ಬಾಲಿವುಡ್ ಕಿಂಗ್ ಖಾನ್ ಶಾರೂಖ್‌ಗೆ ದಿಲ್ಲಿಯ ಹುಡುಗರು ಹೊಡೆದಿದ್ದೇಕೆ..?

By Suvarna NewsFirst Published Oct 20, 2020, 4:40 PM IST
Highlights

ಶಾರೂಖ್ ಖಾನ್‌ ಈಗ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಒಮ್ಮೆ ದಿಲ್ಲಿಯ ಹುಡುಗರ ಕೈಯಿಂದ ಪೆಟ್ಟು ತಿಂದಿದ್ದರಂತೆ. ಯಾಕೆ ಗೊತ್ತೆ?

ಅದು ಶಾರುಕ್ ಖಾನ್ ದಿಲ್ಲಿಯಲ್ಲಿ ಓತ್ಲಾ ಹೊಡೆಯುತ್ತಿದ್ದ ಸಮಯ. ಆಗ ಶಾರುಕ್‌ಗೆ ಒಬ್ಬಳು ಗರ್ಲ್‌ಫ್ರೆಂಡ್ ಕೂಡ ಇದ್ದಳು. ದಿಲ್ಲಿಯಲ್ಲಿ ಒಟ್ಟುಗೂಡಿ ಓಡಾಡುತ್ತಿದ್ದ ಅವರಿಬ್ಬರನ್ನು ನೋಡಿ ಅದೇ ಲೊಕ್ಯಾಲಿಟಿಯ ಕೆಲವು ಹುಡುಗರು ಶಾರುಕ್‌ನನ್ನು ತಡವಿಕೊಂಡರು.

ಈಕೆ ಯಾರು ಗೊತ್ತೇನೋ, ನಮ್ ಲೊಕ್ಯಾಲಿಟಿಯ ಹುಡುಗಿ. ನೀನು ಯಾರು ಆಕೆಯ ಹಿಂದೆ ಮುಂದೆ ಸುತ್ತಾಡೋಕೆ? ನಿನಗವಳು ಏನಾಗಬೇಕು ಎಂದು ದಬಾಯಿಸಿದರಂತೆ. ಶಾರುಕ್ ಖಾನ್‌ ತಬ್ಬಿಬ್ಬಾಗಿ, ಆಕೆ ನನ್ನ ಗರ್ಲ್‌ಫ್ರೆಂಡ್ ಆಗಬೇಕು ಅಂತ ಹೇಳಿಬಿಟ್ಟಿದ್ದಾರೆ. ಆಹುಡುಗರು ಇದರಿದ ರೇಗಿ, ಗರ್ಲ್‌ಫ್ರೆಂಡಂತೆ ಗರ್ಲ್‌ಫ್ರೆಂಡು, ಭಾಭಿ (ಅತ್ತಿಗೆ) ಅಂತ ಹೇಳು- ಎಂದು ದಬಾಯಿಸಿ ಶಾರುಕ್‌ಗೆ ನಾಲ್ಕು ತದುಕಿದರಂತೆ!

ಡಿವೋರ್ಸ್‌: ದೊಡ್ಡ ಮೊತ್ತದ ಜೀವನಾಂಶ ಪಡೆದ ಬಾಲಿವುಡ್‌ ನಟಿಯರು 

ಈ ಘಟನೆಯನ್ನು ಶಾರುಕ್‌, ಕಪಿಲ್‌ ಶೋದಲ್ಲಿ ರಂಜನೀಯವಾಗಿ ಹೇಳಿಕೊಂಡರು. ಈಗಲೂ ಶಾರುಕ್ ದಿಲ್ಲಿಗೆ ಹೋದರೆ, ಜೊತೆಯಲ್ಲಿ ಹೆಂಡತಿ ಗೌರಿ ಖಾನ್ ಇದ್ದರೆ, ಯಾರಾದರೂ ಇವರು ಯಾರು ಅಂತ ಕೇಳಿದರೆ, ಈಕೆ ನನ್ನ ಹೆಂಡತಿ ಅಂತ ಹೇಳಿಕೊಳ್ಳೋಕೆ ಭಯವಾಗುತ್ತೆ. ಬದಲಾಗಿ ಭಾಭಿ ಅಂತ ಹೇಳಿಕೊಳ್ತೀನಿ ಅಂತ ತಮ್ಮನ್ನೇ ತಮಾಷೆ ಮಾಡಿಕೊಂಡಿದ್ದಾರೆ ಶಾರುಕ್

ಮೇಘನಾ ಚೆಕ್‌ಅಪ್: ಇನ್ನೆರಡು ದಿನದಲ್ಲಿ ಡೆಲಿವರಿ ...

ಶಾರುಕ್ ಖಾನ್ ಹುಟ್ಟಿದ್ದು ದಿಲ್ಲಿಯಲ್ಲಿ. ಆದರೆ ಅವರು ತಮ್ಮ ಜೀವನದ ಆರಂಭಿಕ ಐದು ವರ್ಷಗಳನ್ನು ಕಳೆದದ್ದು ಕರ್ನಾಟಕದ ಮಂಗಳೂರಿನಲ್ಲಿ. ಇಲ್ಲಿ ಅವರ ತಾಯಿಯ ತಂದೆ ಇಫ್ತಿಕಾರ್ ಅಹ್ಮದ್, ಮಂಗಳೂರು ಬಂದರಿನಲ್ಲಿ ಇಂಜಿನಿಯರ್ ಆಗಿದ್ದರು. ಶಾರುಕ್ ಅವರ ತಂದೆಯ ತಂದೆಯ ಮೂಲ ಅಫಘಾನಿಸ್ತಾನ. ಶಾರುಕ್ ಅವರ ತಂದೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರ ಆಗಿದ್ದರು. ಖಾನ್ ಅಬ್ದುಲ್ ಗಫಾರ್ ಖಾನ್ ಮುಂತಾದವರ ಒಡನಾಡಿಯಾಗಿದ್ದರು. ತಾಯಿ ಹೈದರಾಬಾದಿನವಳು. ನೆಲೆಸಿದ್ದು ದಿಲ್ಲಿಯಲ್ಲಿ. ಹೀಗಾಗಿ ಶಾರುಕ್ ಅರ್ಧ ಪಠಾಣ, ಅರ್ಧ ಹೈದರಾಬಾದಿ. ಮಧ್ಯಮ ವರ್ಗದ ಕುಟುಂಬ. ಸೇಂಟ್ ಕೊಲಂಬಿಯಾ ಶಾಲೆಯಲ್ಲಿ ಶಾರುಕ್ ಓದಿನಲ್ಲೂ ಚುರುಕು, ಕ್ರೀಡೆಗಳಲ್ಲೂ ಶಾನೆ ಚುರುಕಾಗಿದ್ದರು. ಸ್ವಾರ್ಡ್ ಆಫ್‌ ಆನರ್‌ ಗೌರವ ಅವರಿಗೆ ಸಿಕ್ಕಿತ್ತು. ಕ್ರೀಡೆಯಲ್ಲೇ ಮುಂದುವರಿಯಬೇಕು ಎಂಬ ಮನಸ್ಸಿತ್ತು ಅವರಿಗೆ. ಆದರೆ ಭುಜಕ್ಕೆ ಬಿದ್ದ ಏಟಿನಿಂದಾಗಿ ಅದು ಈಡೇರಲಿಲ್ಲ. ಅದೇ ವೇಳೆಗೆ ಶಾರುಕ್ ನಾಟಕಗಳಲ್ಲೂ ನಟಿಸುತ್ತಿದ್ದರು. ಆದರೆ ಅದನ್ನು ಕೆರಿಯರ್ ಆಗಿ ಬೆಳೆಸಿಕೊಳ್ಳುವ ಬಗ್ಗೆ ಯೋಚಿಸಿರಲಿಲ್ಲ. 

ಸತತ 20 ವರ್ಷ ಪ್ರದರ್ಶನ ಕಂಡ ದಿಲ್‌ವಾಲೆ ದುಲ್ಹಾನಿಯಾ ಲೇಜಾಯೇಂಗೆ 

ಅದೇ ವೇಳೆಗೆ ಶಾರುಕ್‌ಗೆ ಗೌರಿಯ ಪರಿಚಯವೂ ಆಯ್ತು. ಈಕೆ ಪಂಜಾಭ್‌ನ ಹಿಂದೂ ಕುಟುಂಬವೊಂದರ ಹುಡುಗಿ. ಪರಿಚಯ ಪ್ರೇಮಕ್ಕೆ ತಿರುಗಿತು. ಆರು ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ಸುತ್ತಾಡಿದರು. ಪ್ರೇಮದ ಸವಿ ಉಂಡರು. ನಂತರ ಮದುವೆಯಾದರು. ಮದುವೆಯಾದದ್ದೂ ಹಿಂದೂ ಸಂಪ್ರದಾಯದಂತೆಯೇ. ಅದು ಗೌರಿಯ ಇಚ್ಛೆಯಂತೆ. ಅಷ್ಟು ಹೊತ್ತಿಗೆ ಒಂದೆರಡು ಫಿಲಂಗಳಲ್ಲಿ ಶಾರುಕ್ ಸಣ್ಣ ರೋಲ್‌ಗಳಲ್ಲಿ ನಟಿಸಿದ್ದ. ಕೆಲವು ಕಿರುತೆರೆ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದ.

1991ರಲ್ಲಿ ಶಾರುಕ್ನ ತಂದೆ ಮತ್ತು ತಾಯಿ ಮೃತಪಟ್ಟರು. ಶಾರುಕ್‌ನನ್ನು ಶೋಕ ಕವಿದುಕೊಂಡಿತು. ಅವರ ಮೇಲೆ ಶಾರುಕ್ ತುಂಬಾ ಪ್ರೀತಿಯಿಟ್ಟಿದ್ದ. ಈ ದುಃಖವನ್ನು ನಿವಾರಿಸಿಕೊಳ್ಳಲು ಹೆಚ್ಚು ಹೆಚ್ಚಾಗಿ ಫಿಲಂ ಆಫರ್‌ಗಳನ್ನು ಒಪ್ಪಿಕೊಂಡ. ಆದರೆ ದಿಲ್ಲಿಯಲ್ಲಿದ್ದುಕೊಂಡು ಬಾಲಿವುಡ್‌ನಲ್ಲಿ ನಟಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಶಾರುಕ್‌ ಕುಟುಂಬ ಮುಂಬಯಿಗೆ ಶಿಫ್ಟ್ ಆಯಿತು. 1992ರಲ್ಲಿ ಬಂದ ಡರ್ ಮತ್ತು ಬಾಜಿಗರ್ ಫಿಲಂಗಳು ಶಾರುಕ್‌ಗೆ ಆಂಟಿ ಹೀರೋ ರೋಲ್‌ನಲ್ಲಿ ಭಾರಿ ಹೆಸರು ತಂದುಕೊಟ್ಟವು. ನಂತರ ಶಾರುಕ್‌ ಹಿಂದಿರುಗಿ ನೋಡಲೇ ಇಲ್ಲ. 

click me!