ವೈರಲ್ ಆಗುತ್ತಿದೆ ಸಾಯಿ ಪಲ್ಲವಿ ಬುರ್ಕಾ ಲುಕ್. ಪ್ರೇಕ್ಷಕರ ಜೊತೆ ಸಿನಿಮಾ ನೋಡೋಕೆ ಏನೆಲ್ಲಾ ಮಾಡಬೇಕು ನೋಡಿ... ?
ಮಾಲಿವುಡ್ (Mollywood) ನ್ಯಾಚುರಲ್ ಬ್ಯೂಟಿ, ಪ್ರೇಮಂ ನಟಿ ಸಾಯಿ ಪಲ್ಲವಿ (Sai Pallavi) 'ಶ್ಯಾಮ್ ಸಿಂಗಾ ರಾಯ್' (Shyam Singha Roy) ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟ ನಾನಿ (Nani) ಜೊತೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಲ್ಲವಿ, ಇದೇ ಮೊದಲ ಬಾರಿ ಸೋಷಿಯಲ್ ಮೀಡಿಯಾದಲ್ಲೂ (Social Media) ಆ್ಯಕ್ಟಿವ್ ಆಗಿದ್ದಾರೆ. ಇದೇ ಮೊದಲ ಬಾರಿ ತುಂಬಾ ಹುಮ್ಮಸಿನಿಂದ ಪ್ರಚಾರ ಮಾಡುತ್ತಿದ್ದಾರೆ ಅಂದರೂ ತಪ್ಪಾಗದು ನೋಡಿ...
ಹೌದು! ಡಿಸೆಂಬರ್ 24ರಂದು ಶ್ಯಾಮ್ ಸಿಂಗಾ ರಾಯ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಆರಂಭದಿಂದಲೂ ಅಭಿಮಾನಿಗಳ ಜೊತೆ ಸಿನಿಮಾ ನೋಡ್ತೀನಿ ಅಂದ್ರೆ ಎಲ್ಲಿ ಏನೂ ಎತ್ತ ಎಂದು ಮೊದಲು ರಿವೀಲ್ ಮಾಡುವುದಿಲ್ಲ. ಸಿನಿಮಾ ನೋಡಿ ಅವರ ಅಭಿಪ್ರಾಯ ಪಡೆದುಕೊಂಡು ಆನಂತರ ನಾನು ಎಲ್ಲಿರುವೆ, ಎಂದು ರಿವೀಲ್ ಮಾಡುವೆ ಎಂದಿದ್ದರು.
ಸಮಂತಾ ಆಯ್ತು, ಸಾಯಿ ಪಲ್ಲವಿಯೂ ಕೊಡ್ತಾರಾ Bollywoodಗೆ ಎಂಟ್ರಿ?ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ರೆಸ್ಪಾನ್ಸ್ (Response) ತಿಳಿದುಕೊಳ್ಳಲು ಪಲ್ಲವಿ ಬುರ್ಖಾ (burkha) ಧರಿಸಿ ಸಿನಿಮಾ ವೀಕ್ಷಿಸಿದ್ದಾರೆ. ಅಭಿಮಾನಿಗಳ ಪ್ರತಿಕ್ರಿಯೆ ಹೇಳಿ ಸಂತಸ ಪಟ್ಟಿದ್ದಾರೆ. ಆರಂಭದಲ್ಲಿ ಪಲ್ಲವಿ ಅವರನ್ನ ಯಾರೂ ಕಂಡು ಹಿಡಿದಿಲ್ಲ. ಆದರೆ ಸಿನಿಮಾ ಮುಗಿದ ಮೇಲೆ ಕೆಲವರು ನಟಿಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆಂಧ್ರ ಪ್ರದೇಶದ (Andra Pradesh) ಮೂಸಾಪೇಟೆಯಲ್ಲಿರುವ ಶ್ರೀರಾಮುಲು (Shri Ramulu film theater) ಚಿತ್ರಮಂದಿರಕ್ಕೆ ಭೇಟಿ ನೀಡಿ, ಸೆಕೆಂಡ್ ಶೋನಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಪಲ್ಲವಿ ಬಂದು ಹೋಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 19 ಕೋಟಿ ಕಲೆಕ್ಷನ್ ಮಾಡಿತ್ತು. ಮೂರ್ನಾಲ್ಕು ದಿನಗಳಲ್ಲಿ 36 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎಲ್ಲಿ ನೋಡಿದರೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತೆಲುಗು ಚಿತ್ರರಂಗದಿಂದ ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಮುಂದಿನ ತಿಂಗಳು ಓಟಿಟಿಯಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ 30 ದಿನಗಳ ಪ್ರದರ್ಶನ ಪೂರೈಸಿದ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ ನಾಲ್ಕನೇ ವಾರ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Sai Pallavi No Makeup Look: ಝೀರೋ ಮೇಕಪ್, ಸಾಯಿ ಪಲ್ಲವಿ ಸಹಜ ಸುಂದರಿಕೆಲವು ದಿನಗಳ ಹಿಂದೆ ಚಿತ್ರದ ಸಕ್ಸಸ್ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲವಿ ತಮ್ಮ ಗುಂಗುರು ಕೂದಲನ್ನು ಸ್ಟ್ರೇಟ್ ಮಾಡಿಕೊಂಡು ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 'ನಾನು ಬಾಲಿವುಡ್ ಸಿನಿಮಾ ಕೂಡ ಮಾಡಲು ರೆಡಿಯಾಗಿರುವೆ. ಆದರೆ ನನಗೆ ಕಥೆ ತುಂಬಾನೇ ಮುಖ್ಯ. ಒಳ್ಳೆ ಕಥೆ ಸಿಗಬೇಕು. ಹಾಗೇ ನಾನು ಆ ಪಾತ್ರಕ್ಕೆ ಆಯ್ಕೆ ಆಗಬೇಕು,' ಎಂದು ಪಲ್ಲವಿ ಮಾತನಾಡಿದ್ದಾರೆ. ಆದರೆ ಶ್ಯಾಮ್ ಸಿಂಗ್ ಸಿನಿಮಾ ನಂತರ ವಿರಾಠ ಪರ್ವಂ ಸಿನಿಮಾದಲ್ಲಿಯೂ ಈ ನಟಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿಗೆ ಜೋಡಿಯಾಗಲಿದ್ದು, ನಟಿಯರಾದ ಪ್ರಿಯಾಮಣಿ, ನಂದಿತಾ ದಾಸ್ ಮತ್ತು ನವೀನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ನನ್ನ ಡ್ಯಾನ್ಸ್ ನಂಬರ್ಸ್ ಹೆಚ್ಚಾಗಿರುವುದಕ್ಕೆ ಸಂತೋಷವಿದೆ. ಆದರೆ ಎಲ್ಲಾ ಸಿನಿಮಾಗಳಿಗೂ ಡ್ಯಾನ್ಸ್ ಅವಶ್ಯಕತೆ ಇಲ್ಲ. ಲವ್ ಸ್ಟೋರಿ ಸಿನಿಮಾ ಹೊರತು ಪಡಿಸಿ, ನಾನು Professional ಡ್ಯಾನ್ಸರ್ ಅಲ್ಲ. ನಾನು ಯಾವುದೇ ನೃತ್ಯ ಕಲಿತಿಲ್ಲ. ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್ ಅವರನ್ನು ನಾನು ಬಾಲ್ಯದಿಂದ ನೋಡಿ ನೋಡಿಯೇ ಡ್ಯಾನ್ಸ್ ಕಲಿತಿರುವುದು. ಈ ಸಿನಿಮಾ ಕೂಡ ಹಾಗೆ. ಪಾತ್ರಕ್ಕೆ ಏನು ಬೇಕು ಅದನ್ನ ಮಾತ್ರ ಅಳವಡಿಸಲಾಗಿದೆ,' ಎಂದಿದ್ದಾರೆ ಪಲ್ಲವಿ.
'ಲವ್ ಸ್ಟೋರಿ (love story) ಸಿನಿಮಾದಲ್ಲಿ ನಾನು ಡ್ಯಾನ್ಸರ್ ಆಗಿದ್ದೆ. ಆದರೆ ಶ್ಯಾಮ್ ಸಿಂಗಾ ರಾಯ್ ಸೇರಿ ಬೇರೆ ಎಲ್ಲಾ ಸಿನಿಮಾದಲ್ಲಿಯೂ ಡ್ಯಾನ್ಸ್‌ನ ಹೈಲೈಟ್ ಮಾಡುವ ಅಗತ್ಯವಿಲ್ಲ. ನನಗೆ ತುಂಬಾ ಖುಷಿ ಆಗುತ್ತಿದೆ, ಡ್ಯಾನ್ಸ್ ಹೊರತು ಪಡಿಸಿ ನಟನೆಗೆ ಪ್ರಮುಖ್ಯತೆ ನೀಡುವ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದಕ್ಕೆ. ನನ್ನ ಮುಂದಿನ ಎರಡು ಸಿನಿಮಾಗಳಲ್ಲಿ ಡ್ಯಾನ್ಸ್ ಇರೋಲ್ಲ. ಈ ರೀತಿ ಅವಕಾಶಗಳು ನನಗೆ ಹೆಚ್ಚಿಗೆ ಬೇಕು,' ಎಂದು ಪಲ್ಲವಿ ಮಾತನಾಡಿದ್ದಾರೆ.