
ತೆಲುಗು ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಕುಟುಂಬದಿಂದ ನಾಯಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವುದು ಸಹೋದರ ನಾಗ ಬಾಬು (Naga Babu) ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಮಾತ್ರವೇ. ವೆಬ್ ಸೀರಿಸ್ (Web series) ಮಾಡುವ ಮೂಲಕ ತಮ್ಮ ಅರಂಭದಲ್ಲೇ ತಮ್ಮ ನಿರ್ದೇಶಕ ಸಾಮರ್ಥ್ಯ ತೋರಿಸಿದ ನಟಿ ಸಿನಿಮಾದಲ್ಲಿ ಮತ್ತು ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ನಾನ್ ಸ್ಟಾಪ್ ಫೋಟೋ ಹಂಚಿಕೊಂಡು ತಮ್ಮ ಪ್ರಾಜೆಕ್ಟ್‌ಗಳ ಬಗ್ಗೆ ಅಪ್ಡೇಟ್ ನೀಡುತ್ತಿದ್ದ ಚೆಲುವೆ ಇದ್ದಕ್ಕಿದ್ದಂತೆ ಖಾತೆ ಡಿಲೀಟ್ ಮಾಡಿರುವುದು ಎಲ್ಲರಿಗೂ ಶಾಕ್ ತಂದುಕೊಟ್ಟಿದೆ.
ಹೌದು! ನಿಹಾರಿಕಾ ಇನ್‌ಸ್ಟಾಗ್ರಾಂನಲ್ಲಿ (Instagram) ವೆರಿಫೈಡ್ ಖಾತೆಯಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದರು. ಕೆಲವು ನೆಟ್ಟಿಗರು ಹೇಳುವ ಮಾಹಿತಿ ಪ್ರಕಾರ ಯಾವುದೋ ಫನ್ನಿ ವಿಡಿಯೋ ಅಪ್ಲೋಡ್ ಮಾಡಿದ್ದರಂತೆ ಅದು ಟ್ರೋಲ್ (trolls) ಆಗಲು ಶುರುವಾಗುತ್ತಿದ್ದಂತೆ ತಮ್ಮ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಏನು ಅಪ್ಲೋಡ್ ಮಾಡಿದ್ದರು ಎಂಬುದಾಗಿ ಸ್ಪಷ್ಟ ಮಾಹಿತಿ ಇಲ್ಲವಾದರೂ ನಿಹಾರಿಕಾ ಟ್ರೋಲ್‌ಗಳಿಗೆ ಹೆದರಿಕೊಂಡಿರುವುದು ಸತ್ಯವೇ.
ನಿಹಾರಿಕಾ ಟ್ವಿಟರ್ (Twitter) ಖಾತೆ ಇನ್ನೂ ಚಾಲನೆಯಲ್ಲಿದ್ದು ಕೊನೆಯ ಪೋಸ್ಟ್ ಮಾಡಿರುವುದು ಡಿಸೆಂಬರ್‌ನಲ್ಲಿ. ನಿಹಾರಿಕಾ ಪೋಷಕರು, ಸಹೋದರಿಯರು ಮತ್ತು ಪತಿಯ ಸೋಷಿಯಲ್ ಮೀಡಿಯಾ ಖಾತೆ ಆಕ್ಟೀವ್ ಆಗಿದೆ. ಇದ್ದಕ್ಕಿದ್ದಂತೆ ನಿಹಾರಿಕಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದಾಗಿ ಮಾತ್ರ ತಿಳಿದು ಬಂದಿಲ್ಲ.
ನಿಹಾರಿಕಾ ಮದುವೆ:
ಟಾಲಿವುಡ್ ಸಿರಿವಂತ ಕುಟುಂಬದ ನಟಿ ಯಾರನ್ನ ಮದುವೆಯಾಗಲಿದ್ದಾರೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದರು. ಅರೇಂಜ್ಡ್ ಮ್ಯಾರೇಜ್ ಆಗುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ಕೊಟ್ಟರು. ಗುಂಟೂರಿನ ಐಜಿಪಿ (Gunturu IGP) ಜೆ ಪ್ರಭಾಕರ್ ರಾವ್ ಅವರ ಪುತ್ರ ಉದ್ಯಮಿ ಸ್ಟ್ರಾಟಜಿಸ್ಟ್ ಚೈತನ್ಯ ಅವರನ್ನು ನಿಹಾರಿಕಾ ರಾಜಸ್ಥಾನದಲ್ಲಿ (Rajasthan) ಅದ್ಧೂರಿಯಾಗಿ ಮದುವೆಯಾಗಿದ್ದರು. 2021ರಲ್ಲಿ ನಡೆದ ಈ ಮದುವೆ ಒಂದು ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದು ಸ್ಟಾರ್ ನಟ, ನಟಿಯರು ಭಾಗಿಯಾಗಿದ್ದರು. ನಿಹಾರಿಕಾ (Niharika Konidela) ಮತ್ತು ಚೈತನ್ಯ ಮದುವೆ ವಿಡಿಯೋಗಳನ್ನು ತಂದೆ ನಾಗ ಬಾಬು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ (Youtube Channel) ಅಪ್ಲೋಡ್ ಮಾಡಿದ್ದಾರೆ. ಮನೆಯಲ್ಲಿ ನಡೆದ ಅರಿಶಿಣ ಶಾಸ್ತ್ರ, ಪ್ರಯಾಣ ಮಾಡುತ್ತಿರುವುದು, ಆಗಮಿಸಿದ ಅತಿಥಿಗಳಿಗೆ ರಿಟರ್ನ್ ಗಿಫ್ಟ್, ಸಂಗೀತ್ (Sangeeth), ಆರತಕ್ಷತೆ ಮತ್ತು ಮುಹೂರ್ತವನ್ನು ಈ ಸಂಪೂರ್ಣವಾಗಿ ಈ ವಿಡಿಯೋಗಳಲ್ಲಿ ತೋರಿಸಲಾಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.
ಕೆಲವು ದಿನಗಳ ಹಿಂದೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಿಹಾರಿಕಾ ತಮ್ಮ ಮದುವೆ ಲೈಫ್ ಮತ್ತು ಸಿನಿ ಜರ್ನಿ ಹೇಗಿದೆ ಎಂದು ಹಂಚಿಕೊಂಡಿದ್ದಾರೆ. ಹೀಗೆ ಮಾತನಾಡುತ್ತಿದ್ದ ನಿಹಾರಿಕಾ, ಚೈತನ್ಯ ಅವರಿಗೆ ನಾನು ಸಿನಿಮಾದಲ್ಲಿ ನಟಿಸುವುದು ಇಷ್ಟವಿಲ್ಲ. ಹೀಗಾಗಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟೆ, ಎಂದಿದ್ದಾರಂತೆ. 'ಸಮಂತಾ ಪ್ರಭು (Samantha) ಅವರನ್ನು ಉದಾಹರಣೆಯಾಗಿ ಕೊಟ್ಟು, ಮದುವೆ ಆದ ನಂತರವೂ ಆಕೆಯ ಕ್ರೇಜ್ ಕಡಿಮೆ ಆಗಲಿಲ್ಲ, ಇನ್ನು ಮದುವೆ ಆದ ನಂತರವೇ ಡಿಮ್ಯಾಂಡ್ ಹೆಚ್ಚಾಗಿದ್ದು. ಮದುವೆ ಆದ ನಂತರವೂ ಸಿನಿಮಾ ಮಾಡಿದ್ದಾರೆ ಗ್ರೇಟ್,' ಎಂದು ಮೆಗಾ ಪುತ್ರಿ ಹೇಳಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.