
ಪ್ರಕಾಶ್ ರಾಜ್ ತನ್ನ 11 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಪೋನಿ ವರ್ಮಾ ಜೊತೆ ಆಗಸ್ಟ್ 24 ರಂದು ಆಚರಿಸಿದ್ದಾರೆ. ಅವರ ಮಗ ವೇದಾಂತ್ ತನ್ನ ತಂದೆ ತಾಯಿಯರು ತನ್ನ ಮುಂದೆ ಮದುವೆಯಾಗುವುದನ್ನು ನೋಡಲು ಬಯಸಿದ್ದ. ತಮ್ಮ 11 ನೇ ವಾರ್ಷಿಕೋತ್ಸವದಂದು, ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ವಿವಾಹವಾದರು.
ಈ ಬಾರಿ, ಅದು ಅವರ ಮಕ್ಕಳ ಸಮ್ಮುಖದಲ್ಲಿ ಇದ್ದಿದ್ದರಿಂದ ಸಾಕಷ್ಟು ಭಿನ್ನವಾಗಿತ್ತು. ಅವರ ಮೊದಲ ಮದುವೆಯಿಂದ ಇರುವ ಅವರ ಮಕ್ಕಳಾದ ಮೇಘನಾ ಮತ್ತು ಪೂಜಾ ಕೂಡ ಜೊತೆಗಿದ್ದರು.
ಪ್ರಕಾಶ್ ರಾಜ್ ಪ್ರಸ್ತುತ ಮಧ್ಯಪ್ರದೇಶದ ಓರ್ಚಾದಲ್ಲಿ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಆಗಸ್ಟ್ 24 ರಂದು ಅವರು ಪತ್ನಿ ಪೋನಿ ವರ್ಮಾ ಅವರೊಂದಿಗೆ ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅವರ ಮಗ ವೇದಾಂತ್ ಆಸೆಯಂತೆ, ಈ ಜೋಡಿ ಮತ್ತೆ ಮದುವೆಯಾದರು.
'ಡೆವಿಲ್ ಈಸ್ ಬ್ಯಾಕ್'; ಭುಜದ ಶಸ್ತ್ರ ಚಿಕಿತ್ಸೆ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್!
ಪ್ರಕಾಶ್ ರಾಜ್ ಅವರು ತಮ್ಮ ಪತ್ನಿ ಪೋನಿ ವರ್ಮಾ ಅವರನ್ನು ಮತ್ತೆ ಮದುವೆಯಾದೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ದಂಪತಿಗಳು ತಮ್ಮ ಮಕ್ಕಳ ಮುಂದೆ ಉಂಗುರ ಬದಲಾಯಿಸಿ ಕಿಸ್ ಮಾಡಿ ಮಗನ ಆಸೆ ಈಡೇರಿಸಿದ್ದಾರೆ.
ಫೋಟೋಗಳನ್ನು ಹಂಚಿಕೊಂಡ ಪ್ರಕಾಶ್ ರಾಜ್, ನಾವು ಇಂದು ರಾತ್ರಿ ಮತ್ತೆ ಮದುವೆಯಾಗಿದ್ದೇವೆ..ಯಾಕೆಂದರೆ ನಮ್ಮ ಮಗ #ವೇದಾಂತ್ ಇದನ್ನು ನೋಡಲು ಬಯಸಿದ್ದ. ಕುಟುಂಬದ ಕ್ಷಣಗಳು ಎಂದು ಬರೆದಿದ್ದಾರೆ. ನಟ ಮೊಣಕಾಲಿನ ಮೇಲೆ ಕುಳಿತು ಪೋನಿ ಜೊತೆ ಉಂಗುರ ಬದಲಾಯಿಸಿಕೊಂಡರು. ನಂತರ ಪತ್ನಿಯನ್ನು ಚುಂಬಿಸುವುದನ್ನು ಸಹ ಕಾಣಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.