
ಟಾಲಿವುಡ್ ಚಿತ್ರರಂಗದ ಸಿರಿವಂತ ನಟ ಹಾಗೂ ಹೃದಯಶಾಲಿ ಪ್ರಭಾಸ್ ತನ್ನ ಪರ್ಸನಲ್ ಜಿಮ್ ಟ್ರೈನರ್ ಲಕ್ಷ್ಮಣ್ ರೆಡ್ಡಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಪ್ರಭಾಸ್ ಜೊತೆ ನಟನೆ: ಅಡ್ವಾನ್ಸ್ ಚೆಕ್ ನಿರಾಕರಿಸಿದ ದೀಪಿಕಾ!
ತೆರೆ ಮೇಲೆ ಮಿಂಚಿ ಪ್ರತಿ ಪ್ರೇಕ್ಷಕನ ಪ್ರೀತಿ ಪಡೆದುಕೊಳ್ಳುವ ಪ್ರತಿಯೊಬ್ಬ ನಟನ ಫಿಟ್ನೆಸ್ ಹಿಂದೆ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಪ್ರಭಾಸ್ ಫಿಟ್ನೆಸ್ ಹಿಂದಿರುವ ಆ ಶಕ್ತಿ ಎಂದರೆ ಲಕ್ಷ್ಮಣ್ ರೆಡ್ಡಿ . ಈ ಕಾರಣಕ್ಕೆ ಏನಾದರೂ ಗಿಫ್ಟ್ ನೀಡಲೇಬೇಕು ಎಂದು ಕಾರು ಕೊಟ್ಟಿದ್ದಾರೆ ಎನ್ನಲಾಗಿದೆ.
ಬೂದು ಬಣ್ಣದ ರೇಂಜ್ ರೋವರ್ ಕಾರು ಸುಮಾರು 73 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಇಷ್ಟೊಂದು ದುಬಾರಿ ಕಾರು ನೀಡಿರುವುದಕ್ಕೆ ಅಭಿಮಾನಿಗಳು ಅಚ್ಚರಿಯಾಗಿದ್ದಾರೆ.
ಆದಿಪುರುಷ್‌ನಲ್ಲಿ ಪ್ರಭಾಸ್‌ಗೆದುರಾಗಿ ಸೈಫ್ ಅಲಿ ಖಾನ್..!
'ಸಾಹೋ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಪ್ರಭಾಸ್ 'ರಾಧೆ ಶ್ಯಾಮ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಅಲ್ಲದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ 21ನೇ ಸಿನಿಮಾಗೆ ಸಹಿ ಮಾಡಿದ್ದಾರೆ. ವರ್ಷ ವಿಡೀ ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಭಾಸ್ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವುದು ಇದೇ ಲಕ್ಷ್ಮಣ್ ರೆಡ್ಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.