
ಕಾಲಿವುಡ್ ಸ್ಟಾರ್ ಬ್ರದರ್ಸ್ ಸೂರ್ಯ ಹಾಗೂ ಕಾರ್ತಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಇದಕ್ಕೆ ಕಾರಣವೇ ಕಾರ್ತಿ ತಮ್ಮ ಎರಡನೇ ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿರುವುದು. ಈ ವಿಚಾರವನ್ನು ಸ್ವತಃ ನಟನೇ ಟ್ಟಿಟರ್‌ನಲ್ಲಿ ರಿವೀಲ್ ಮಾಡಿದ್ದಾರೆ.
ಕಾರ್ತಿ ಟ್ಟೀಟ್:
'ಪ್ರೀತಿಯ ಗೆಳೆಯರೇ ಹಾಗೂ ಬಂಧುಗಳೇ, ನಾನು ಇಂದು ನನ್ನ ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡಿರುವೆ. ಜೀವನದಲ್ಲಿ ಮರೆಯಲಾದ ಈ ಅನುಭವವನ್ನು ಹಾಗೂ ಅದ್ಭುತವಾದ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ನರ್ಸ್‌ಗಳಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ನನ್ನ ಪುಟ್ಟ ಕಂದಮ್ಮನ ಮೇಲೆ ನಿಮ್ಮ ಆಶೀರ್ವಾದ ಹೀಗೇ ಇರಲಿ. ಥ್ಯಾಂಕ್ಸ್,' ಎಂದು ಕಾರ್ತಿ ಬರೆದಿದ್ದಾರೆ.
2011ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರ್ತಿ ಹಾಗೂ ರಂಜನಿ 2013ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಆಕೆಯನ್ನು ಉಮಾಯಾಲ್ ಎಂದು ನಾಮಕರಣ ಮಾಡಲಾಗಿತ್ತು. ಏಳು ವರ್ಷಗಳ ನಂತರ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಕಾರ್ತಿ ಅಭಿಮಾನಿಗಳು ಹಾಗೂ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.
ಚಿತ್ರರಂಗ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನೀಡಿದ ಕಾಲಿವುಡ್ ಬ್ರದರ್ಸ್!
ಸದ್ಯಕ್ಕೆ ಸುಲ್ತಾನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ಮಿಂಚುತ್ತಿರುವ ಕಾರ್ತಿ, ತಮ್ಮ ಮುಂದಿನ ಸಿನಿಮಾವನ್ನು ಮಣಿರತ್ನಂ ಜೊತೆ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. ಬಿಗ್ ಬಜೆಟ್ ಹೈ ಡ್ರಾಮ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಎಂದು ಹೆಸರು ರಿವೀಲ್ ಕೂಡ ಮಾಡಲಾಗಿದೆ. ಒಟ್ಟಿನಲ್ಲಿ ಕಾರ್ತಿ ಸದ್ಯಕ್ಕೆ ಪರ್ಸನಲ್ ಲೈಫ್ ಹಾಗೂ ಪ್ರೊಫೆಷನಲ್ ಲೈಫ್ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.