವಿತರಕರು ಸುಶಿಕ್ಷಿತರು ಮತ್ತು ಅವರಲ್ಲಿ ಕೆಲವರು ಉನ್ನತ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಆರು ಜನ ಎಂಜಿನಿಯರಿಂಗ್ ಪದವೀಧರರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.