ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಗಾಯಕಿ Mangli?

Suvarna News   | Asianet News
Published : Dec 30, 2021, 05:32 PM IST
ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಗಾಯಕಿ Mangli?

ಸಾರಾಂಶ

ಮಂಗ್ಲಿ ಹಲ್ಲೆ ಮಾಡಿದ್ರಾ? ಅಭಿಮಾನಿ ಹಲ್ಲೆ ಮಾಡಿದ್ರಾ? ಏನಿದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ?

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಗಾಯಕಿ, ಕಣ್ಣೇ ಅದರಿಂದೇ..ಎಂದು ಹಾಡುತ್ತಾ ರಾತ್ರಿ ಬೆಳಗಾಗುವುದರಲ್ಲಿ ಕನ್ನಡ ಚಿತ್ರರಂಗದ ಸಿನಿ ರಸಿಕರ ಮನಸ್ಸಿಗೆ ಹತ್ತಿರವಾದ ಗಾಯಕಿ ಮಂಗ್ಲಿ (Mangli) ಇದೀಗ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋ ನಿಜನಾ? ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ? 

ಮಂಗ್ಲಿ ಕಂಡರೆ ನಮ್ಮ ಕನ್ನಡಿಗರಿಗೆ ಒಂದು ರೀತಿ ತುಂಬಾನೇ ಹತ್ತಿರ. ನೋಡಲು ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ರೀತಿ ಇದ್ದಾರೆ. ಧ್ವನಿ ಶ್ರೇಯಾ ಘೋಷಾಲ್ (Shreya Ghoshal) ರೀತಿ ಇದೆ ಎಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಹಾಟ್ ಸೆಲೆಬ್ರಿಟಿಗಳ (Hot celebrity) ಪಟ್ಟಿಯಲ್ಲಿ ಕೂಡ ಮಂಗ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಂಡು ಫೋಟೋ (Photo) ಅಥವಾ ವಿಡಿಯೋ (Video) ಕ್ಲಿಕ್ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದಾರೆ, ಎನ್ನಲಾಗುತ್ತಿದೆ. 

ನಿರ್ದೇಶಕ ಪ್ರೇಮ್, ರಚಿತಾ ರಾಮ್‌ ಸಿನಿಮಾದಲ್ಲಿ ಮಂಗ್ಲಿ ಗಾನ!

ಆಂಧ್ರ ಪ್ರದೇಶದ (Andra Pradesh) ಪ್ರಕಾಶಂ ಜಿಲ್ಲೆಯ ಎರಗೊಂಡಪಾಲೆಂನಲ್ಲಿ ಸಚಿವ ಆದಿಮೂಲಂ ಸುರೇಶ್ (Audimulapu Suresh) ಪುತ್ರನ ಮದುವೆ ಕಾರ್ಯಕ್ರಮವಿತ್ತು. ಈ  ಅದ್ಧೂರಿ ಮದುವೆಯಲ್ಲಿ (Marriage) ಮಂಗ್ಲಿ ಸಹ ಭಾಗಿಯಾಗಿದ್ದರು. ಸಚಿವರ ಕುಟುಂಬಸ್ಥರು ಮಾತ್ರವಲ್ಲದೆ, ಅಲ್ಲಿದ್ದ ಅಭಿಮಾನಿಗಳು ಆಗಮಿಸಿ, ಮಂಗ್ಲಿ ಜೊತೆ ಸೆಲ್ಫಿಗಾಗಿ (Selfie) ಮುಗಿ ಬಿದ್ದಿದ್ದಾರೆ. ಈ ವೇಳೆ ಒಬ್ಬ ಯುವಕ ಪದೇ ಪದೇ ಮೈ ಮೇಲೆ ಬಿದ್ದು ಸೆಲ್ಫಿ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾನೆ, ಆಗ ಮಂಗ್ಲಿಗೆ ಕೋಪ ಬಂದಿದೆ. 

ತಾಳ್ಮೆ ಕಳೆದುಕೊಂಡ ಮಂಗ್ಲಿ ಮೊದಲು ಅತನಿಗೆ ಬೈದಿದ್ದಾರೆ. ಆತ ಸುಮ್ಮನಾಗದ ಕಾರಣ ತಮ್ಮ ಬಾಡಿಗಾರ್ಡ್‌ಗಳಿಗೆ (Body guard) ಆತನ ಮೊಬೈಲ್ ಒಡೆದು ಹಾಕಲು ಹೇಳಿದ್ದಾರಂತೆ. ಹೀಗೆ ಹೇಳಿದ್ದರೂ ಸುಮ್ಮನಿರದ ಯುವಕ ಮತ್ತೆ ಸೆಲ್ಫೀಗೆಂದು ಪಕ್ಕಕ್ಕೆ ಬಂದಿದ್ದಾನೆ. ಆಗ ಮಂಗ್ಲಿ ಕೈ ಮಾಡಲು ಹೋಗಿದ್ದಾರೆ. ಆ ಯುವಕ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಘಟನೆ ಸಣ್ಣ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕಣ್ಣೇ ಅದಿರಿಂದಿ ಗಾಯಕಿ ಮಂಗ್ಲಿಗೆ ಬಿಗ್‌ ಶಾಕ್‌, ಮೈಸಮ್ಮ ದೇವಿ ಭಕ್ತರಿಂದ ಹೊಸ ಹಾಡಿಗೆ ವಿರೋಧ

ಮಂಗ್ಲಿ ವರ್ತನೆ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸೆಲ್ಫಿ ತೆಗೆದುಕೊಂಡು ಕಳುಹಿಸಿದ್ದರೆ, ಆ ಯುವಕ ಮತ್ತೆ ಬರುತ್ತಿರಲಿಲ್ಲ ಅಥವಾ ಈ ರೀತಿ ಮಾಡುತ್ತಿರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಎಷ್ಟು ಮಂದಿಗೆ ಸೆಲ್ಫಿ ಕೊಡುವುದು? ಕಾರ್ಯಕ್ರಮಕ್ಕೆ ಬಂದಾಗ ಅವರಿಗೂ ಆಪ್ತರ ಜೊತೆ ಸಮಯ ಕಳೆಯಬೇಕು ಅಂತ ಆಸೆ ಇರುತ್ತದೆ. ಅದಲ್ಲದೆ ದುಬಾರಿ ಬೆಲೆ ಬಟ್ಟೆ ಧರಿಸಿರುತ್ತಾರೆ. ಏನಾದರೂ ತೊಂದರೆ ಆದರೆ ಅಭಿಮಾನಿಗಳು ಉತ್ತರ ಕೊಡುತ್ತಾರಾ? ಅವರು ಸರಿಯಾಗಿಯೇ ವರ್ತಿಸಿದ್ದಾರೆ. ಕೆಲವು ಬೇಕೆಂದು ಅಸಭ್ಯವಾಗಿ ವರ್ತಿಸುತ್ತಾರೆ,' ಎಂದಿದ್ದಾರೆ. 

ಗಾಯಕಿ ಮಂಗ್ಲಿಗೆ ವಿವಾದ ಹೊಸದೇನಲ್ಲ. ಅವರ ಹೊಸ ಹಾಡು 'ಬೋನಾಲ ಪಾಟ' ಸದ್ಯಕ್ಕೆ ವಿವಾದದಲ್ಲಿದೆ. ಹಾಡಿನಲ್ಲಿ ನಿಂದಾ ಸುತ್ತಿಯನ್ನು ಬಳಸಲಾಗಿದೆ, ಇದು ಕೆಲವು ಭಕ್ತಾದಿಗಳಿಗೆ ಬೇಸರವಾಗಿದೆ. ಬಿಜೆಪಿ  ಮುಖಂಡರೊಬ್ಬರು ಮಂಗ್ಲಿ ದೇವರನ್ನು ನಿಂದಿಸಿದ್ದಾರೆಂದು ಆರೋಪಿಸಿ,ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲೆ ಮಾಡಿದ್ದಾರೆ. 

ರಾಬರ್ಟ್ ಚಿತ್ರದ ನಂತರ ಮಂಗ್ಲಿ ಕನ್ನಡ ಏಕ್ ಲವ್ ಯಾ ಸಿನಿಮಾದಲ್ಲೂ ಹಾಡಿದ್ದಾರೆ. ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ ಎಂಬ ಗೀತೆಯನ್ನು ಹಾಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಮಂಗ್ಲಿ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!