Oke Oka Jeevitha: ಅಮಲಾ ಕಮ್‌ ಬ್ಯಾಕ್‌ಗೆ ವಿಶ್ ಮಾಡಿದ ಪತಿ ನಾಗಾರ್ಜುನ!

Suvarna News   | Asianet News
Published : Dec 30, 2021, 02:06 PM IST
Oke Oka Jeevitha: ಅಮಲಾ ಕಮ್‌ ಬ್ಯಾಕ್‌ಗೆ ವಿಶ್ ಮಾಡಿದ ಪತಿ ನಾಗಾರ್ಜುನ!

ಸಾರಾಂಶ

ಶುರುವಾಯ್ತು ಒಕೆ ಒಕಾ ಜೀವಿತಾಂ ಟೀಸರ್ ಹವಾ. ಆರಂಭದಲ್ಲೇ ಸ್ಟಾರ್ ನಟರ ಬೆಂಬಲ ಪಡೆದ ಸಿನಿಮಾವಿದು...

ತಮಿಳು (Kollywood) ಚಿತ್ರರಂಗದ ಸಿಂಪಲ್ ಮತ್ತು ಹಂಬಲ್ ನಟ ಸೂರ್ಯ (Suriya) ಡಿಸೆಂಬರ್ 29ರಂದು ಒಕೆ ಒಕಾ ಜೀವಿತಾಂ (Oke Oka Jeevitha) ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ನಟಿ ಅಮಲಾ ಅಕ್ಕಿನೇನಿ (Amala Akkineni), ರಿತು ವರ್ಮಾ (Ritu Varma) ಮತ್ತು ನಟ ಪ್ರಿಯದರ್ಶಿ ಪುಲಿಕೊಂಡ, ಶರ್ವಾನಂದ್ ಮತ್ತು ಎಂ.ನಾಸರ್ ಈ ಬಹು ನಿರೀಕ್ಷಿತ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು bilingual ಸೈಂಟಿಫಿಕ್ ಫಿಕ್ಷನ್‌ ಸಿನಿಮಾವಾಗಿದ್ದು, ತಮಿಳಿನಲ್ಲಿ 'ಕರ್ಣಂ' (Karnam) ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗುತ್ತಿದೆ. 

ನಟ ಎಂ. ನಾಸರ್‌  (M.Nassar) ಎಂಬ ಒಬ್ಬ ಸೈಂಟಿಸ್ಟ್ ಪಾತ್ರವನ್ನು ಪರಿಚಯಿಸಿಕೊಡುವ ಮೂಲಕ ಟೀಸರ್ ಆರಂಭವಾಗುತ್ತದೆ. ಚಿತ್ರದಲ್ಲಿರುವ ಮೂರು ನಟರಿಗೆ ಎಂದೂ ಕಲ್ಪನೆ ಮಾಡಿಕೊಳ್ಳಲಾಗ ಸತ್ಯ ಹೇಳಿ ಶಾಕ್ ನೀಡುತ್ತಾನೆ. ಪ್ರಿಯದರ್ಶಿ ಪುಲಿಕೊಂಡ, ಶರ್ವಾನಂದ್ (Sharwanand) ಮತ್ತು ಎಂ.ನಾಸರ್ ಸ್ನೇಹಿತರಾಗಿದ್ದು ಮೂವರಿಗೂ ಮೂರು ರೂಲ್ಸ್‌ ನೀಡುತ್ತಾರೆ. ಯಾಕೆ ರೂಲ್ಸ್? ಏನಿದು ಚಿತ್ರ ಕಥೆ? ಎಂದು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಟೀಸರ್ ವಿಭಿನ್ನವಾಗಿ ಸಿನಿ ರಸಿಕರಲ್ಲಿ ನಿರೀಕ್ಷೆ ಮೂಡಿಸಿದೆ.

Jr NTR Depression: ವೃತ್ತಿ ಜೀವನ ಕುಸಿದಾಗ, ಖಿನ್ನತೆಗೊಳಗಾಗಿದ್ರು ಈ ಸ್ಟಾರ್ ನಟ!

ತೆಲುಗು ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಪತ್ನಿ ಅಮಲಾ  ಶರ್ವಾನಂದ್‌ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿತು ಶರ್ಮ ಗರ್ಲ್‌ ಫ್ರೆಂಡ್‌ (Girl Friend) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾರ ಗರ್ಲ್‌ ಫ್ರೆಂಡ್‌ ಎಂದು ಇನ್ನೂ ತಂಡ ರಿವೀಲ್ ಮಾಡಿಲ್ಲ. ಚಿತ್ರದಲ್ಲಿ ಶರ್ವಾನಂದ್ guitarist ಆಗಿದ್ದು, ಮೂವರು ಸ್ನೇಹಿತರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಹೇಗೆ ರಿಯಾಕ್ಟ್ ಮಾಡುತ್ತಿದ್ದರೂ, ಅದರಲ್ಲೂ ವಾಷಿಂಗ್ ಪೌಡರ್ ನಿರ್ಮಾ (Washing powder Nirma) ಆ್ಯಡ್ ಬಂದ್ರೆ ಏನು ಮಾಡುತ್ತಿದ್ದರು ಎಂದು ತೋರಿಸಲಾಗಿದೆ. ಚಿತ್ರದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದಕ್ಕೆ ನೆಟ್ಟಿಗರ ಗಮನ ಸೆಳೆಯುತ್ತಿದೆ. 

ತಮಿಳು ನಟ ಸೂರ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದ ತಕ್ಷಣವೇ ನಾಗಾರ್ಜುನ ಟ್ವೀಟ್ ಮಾಡಿದ್ದಾರೆ. 'ಮತ್ತೆ ನಿನ್ನನ್ನು ದೊಡ್ಡ ಪರದೆ ಮೇಲೆ ನೋಡುವುದಕ್ಕೆ ಸಂತೋಷವಾಗುತ್ತಿದೆ. ಆಲ್‌ ದಿ ಬೆಸ್ಟ್‌ ಟೀಂ,' ಎಂದಿದ್ದಾರೆ ನಾಗಾರ್ಜುನ. 

'ತುಂಬಾ ದಿನಗಳಿಂದ ಈ ಚಿತ್ರದ ಟೀಸರ್‌ ರಿಲೀಸ್‌ಗೆ ಕಾಯುತ್ತಿದ್ದೆವು. ಸಿನಿಮಾ ಮಿಸ್ ಮಾಡದೆ ನೋಡಲೇ ಬೇಕು. ಖಂಡಿತ ಶರ್ವಾನಂದ್‌ಗೆ ದೊಡ್ಡ ತಿರುವು ನೀಡುವ ಸಿನಿಮಾ ಇದಾಗಲಿದೆ. ಅಮಲಾ ಮೇಡಂ ಸೂಪರ್ ಯಂಗ್ ಆಗಿ ಕಾಣಿಸುತ್ತಿದ್ದಾರೆ. ನಾಗಾರ್ಜುನ ಸರ್ ಪತ್ನಿ ಜೊತೆ ಸಿನಿಮಾ ಮಾಡಬೇಕು ಅಂದ್ರೂ ಆಶ್ಚರ್ಯ ಇಲ್ಲ,' ಎಂದು ನೆಟ್ಟಿಗರು (Netizens Tweet) ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ತಂದೆ Koti Ramu ಬಗ್ಗೆ ಮಾತನಾಡುತ್ತಾ ಮಕ್ಕಳು, ಮಡದಿ ಮಾಲಾಶ್ರೀ ಭಾವುಕ!

ಡ್ರೀಮ್‌ ವಾರಿಯರ್‌ ಪಿಚರ್‌ (Dream Warrior Pictures) ಸಿನಿಮಾಣ ಮಾಡಿರುವ ಸಿನಿಮಾಗೆ ಶ್ರೀ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ತರುಣ್ ಭಾಸ್ಕರ್ ಡೈಲಾಗ್ ಬರೆದಿದ್ದಾರೆ. 

ನಟ ನಾಗಾರ್ಜುನ್ ಅವರ ಎರಡನೇ ಪತ್ನಿ ಅಮಲಾ ಬೆಂಗಾಲಿ Navy ಆಫೀಸರ್‌ ಪುತ್ರಿ. ತಾಯಿ Irish ಅವರಾಗಿರುವುದರಿಂದ ವಿದೇಶಿ ಟಚ್‌ ಕೂಡ ಇದೆ. ಚೆನ್ನೈನಲ್ಲಿ (Chennai) ಭರತನಾಟ್ಯ ಕಲಿತಿರುವ ಅಮಲಾ ಅವರು ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರಿಬ್ಬರಿಗೆ ಅಖಿಲ್ ಅಕ್ಕಿನೇನಿ (Akhil Akkineni) ಎಂಬ ಪುತ್ರನಿದ್ದಾನೆ, ಆತನೂ ಕೂಡ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡು ಮೂರ್ನಾಲ್ಕು ಸಿನಿಮಾ ಮಾಡಿದ್ದಾರೆ. ನಾಗ ಚೈತನ್ಯಗೆ (Naga Chaitanya) ಮಲ ತಾಯಿ ಆದರೂ, ಪ್ರೀತಿಗೆ ಯಾವ ರೀತಿನೂ ಕಡಿಮೆ ಮಾಡಿಲ್ಲ ಎಂದು ಅನೇಕ ಸಂದರ್ಶನದಲ್ಲಿ ಚೈತನ್ಯನೇ ಹೇಳಿದ್ದರು. 

1986ರಲ್ಲಿ ಮೈಥಿಲಿ ಎನ್ನೈ ಕಾತಲಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿ ಅಮಲಾ 30 ಸಿನಿಮಾಗಳಲ್ಲಿ ನಟಿಸಿದ್ದಾರೆ.  1991ರಲ್ಲಿ ಬಿಡುಗಡೆಯಾದ ಕರ್ಪೂರ ಮುಲ್ಲೈ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ಹೀಗಾಗಿ ಅಮಲಾ ಕಮ್‌ ಬ್ಯಾಕ್‌ನ ಕುಟುಂಬಸ್ಥರು ಮಾತ್ರವಲ್ಲ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಮೃತಿ ಮಂಧಾನ ನಂತರ ಖ್ಯಾತ ನಟಿಯ ಮದುವೆ ಕ್ಯಾನ್ಸಲ್? ಇನ್ಸ್ಟಾದಿಂದ ಫೋಟೋ ಡಿಲೀಟ್ ಮಾಡಿದ್ದಕ್ಕೆ ಡೌಟ್!
The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ