
ಸುಮಾರು 30 ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿರುವ ಪೃಧ್ವಿರಾಜ್ ಅವರ ಕಾರಿಗೆ ಹೈದರಾಬಾದ್‌ನ ಬಂಜಾರ್ ಹಿಲ್ಸ್ ಬಳಿ ಅಪಘಾತವಾಗಿದೆ. ಮೊಬೈಲ್ ಫೋನ್ ಆಫ್ ಆಗಿದ್ದ ಕಾರಣ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೇ ಸಿಕ್ಕಾಪಟ್ಟೆ ಗಾಬರಿಯಾಗಿದ್ದರು.
ಕರ್ನಾಟಕದಲ್ಲಿ ಅಪಘಾತ ತಡೆಗೆ ಕೈಗೊಂಡ ಕ್ರಮಕ್ಕೆ ಸಚಿವ ಗಡ್ಕರಿ ಪ್ರಶಂಸೆ
ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ:
'ಬಂಜಾರ ಹಿಲ್ಟ್ ಬಳಿ ಇರುವ ಕ್ಯಾನ್ಸರ್ ಆಸ್ಪತ್ರೆ ಬಳಿ ನನ್ನ ಕಾರು ಅಪಘಾತವಾಯ್ತು. ಎಸ್‌ಯುವಿ ಕಾರೊಂದು ನನ್ನ ಕಾರಿಗೆ ಬಂದು ಡಿಕ್ಕಿ ಹೊಡೆಯಿತು. ಸ್ಥಳೀಯ ಜನರು ಕಾರಿನ ಸುತ್ತ ಮುತ್ತಿಕೊಂಡ ಕಾರಣ ಮತ್ತಷ್ಟು ಆತಂಕ ಸೃಷ್ಟಿ ಮಾಡಿತ್ತು,' ಎಂದು ಬರೆದಿದ್ದಾರೆ.
ಅಪಘಾತವಾದ ನಂತರ ನಟ ಫೋನ್ ಆಫ್ ಮಾಡಿಕೊಂಡಿದ್ದ ಕಾರಣ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲ್ಲ.
ಕೆಲ ತಿಂಗಳ ಹಿಂದೆ ಸಣ್ಣ ಪುಟ್ಟ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪೃಧ್ವಿರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೋವಿಡ್19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. 'ನಾನು ಮೆಡಿಕಲ್ ಪರೀಕ್ಷೆ ಮಾಡಿಸಿಕೊಂಡೆ. ನೆಗೆಟಿವ್ ಎಂದು ತಿಳಿದುಬಂದಿತ್ತು. ಆದರೂ ವೈದ್ಯರು ಸಲಹೆಯಿಂದ ನಾನು 15 ದಿನಗಳ ಕಾಲ ಕ್ವಾರಂಟೈನ್ ಆಗಲು ನಿರ್ಧರಿಸಿದ್ದೀನಿ,' ಎಂದು ಹೇಳಿದ್ದರು.
ಕಾರಿಗೆ ಕಾರು ಡಿಕ್ಕಿ: ಕುಟುಂಬಸ್ಥರ ನಡುವೆ ಮಾರಾಮಾರಿ..!
ಪೃಧ್ವಿರಾಜ್ ಅಭಿಮಾನಿಗಳು ಗಾಬರಿಗೊಂಡು ನಟನ ಆರೋಗ್ಯದ ಬಗ್ಗೆ ಕಾಮೆಂಟ್ ಮೂಲಕ ವಿಚಾರಿಸಿಕೊಂಡಿದ್ದಾರೆ. ನಟನಿಗೆ ಏನೂ ಆಗಿರುವುದಿಲ್ಲ ಆದರೂ ಚೇತರಿಸಿಕೊಳ್ಳಲಿ. ಅವರ ಮೇಲೆ ಬಿದ್ದಿರೋ ಕೆಟ್ಟ ದೃಷ್ಟಿಗಳು ದೂರವಾಗಲಿ ಎಂದು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.