
ಇತ್ತೀಚೆಗಷ್ಟೇ ಟ್ವಿಟರ್‌ಗೆ ಬಂದು ಭಾರೀ ಫಾಲೋವರ್ಸ್‌ಗಳನ್ನು ಗಳಿಸಿದ ನಟಿ ಕಂಗನಾ ತಮ್ಮ ಟ್ವೀಟ್ ಮೂಲಕ ಪದೇ ಪದೇ ಚರ್ಚೆಗೊಳಗಾಗುತ್ತಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ನಂತರ ನಟಿ ಬಾಲಿವುಡ್ ನೆಪೊಟಿಸಂ, ಡ್ರಗ್ಸ್ ಜಾಲದ ಬಗ್ಗೆ ಮಾತನಾಡುತ್ತಲೇ ಇದ್ದಾರೆ.
ತಮ್ಮ ಟ್ವೀಟ್‌ಗಳ ಮೂಲಕವೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಹಾಗೂ ಸಿಟಿ ಪೊಲೀಸ್ ಬಗ್ಗೆ ನೀಡಿದ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಕಂಗನಾಳ ಟ್ವೀಟ್‌ನಿಂದ ರೊಚ್ಚಿಗೆದ್ದ ಜನ ಆಕೆಯ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಜನ ಕಂಗನಾ ಪೋಸ್ಟರ್ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಸಂಬಿತ್ ಪಾತ್ರಾ ಅವರು ಪ್ರತಿಕ್ರಿಯಿಸಿದ್ದಾರೆ.
'ಮುಂಬೈಗೆ ಬಂದಿಳಿಯುತ್ತಿದ್ದೇನೆ, ಧಮ್ ಇದ್ರೆ ತಡೀರಿ'
ಸಂಬಿತ್ ಪಾತ್ರ ವಿಡಿಯೋ ಶೇರ್ ಮಾಡಿ ಶಿವ ಸೇನಾವನ್ನು ನಮೂಸಿದ್ದಾರೆ. ಸುಶಾಂತ್ ಹಾಗೂ ಸಾಧುಗಳ ಕೊಲೆಯ ನಂತರ ನನ್ನ ಅಭಿಪ್ರಾಯಕ್ಕಾಗಿ ನನ್ನ ಪೋಸ್ಟರ್‌ಗಳಿಗೆ ಚಪ್ಪಲಿಯಲ್ಲಿ ಹೊಡೆಯಲಾಗುತ್ತಿದೆ. ಮುಂಬೈ ರಕ್ತಕ್ಕೆ ಅಡಿಕ್ಟ್ ಆಗಿರುವಂತಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಶಿವಸೇನಾದ ಮಹಿಳಾ ಶಾಖೆ ಕಂಗನಾಳೆದುರಾಗಿ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರು ಕಂಗನಾ ಪೋಸ್ಟರ್‌ಗೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ ಸಂಬಿತ್ ಪಾತ್ರಾ, ನೀವು ನೋಡುತ್ತಿದ್ದೀರಾ ಬಾಲಾಸಹೇಬ್, ಇದು ಶಿವಸೇನೆಯ ಪರಿಸ್ಥಿತಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.